ಕರ್ನಾಟಕ

karnataka

ETV Bharat / sukhibhava

ದೀರ್ಘಾವಧಿ ಕೋವಿಡ್​ನಿಂದ ಪುರುಷರಿಗಿಂತ ಮಹಿಳೆಯರಲ್ಲಿ​ ತೂಕ ಹೆಚ್ಚಳ..

ಅಧಿಕ ತೂಕದ ಸ್ಥಿತಿಯು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ದೀರ್ಘ ಕೋವಿಡ್​ನೊಂದಿಗೆ ಸಂಬಂಧ ಹೊಂದಿರುವುದು ಪತ್ತೆಯಾಗಿದೆ

ದೀರ್ಘಾವಧಿ ಕೋವಿಡ್​ನಿಂದ​ ತೂಕ ಹೆಚ್ಚಳ; ಅಧ್ಯಯನದಲ್ಲಿ ಬಯಲು
weight-gain-due-to-prolonged-covid-study

By

Published : Dec 1, 2022, 5:10 PM IST

ಲಂಡನ್​:ದೀರ್ಘಾವಧಿ ಕೋವಿಡ್​ ಲಕ್ಷಣಗಳು ಮಹಿಳೆಯರಲ್ಲಿ ಅಧಿಕ ತೂಕ ಹೆಚ್ಚಳಕ್ಕೆ ಸಂಬಂಧಿಸಿವೆ ಎಂಬುದನ್ನು ಹೊಸ ಸಂಶೋಧನೆ ವರದಿ ಮಾಡಿದೆ. ಯುನಿವರ್ಸಿಟಿ ಆಫ್​ ಈಸ್ಟ್​ ಆ್ಯಂಜಲಿಯಾ ನಡೆಸಿದ ಅಧ್ಯಯನದಲ್ಲಿ, ಅಧಿಕ ತೂಕವು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ದೀರ್ಘ ಕೋವಿಡ್​ನೊಂದಿಗೆ ಸಂಬಂಧ ಹೊಂದಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ.

ಬೇಗ ಕೋವಿಡ್​ನಿಂದ ಚೇತರಿಕೆ ಕಂಡವರಿಗಿಂತ ದೀರ್ಘಾವಧಿ ಕೋವಿಡ್​ಗೆ ಹೆಚ್ಚಿನ ನಿಗಾ ಬೇಕಿದ್ದು, ಕಾಳಜಿ ವಹಿಸಬೇಕಿದೆ ಎಂದು ಸಂಶೋಧನೆ ತಿಳಿಸಿದೆ. ದೀರ್ಘಾವಧಿ ಕೋವಿಡ್​ ಕ್ಲಿಷ್ಟ ಪರಿಸ್ಥಿತಿಯನ್ನು ಅಭಿವೃದ್ಧಿ ಮಾಡುತ್ತದೆ. ಜೊತೆಗೆ 12 ವಾರಗಳಿಗೂ ಹೆಚ್ಚು ಕಾಲ ಕೋವಿಡ್​ ಹೊಂದಿದ್ದರೆ ಅದು ದೀರ್ಘಾವಧಿ ಕೋವಿಡ್​ ಆಗಿದೆ ಎಂದು ಯುನಿವರ್ಸಿಟಿ ಆಫ್​ ಈಸ್ಟ್​ ಆ್ಯಂಜಲಿಯಾ ಪ್ರೊಫೆಸರ್​ ತಿಳಿಸಿದ್ದಾರೆ.

