ಇಂದು ಜಗತ್ತಿನಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿದ್ದು ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಕಾಳಜಿ ವಿಷಯ ಆಗಿದೆ. ಈ ನಿಟ್ಟಿನಲ್ಲಿ ಪೂರ್ವ ಮಧುಮೇಹವೂ ಒಂದಾಗಿದೆ. ಇದೇ ಕಾರಣಕ್ಕೆ ಆಗಸ್ಟ್ 14 ರಂದು ವಿಶ್ವ ಪೂರ್ವ ಮಧುಮೇಹ ದಿನವನ್ನು ಆಚರಿಸುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸಲಾಗುವುದು. ಪೂರ್ವ ಮಧುಮೇಹ ಪರಿಸ್ಥಿತಿ ಎಂಬುದು ಟೈಪ್ 2 ಮಧುಮೇಹ ಪತ್ತೆಗೆ ಮುಂಚಿನ ಪರಿಸ್ಥಿತಿಯಾಗಿದ್ದು, ಈ ವೇಳೆ, ರಕ್ತದ ಸಕ್ಕರೆ ಮಟ್ಟ ಅಧಿಕಕ್ಕಿಂತ ಸಾಮಾನ್ಯವಾಗಿರುತ್ತದೆ. ವಿಶ್ವದಾದ್ಯಂತ 3ರಲ್ಲಿ 1 ವಯಸ್ಕರು ಪೂರ್ವ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಅವರಲ್ಲಿ ಟೈಪ್ 2 ಮಧುಮೇಹ ಅಭಿವೃದ್ಧಿ ಅಪಾಯದ ಜೊತೆಗೆ ಹೃದಯ ರೋಗ ಮತ್ತು ಇತರ ಆರೋಗ್ಯ ಸಮಸ್ಯೆಗಳು ಎದುರಾಗಲಿದೆ.
ಆಗಸ್ಟ್ 14 ಯಾಕೆ?: 2021ರಲ್ಲಿ ಆಗಸ್ಟ್ 14 ಅನ್ನು ಪೂರ್ವ ಮಧುಮೇಹ ದಿನವಾಗಿ ಆಚರಿಸಲಾಯಿತು. ಈ ದಿನದ ಬಳಿಕ ಸರಿಯಾಗಿ 90 ದಿನಕ್ಕೆ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುವುದು. ಅಂದರೆ ನವೆಂಬರ್ 14 ವಿಶ್ವ ಮಧುಮೇಹ ದಿನವಾಗಿದ್ದು, ಈ ಮೂಲಕ 90 ದಿನಗಳಲ್ಲಿ ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಆರಂಭಿಕ ಹಂತದ ಮಧುಮೇಹವನ್ನು ತಪ್ಪಿಸಬಹುದಾಗಿದೆ.
ಪೂರ್ವ ಮಧುಮೇಹದ ಲಕ್ಷಣ
- ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ
- ಚರ್ಮ ಕಿತ್ತು ಬರುವುದು
- ಕಣ್ಣಿನ ದೃಷ್ಟಿ ದುರ್ಬಲ
- ದೇಹ ಸದ ಬಳಲಿದಂತೆ ಅನುಭವ
- ಪಾದದಲ್ಲಿ ಸದಾ ನೋವು
- ರಕ್ತದೊತ್ತಡ ದಿಢೀರ್ ಏರಿಕೆ
- ಕಡಿಮೆ ಶಕ್ತಿ
ಪೂರ್ವ ಮಧುಮೇಹಕ್ಕೆ ಕಾರಣ
- ಸರಿಯಾದ ನಿದ್ದೆ ಕೊರತೆ
- ಜಢ ಜೀವನಶೈಲಿ
- ಮದ್ಯಪಾನ ಮತ್ತು ಧೂಮಪಾನ
- ಅಸಮತೋಲಿತ ಆಹಾರ ಪದ್ಧತಿ
- ದಿಢೀರ್ ತೂಕ ಹೆಚ್ಚಳ
ಪೂರ್ವ ಮಧುಮೇಹ ತಡೆಯುವ ದಾರಿ
- ಆರೋಗ್ಯಯುತ ಆಹಾರ ಸೇವನೆ
- ಹೆಚ್ಚು ಕ್ರಿಯಾಶೀಲರಾಗುವುದು
- ಅಧಿಕ ತೂಕ ನಷ್ಟ
- ಧೂಮಪಾನ ನಿಲ್ಲಿಸುವುದು
