ಹೈದರಾಬಾದ್: ಮೈಗ್ರೇನ್ಗೆ ಔಷಧ ರಹಿತ ಚಿಕಿತ್ಸೆ ನಿರ್ವಹಣೆಗೆ ಕೈಗೆ ಧರಿಸಬಹುದಾದ ಚಿಕಿತ್ಸಾ ಥೆರಪಿ ಸಾಧನ ನೆರಿವಿಯೊ ಬಿಡುಗಡೆ ಮಾಡುವುದಾಗಿ ಡಾ ರೆಡ್ಡಿಸ್ ಲ್ಯಾಬೋರೆಟರಿ ತಿಳಿಸಿದೆ. ಈ ಸಾಧನಕ್ಕೆ ಯುಎಸ್ ಫುಡ್ ಅಂಡ್ ಡ್ರಗ್ ಆಡ್ಮನಿಸ್ಟ್ರೇಷನ್ (ಯುಎಸ್ ಎಫ್ಡಿಎ) ಅನುಮೋದನೆ ನೀಡಿದೆ.
ಮೈಗ್ರೇನ್ ಎಂಬುದು ಜಾಗತಿಕ ಆರೋಗ್ಯದ ಸವಾಲಾಗಿದ್ದು, ಶೇ 30 ರಷ್ಟು ಮಂದಿ ತಿಂಗಳಲ್ಲಿ 15 ಮತ್ತು ಅದಕ್ಕೂ ಹೆಚ್ಚು ದಿನಗಳ ಕಾಲ ಇದರ ಪರಿಣಾಮಕ್ಕೆ ಒಳಗಾಗುತ್ತಾರೆ. ಮೈಗ್ರೇನ್ ಮಹಿಳೆಯರಲ್ಲಿ ಹೆಚ್ಚಿನ ಪರಿಣಾಮವನ್ನು ಹೊಂದಿದೆ. ಭಾರತದಲ್ಲಿ ಸರಿಸುಮಾರು ಶೇ 60ರಷ್ಟು ಅಂದರೆ 213 ಮಿಲಿಯನ್ ಮಂದಿ ಈ ಮೈಗ್ರೇನ್ನಿಂದ ಬಳಲುತ್ತಿದ್ದಾರೆ.
12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಮೈಗ್ರೇನ್ ನೋವು ತಡೆಗಟ್ಟಲು ಈ ಪ್ರಿಸ್ಕ್ರಿಪ್ಷನ್ ಆಧಾರಿಸಿದ ಸಾಧನವನ್ನು ಬಳಕೆ ಮಾಡಬಹುದಾಗಿದೆ. ಈ ಸಾಧನವನ್ನು ತೋಳಲ್ಲಿ ಧರಿಸಬಹುದಾಗಿದೆ. ಮೈಗ್ರೇನ್ ತಲೆ ನೋವು ಶುರುವಾದ 60 ನಿಮಿಷದೊಳಗೆ ಇದನ್ನು ಧರಿಸಬಹುದು ಮೈಗ್ರೇನ್ ಹೆಚ್ಚಿನ ಚಿಕಿತ್ಸೆಗೆ ಅಥವಾ ಮೈಗ್ರೇನ್ ತಡೆಗಟ್ಟಲು ದಿನ ಬಿಟ್ಟು ದಿನ ಇದನ್ನು ಧರಿಸಬಹುದು.
ಈ ಸಾಧನವೂ ರಿಮೋಟ್ ಎಲೆಕ್ಟ್ರಿಕಲ್ ನ್ಯೋರೋಮೊಡ್ಯೂಲೇಷನ್ (ಆರ್ಇಎನ್)ನಂತೆ ಕೆಲಸ ಮಾಡಲಿದ್ದು, ನರದಲ್ಲಿ ಉಂಟಾಗುವ ನೋವಿನ ಪರಿಸ್ಥಿತಿಯನ್ನು ನಿರ್ದಿಷ್ಟ ಪರಿಸ್ಥಿತಿ ಚಿಕಿತ್ಸೆಗೆ ಕ್ರಿಯೆ ನಡೆಸುವಂತೆ ರೂಪಿಸಲಾಗಿದೆ. ಇದು ಮೆದುಳಿನ ಕಾಂಡದಲ್ಲಿ ನೈಸರ್ಗಿಕ ನೋವು ನಿವಾರಕ ಪ್ರಕ್ರಿಯೆ ಪ್ರಾರಂಭಿಸುತ್ತದೆ. ಇದು ತಲೆಯಲ್ಲಿ ಮೈಗ್ರೇನ್ ನೋವಿನ ಮೂಲದ ಮೇಲೆ ಪರಿಣಾಮ ಬೀರುವ ಮೂಲಕ ನೋವಿನ ತಡೆಯುವಲ್ಲಿ ಸಹಾಯ ಮಾಡುತ್ತದೆ.