ಬ್ರಿಟನ್​ನಲ್ಲಿ ಎರಡು ಮಿಲಿಯನ್​ಗೂ ಹೆಚ್ಚು ಜನರು ದೀರ್ಘಾವಧಿ ಕೋವಿಡ್​ನಿಂದ ಬಳಲಿರುವುದಾಗಿ ತಿಳಿದ್ದು, ಅದು ವಿಭಿನ್ನ ರೀತಿಯಲ್ಲಿ ಅವರಿಗೆ ಪರಿಣಾಮ ಬೀರಿದೆ. ಕೆಮ್ಮು, ತಲೆ ನೋವು ಸೇರಿದಂತೆ ಅನೇಕ ಅನೇಕ ತಡೆಗಟ್ಟುವ ರೋಗ ಲಕ್ಷಣಗಳನ್ನು ಹೊಂದಿದ್ದಾರೆ. ಇದರ ಹೊರತಾಗಿ ಎದೆನೋವು, ಬಿಗಿತನ, ಬ್ರೈನ್​ ಫಾಗ್​, ಆಲಸ್ಯ, ಕೀಲು ನೋವು, ಖಿನ್ನತೆ, ಆತಂಕ, ಹಸಿವೆ ನಷ್ಟ, ರುಚಿ ಮತ್ತು ವಾಸನೆ ಬದಲಾವಣೆಗಳಿಗೂ ಒಳಗಾಗಿದ್ದಾರೆ ಎನ್ನುತ್ತಾರೆ ಪ್ರೊಫೆಸರ್​ ವಸ್ಸಿಲಿಒ.

ಇನ್ನು, ದೀರ್ಘಾವಧಿ ಕೋವಿಡ್​ ಅಭಿವೃದ್ಧಿಯಲ್ಲಿ ಯಾವ ಅಂಶ ಅಭಿವೃದ್ಧಿ ಆಗುತ್ತದೆ ಎಂಬುದನ್ನು ನಾವು ಅರಿಯಬೇಕಾಯಿತು. ಈ ಸಂಬಂಧ ನಡೆದ ಆನ್​ಲೈನ್​ ಸಮೀಕ್ಷೆಯಲ್ಲಿ 1,487 ಮಂದಿ ಭಾಗಿಯಾಗಿದ್ದರು. ಅವರಲ್ಲಿ ಉಸಿರಾಟ ಸಮಸ್ಯೆ, ಎದೆನೋವು, ನೆನಪಿನ ಸಮಸ್ಯೆ ಮತ್ತು ಆತಂಕಗಳ ಕಾಡುತ್ತಿರುವ 774 ಮಂದಿ ದೀರ್ಘ ಕೋವಿಡ್​ ಅನುಭವ ಹೊಂದಿದ್ದರು. ಹೆಚ್ಚಿನ ಸ್ವಯಂ ಹರಡುವಿಕೆಯನ್ನು ಹೊಂದಿದ್ದಾರೆ.

ಮೆಡಿಕಲ್​ ರೆಕಾರ್ಡ್​ ಅನುಸಾರವಾಗಿ ಕಡಿಮೆ ಸಮಸ್ಯೆಗೆ ಗುರಿಯಾದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಸಮೀಕ್ಷೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ಸಾಂಕ್ರಾಮಿಕತೆ ಮೊದಲ ವರ್ಷದಲ್ಲಿ ಸೋಂಕಿಗೆ ಒಳಗಾಗಿದ್ದಾರೆ.

ಕೋವಿಡ್​ ಲಸಿಕೆಗೆ ಮುನ್ನ ಇವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ ಅನೇಕ ಹೊಸ ಲಕ್ಷಣಗಳು ಕಂಡು ಬಂದಿವೆ. ಇದರಲ್ಲಿ ಪ್ರಮುಖವಾಗಿ ಪುರುಷರಿಗಿಂತ ಮಹಿಳೆಯರು ದೀರ್ಘಾವಧಿ ಕೋವಿಡ್​ ಲಕ್ಷಣ ಹೊಂದಿದ್ದಾರೆ. ದೀರ್ಘಾವಧಿ ಕೋವಿಡ್​ ಹೊಂದಿರುವವರಲ್ಲಿ ಅಧಿಕ ದೇಹ ತೂಕ ಪತ್ತೆಯಾಗಿದೆ.

ಇದನ್ನೂ ಓದಿ:48,500 ವರ್ಷದ ಹಿಂದಿನ ಜೊಂಬಿ ವೈರಸ್​ ಪತ್ತೆ ಮಾಡಿದ ರಷ್ಯಾ ವಿಜ್ಞಾನಿಗಳು

ABOUT THE AUTHOR

...view details