- ಅಗತ್ಯ ಔಷಧಗಳ ಸೇವನೆ
ಪೂರ್ವ ಮಧುಮೇಹವನ್ನು ಆರಂಭಿಕ ಹಂತದಲ್ಲಿ ಅಗತ್ಯ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಇದರ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಯಾವಾಗಲೂ ಸಮಸ್ಯೆಗಳನ್ನು ತಡೆಗಟ್ಟುವಿಕೆ ಅಗತ್ಯವಾಗಿರುತ್ತದೆ. ಸರ್ಕಾರವೂ ಕೂಡ ಈ ಪೂರ್ವ ಮಧುಮೇಹ ಆರೋಗ್ಯ ಬಿಕ್ಕಟ್ಟಿನ ಸಮಸ್ಯೆ ಎಂಬುದನ್ನು ಪರಿಗಣಿಸಿದ್ದು, ಈ ಕುರಿತು ತಿಳಿ ಹೇಳಬೇಕು ಎಂದು ಪರಿಗಣಿಸಿದೆ. ಈ ಸಂಬಂಧ ಜನರಲ್ಲಿ ಆರೋಗ್ಯಯುತ ಜೀವನಶೈಲಿ ಪರಿಸರ ಸೃಷ್ಟಿಗೆ ನಿಯಮಗಳನ್ನು ಅಭಿವೃದ್ಧಿ ಪಡಿಸಿದೆ. ಇದಕ್ಕಾಗಿ ಸಕ್ಕರೆ ಮೇಲೆ ತೆರಿಗೆ, ಪೋಷಕಾಂಶ ಆಹಾರ ಲಭ್ಯತೆ ಹೆಚ್ಚಿಸುವುದು, ಸಮುದಾಯಿಕ ದೈಹಿಕ ಚಟುವಟಿಕೆ ಹೆಚ್ಚಿಸುವ ಅವಕಾಶವನ್ನು ರೂಪಿಸಿದೆ.
ಆರೋಗ್ಯ ಸಂಘಟನೆಗಳು, ಎನ್ಜಿಒ ಮತ್ತು ಜಗತ್ತಿನಲ್ಲಿರುವ ವೈದ್ಯಕೀಯ ವೃತ್ತಿಪರರು ಕೂಡ ಪೂರ್ವ ಮಧುಮೇಹ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಕಾರ್ಯಕ್ರಮ, ಸೆಮಿನಾರ್ ಮತ್ತು ಆನ್ಲೈನ್ ಅಭಿಯಾನಗಳನ್ನು ಸಂಘಟಿಸುವ ಮೂಲಕ ಇದರ ಪೂರ್ವ ಪತ್ತೆ ಮತ್ತು ತಡೆಗಟ್ಟುವಿಕೆ ಕುರಿತು ಶಿಕ್ಷಣ ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಆರೋಗ್ಯಯುತ ಆಯ್ಕೆ ಕುರಿತು ಮಾರ್ಗ ದರ್ಶನ ನೀಡುವ ಕೊತೆಗೆ ಈ ಸಂಬಂಧ ಪತ್ತೆ ಮಾಡುವ ಸಾಧನಗಳನ್ನು ನೀಡಲಾಗುತ್ತಿದೆ,
ಈ ವರ್ಷದ ವಿಶ್ವ ಪೂರ್ವ ಮಧುಮೇಹ ದಿನದ ಘೋಷವಾಕ್ಯ, 'ತ್ವರಿತ ಕಾರ್ಯಾಚರಣೆ, ಮಧುಮೇಹ ತಡೆ' (Act Early, Prevent Diabetes) ಆಗಿದೆ. ಈ ಮೂಲಕ ಪ್ರತಿಯೊಬ್ಬರಲ್ಲೂ ಟೈಪ್ 2 ಮಧುಮೇಹಕ್ಕೆ ತುತ್ತಾಗದಂತೆ ಅವರಲ್ಲಿ ಆರೋಗ್ಯಯುತ ಜೀವನಶೈಲಿ ಬದಲಾವಣೆಗೆ ಉತ್ತೇಜಿಸಿದೆ. ಈ ಬದಲಾವಣೆಯಲ್ಲಿ ಆರೋಗ್ಯಯುತ ಆಹಾರ ಪದ್ಧತಿ ಅಳವಡಿಸಿ, ದೈಹಿಕ ಚಟುವಟಿಕೆ ಹೆಚ್ಚಿಸುವುದು, ಒತ್ತಡ ನಿರ್ವಹಣೆ ಮತ್ತು ನಿಯಮಿತ ಚೆಕ್ ಅಪ್ ನಡೆಸುವ ಮೂಲಕ ರಕ್ತದ ಸಕ್ಕರೆ ಮಟ್ಟ ನಿರ್ವಹಣೆಗೆ ಒತ್ತು ನೀಡಲಾಗಿದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಮಧುಮೇಹ; ಆಹಾರ ಪದ್ಧತಿಯ ಬಗ್ಗೆ ಇರಲಿ ಗಮನ