ನವದೆಹಲಿ:ಶಿಕ್ಷಣ ವಿದ್ಯಾರ್ಥಿಗಳು ಅರಿವು ಮತ್ತು ಬೌದ್ಧಿಕ ಸಾಮರ್ಥ್ಯ ಪಡೆಯಲು ಸಹಾಯ ಮಾಡುತ್ತದೆ. ಕಲಿಯಲು ಬರುವ ಮಕ್ಕಳು ವೈವಿಧ್ಯಮಯ ಸಾಮಾಜಿಕ - ಆರ್ಥಿಕ ಹಿನ್ನೆಲೆ, ವಿವಿಧ ಭಾಷೆ, ಬಹು ಸಂಸ್ಕೃತಿಯನ್ನು ಹೊಂದಿರುತ್ತಾರೆ. ಹಾಗಾಗಿ ತರಗತಿಯಲ್ಲಿ ಸಾಂಪ್ರದಾಯಿಕ ಶೈಕ್ಷಣಿಕ ಕೊಡುವ ಜೊತೆಗೆ ಸಾಮಾಜಿಕ - ಭಾವನಾತ್ಮಕ ಕಲಿಕೆಯನ್ನು ನೀಡುವುದು ಒಳ್ಳೆಯದು. ಇಲ್ಲದಿದ್ದರೆ, ಅವರ ಶಿಕ್ಷಣವು ಅಪೂರ್ಣವಾಗುತ್ತದೆ. ಅಲ್ಲದೇ ಭವಿಷ್ಯದಲ್ಲಿ ಬರುವ ನೈಜ ಸವಾಲುಗಳನ್ನು ಅವರು ಎದುರಿಸಲು ಸಾಧ್ಯವಾಗುವುದಿಲ್ಲ.
ಇದೆಲ್ಲದರ ನಂತರ, ವಿದ್ಯಾರ್ಥಿಗಳು ವಯಸ್ಕರಾಗಿ ಬೆಳೆದಾಗ ಅಂತಿಮವಾಗಿ ಸಾಮಾಜಿಕ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ವೇಗವಾಗಿ ಬದಲಾಗುತ್ತಿರುವ ಕಲಿಕೆ, ವೃತ್ತಿ ಜೀವನದಲ್ಲಿ ಈ ಸಾಮಾಜಿಕ - ಭಾವನಾತ್ಮಕ ಕಲಿಕೆ ಅಗತ್ಯವಾಗಿದೆ. VUCA ಎಂದು ಕರೆಯಲ್ಪಡುವ ಅಂದರೆ, ಚಂಚಲತೆ, ಅನಿಶ್ಚಿತತೆ, ಸಂಕೀರ್ಣತೆ ಮತ್ತು ಅಸ್ಪಷ್ಟತೆ ಪ್ರಪಂಚವು ಅವರಿಗೆ ಕಾಯುತ್ತಿದೆ.
ಸಾಮಾಜಿಕ ಭಾವನಾತ್ಮಕ ಕಲಿಕೆ ಎಂದರೇನು?:ನಾವು ಸಾಮಾಜಿಕ - ಭಾವನಾತ್ಮಕ ಕೌಶಲ್ಯಗಳನ್ನು ಹೀಗೆ ವ್ಯಾಖ್ಯಾನಿಸಬಹುದು. ಇತರ ಜನರೊಂದಿಗೆ ಸಂವಹನ ನಡೆಸಿದಾಗ ನಿರ್ವಹಿಸುವ ಮತ್ತು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಉಪಯುಕ್ತವಾದ ಕಲಿತ ನಡವಳಿಕೆಗಳು, ವರ್ತನೆಗಳು, ಅಭಿಪ್ರಾಯಗಳು ಮತ್ತು ನಮ್ಮ ಹಕ್ಕುಗಳನ್ನು ರಕ್ಷಿಸುವುದೇ ಆಗಿದೆ. ಉದಾಹರಣೆಗೆ, ಅವುಗಳಲ್ಲಿ ನಾವು ಸ್ವಯಂ ಜ್ಞಾನ, ಸ್ವಯಂ ನಿಯಂತ್ರಣ, ಪರಾನುಭೂತಿ ಅಥವಾ ಇತರರೊಂದಿಗೆ ಸಹಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಸಾಮಾಜಿಕ ಭಾವನಾತ್ಮಕ ಕಲಿಕೆಯು ಶಾಲಾ ಪಠ್ಯಕ್ರಮದ ಭಾಗವಾಗಿ ಏಕೆ ರೂಪುಗೊಳ್ಳಬೇಕು?: ಇದು ನಮ್ಮನ್ನು ಸಂಪೂರ್ಣ, ಸ್ವಾವಲಂಬಿ ಮತ್ತು ಸಾಮಾಜಿಕ - ಸೂಕ್ಷ್ಮ ವ್ಯಕ್ತಿಯನ್ನಾಗಿ ಮಾಡುತ್ತದೆ. ಸಾಮಾಜಿಕ - ಭಾವನಾತ್ಮಕ ಕಲಿಕೆಯು ಬೌದ್ಧಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮರ್ಥ ವಿದ್ಯಾರ್ಥಿಯನ್ನು ಸಾಮಾಜಿಕವಾಗಿ ಜವಾಬ್ದಾರಿಯುತ ಮತ್ತು ಸ್ವಾವಲಂಬಿ ವ್ಯಕ್ತಿಯಾಗಿ ಪರಿವರ್ತಿಸುತ್ತದೆ. ಸಾಮಾಜಿಕ ಮತ್ತು ಪರಸ್ಪರ ಕೌಶಲ್ಯಗಳು ದೈನಂದಿನ, ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳನ್ನು ಉತ್ತಮವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.
ಸಾಮಾಜಿಕ ಸಾಂಸ್ಕೃತಿಕ ಪರಿಸರವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ:ವಿದ್ಯಾರ್ಥಿಯು ತನ್ನ ಇಚ್ಛೆಯ ಯಾವುದೇ ಅನ್ವೇಷಣೆಯಲ್ಲಿ ಯಶಸ್ವಿಯಾಗಲು, ಅವನು ತನ್ನ ಸುತ್ತಮುತ್ತಲಿನ ಜನರನ್ನು ಸಂಪೂರ್ಣವಾಗಿ ಗ್ರಹಿಸಬೇಕು ಮತ್ತು ಪ್ರಶಂಸಿಸಬೇಕು. ಶಾಲೆ, ನಾವು ವಾಸಿಸುವ ಸುತ್ತಮುತ್ತಲ ನೆರೆಹೊರೆಯವರು ಅಥವಾ ಕೆಲಸದ ಸ್ಥಳದ ಬಗ್ಗೆ ತಿಳಿದಿರುವುದು ಉತ್ತಮ. ಆಗ ನಾವು ಉತ್ತಮವಾಗಿ ಬದುಕಲು ಸಾಧ್ಯವಾಗುತ್ತದೆ.