ಲೈಂಗಿಕತೆ ಎಂಬುದೊಂದು ನೈಸರ್ಗಿಕ ಕ್ರಿಯೆ. ಇದನ್ನು ವಯಸ್ಕರು ಬಯಸುತ್ತಾರೆ. ಆದರೆ, ಇದಕ್ಕೂ ಮುನ್ನ ಕೆಲವು ಆರೋಗ್ಯಕರ ಕ್ರಮಗಳನ್ನು ಅನುಸರಿಸುವುದು ಬಹಳ ಸೂಕ್ತ. ಇಲ್ಲದಿದ್ದರೆ ಹಲವಾರು ಸೋಂಕುಗಳು ಹರಡಬಹುದು. ಈ ದಿನ ನಿಮಗೆ ಇಂತಹದ್ದೇ ಒಂದು ಸೋಂಕಿನ ಬಗ್ಗೆ ತಿಳಿಸಿಕೊಡುತ್ತೇವೆ.
ಜನನಾಂಗದ ಹರ್ಪಿಸ್ ಒಂದು ಲೈಂಗಿಕವಾಗಿ ಹರಡುವ ರೋಗ (STD). ಇದನ್ನು ಗುಣಪಡಿಸಲು ಯಾವುದೇ ಚಿಕಿತ್ಸೆಯಿಲ್ಲ. ಆದರೆ, ಅದರ ಲಕ್ಷಣಗಳನ್ನು ಕೆಲವು ಔಷಧಿಗಳ ಸಹಾಯದಿಂದಲೂ, ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ನಿರ್ವಹಿಸಬಹುದು. ಈ ಬಗ್ಗೆ ಹೆಚ್ಚು ವಿವರವಾಗಿ ಅರ್ಥಮಾಡಿಕೊಳ್ಳಲು ಈಟಿವಿ ಭಾರತ್ ಸುಖಿಭವ ತಂಡ ಕಯಾ ಕ್ಲಿನಿಕ್ ಇಂಡಿಯಾದ ವೈದ್ಯಕೀಯ ಮುಖ್ಯಸ್ಥ ಡಾ. ಸುಶಾಂತ್ ಶೆಟ್ಟಿ ಅವರೊಂದಿಗೆ ಮಾತನಾಡಿತು. ಈ ವೇಳೆ ಅವರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು.
'ಜನನಾಂಗದ ಹರ್ಪಿಸ್' ಎಂದರೇನು?
ಹರ್ಪಿಸ್ ಎಂಬುದು ಚರ್ಮದ ಮೇಲೆ ಗುಳ್ಳೆಗಳು/ಹುಣ್ಣುಗಳ ರೂಪದಲ್ಲಿ ಕಾಣಿಸಿಕೊಳ್ಳುವ ರಿಂಗ್ವರ್ಮ್ ರೀತಿಯದ್ದೊಂದು ರೂಪ. ಇದನ್ನು ಸಾಮಾನ್ಯವಾಗಿ ಬ್ಯಾಕ್ಟೀರಿಯಾದಿಂದ ಹರಡುವ ಚರ್ಮದ ಸೋಂಕು ಎಂತಲೂ ಪರಿಗಣಿಸಲಾಗುತ್ತದೆ. ಏಕೆಂದರೆ, ಇದು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ನಿಂದ ಉಂಟಾಗುತ್ತದೆ.
ಈ ಹರ್ಪಿಸ್ ಅನ್ನು ಸಾಂಕ್ರಾಮಿಕವೆಂದು ಪರಿಗಣಿಸಲಾಗುತ್ತದೆ. ಹರ್ಪಿಸ್ ರೋಗ ಸೋಂಕಿತ ವ್ಯಕ್ತಿಯ ಬಾಧಿತ ಪ್ರದೇಶವಾಗಿರುತ್ತದೆ. ಅವರ ಬಟ್ಟೆ ಅಥವಾ ಅವರು ಹಿಂದೆ ಮುಟ್ಟಿದ ಯಾವುದೇ ಇತರ ವಸ್ತುಗಳನ್ನು ಸ್ಪರ್ಶಿಸಿದರೆ ಮಾತ್ರ ಸೋಂಕು ಹರಡಬಲ್ಲದು. ಹಾಗೆಯೇ ಜನನಾಂಗದ ಹರ್ಪಿಸ್ ರೋಗ ಹೊಂದಿರುವ ವ್ಯಕ್ತಿ ಜೊತೆ ಲೈಂಗಿಕ ಸಂಭೋಗ ನಡೆಸಿದರೆ ಅವರಿಗೂ ಖಾಯಿಲೆ ಹರಡುತ್ತದೆ. ಈ ರೋಗದ ಪರಿಣಾಮಗಳನ್ನು ಪುರುಷರು ಮತ್ತು ಮಹಿಳೆಯರ ಜನನಾಂಗಗಳ ಚರ್ಮದ ಮೇಲೆ ಕಾಣಬಹುದು ಎಂದು ಡಾ.ಶೆಟ್ಟಿ ವಿವರಿಸುತ್ತಾರೆ.