ಕರ್ನಾಟಕ

karnataka

ETV Bharat / sukhibhava

ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲಿದೆ ಧರಿಸಬಹುದಾದ ತಂತ್ರಜ್ಞಾನ; ಇದು ಸ್ಮಾರ್ಟ್​ವಾಚ್​ನಂತಲ್ಲ! - ಮಾರುಕಟ್ಟೆಯಲ್ಲಿ ಅತ್ಯಂತ ಗಮನಾರ್ಹವಾದ ಪ್ರಗತಿ

ತಂತ್ರಜ್ಞಾನ ಮತ್ತು ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಈ ಧರಿಸಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು ವ್ಯಕ್ತಿಯ ಚಟುವಟಿಕೆಗಳನ್ನು ಟ್ರ್ಯಾಕ್​ ಮಾಡುವ ಜೊತೆಗೆ ಅನೇಕ ಇತರೆ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ.

Wearable technology contributes to the healthcare sector
Wearable technology contributes to the healthcare sector

By

Published : Apr 7, 2023, 5:59 PM IST

ನವದೆಹಲಿ: ಸ್ವಯಂ ಚಾಲಿತ ಕಾರುಗಳು, ಇಂಟರ್ನೆಟ್, ವರ್ಚುವಲ್ ರಿಯಾಲಿಟಿ ಇವೆಲ್ಲವೂ ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಲ್ಲಿ ಹೊಸ ಕ್ರಾಂತಿ ಉಂಟುಮಾಡಿವೆ. ಶೀಘ್ರದಲ್ಲೇ ಮಾರುಕಟ್ಟೆಗೆ ಧರಿಸಬಹುದಾದ ತಂತ್ರಜ್ಞಾನ ಕೂಡ ಲಗ್ಗೆ ಇಡಲಿದ್ದು, ಇದು ಕೂಡ ಗಮನಾರ್ಹ ಪ್ರಗತಿ ಕಾಣುತ್ತಿದೆ. ಅದರಲ್ಲೂ ಕೋವಿಡ್​ ಕಾಲದ ಬಳಿಕ ಆರೋಗ್ಯ ಮತ್ತು ತಂತ್ರಜ್ಞಾನದಲ್ಲಿ ಜಾಗೃತಿ ಹೆಚ್ಚಿದೆ. ಈ ಹಿನ್ನೆಲೆಯಲ್ಿ ಇವೆರಡನ್ನೂ ಜೊತೆಗೂಡಿಸಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಸಾಂಕ್ರಾಮಿಕತೆ ಬಳಿಕ ಸದ್ಯ ಜನರು ಅತಿ ಹೆಚ್ಚು ಹಣ ವ್ಯಯ ಮಾಡುತ್ತಿರುವುದು ಎರಡು ವಿಷಯಕ್ಕೆ ಒಂದು ತಂತ್ರಜ್ಞಾನವಾದರೆ, ಮತ್ತೊಂದು ಫಿಟ್​ನೆಸ್​ಗೆ. ಇದೇ ಉದ್ದೇಶದಿಂದ ತಂತ್ರಜ್ಞಾನ ಮತ್ತು ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಈ ಧರಿಸಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು ವ್ಯಕ್ತಿಯ ಚಟುವಟಿಕೆಗಳನ್ನು ಟ್ರ್ಯಾಕ್​ ಮಾಡುವ ಜೊತೆಗೆ ಅನೇಕ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ.

ಭವಿಷ್ಯದ ಧರಿಸಬಹುದಾದ ತಂತ್ರಜ್ಞಾನಗಳು: ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ನಿಮಿಷಕ್ಕೊಂದು ಅವಿಷ್ಕಾರಗಳು ಆಗುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಧರಿಸಬಹುದಾದ ತಂತ್ರಜ್ಞಾನ ಸಾಮಾನ್ಯವಾಗಲಿದೆ. ಇದರಿಂದಾಗಿ ಸ್ಮಾರ್ಟ್​ವಾಚ್​ಗಳ ಭವಿಷ್ಯ ಏರಿಳಿತ ಕಾಣಬಹುದು. ಕಡಿಮೆ ಸಮಯದಲ್ಲಿ ಇದರಲ್ಲಿ ದೃಶ್ಯದ ಅಂಶಗಳನ್ನು ಕೂಡ ಸೇರಿಬಹುಬಹುದು. ಸಾಮಾನ್ಯವಾಗಿ ಬಟ್ಟೆ, ಚಪ್ಪಲಿ ಧರಿಸುವಂತೆ ಇದನ್ನು ಧರಿಸಬಹುದಾಗಿದೆ.

ಶಕ್ತಿ ಬಳಕೆ:ಉದಾಹರಣೆಗೆ, ಸೂರ್ಯನ ಶಕ್ತಿ ಬಳಸಿಕೊಂಡು ಈ ಸಾಧನ ನಡೆಸಬಹುದು. ಅಥವಾ ನಮ್ಮ ದೇಹದ ತಾಪಮಾನ ಮತ್ತು ಚಲನೆಗೆ ಅನುಗುಣವಾಗಿ ಇದನ್ನು ಪವರ್ ಅಪ್​ ಮಾಡಬಹುದಾಗಿದ್ದು, ಇದು ಭವಿಷ್ಯದಲ್ಲಿ ಜಗತ್ತಿನಲ್ಲಿಯೇ ಬದಲಾವಣೆ ತರಲಿದೆ ಎನ್ನಲಾಗಿದೆ

ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ: ಆರೋಗ್ಯ ವಲಸಯ ಈಗಾಗಲೇ ಈ ಧರಿಸಬಹುದಾದ ವಸ್ತುಗಳ ಅಳವಡಿಕೆಗೆ ಸಜ್ಜಾಗಿದೆ. ಮೆಡಿಕಲ್​ ಸಾಧನಗಳನ್ನು ರಿಯಲ್​ ಟೈಮ್​ ಬಯೋಮೆಟ್ರಿಕ್​ ಮೂಲಕ ನಿರ್ವಹಣೆ ಮಾಡಬಹುದಾಗಿದೆ. ಇದು ಆರೋಗ್ಯ ವಲಯಕ್ಕೆ ಮುಂದುವರೆದ ತಂತ್ರಜ್ಞಾನ ಲಾಭ ನೀಡಲಿದೆ.

ಉದ್ಯಮಿಗಳು ಮತ್ತು ಹೂಡಿಕೆದಾರರು ಈಗಾಗಲೇ ಜಾಗತಿಕವಾಗಿ ಇದರ ಮಾರುಕಟ್ಟೆ ನಿರ್ವಹಣೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಪತ್ತೆ ಮತ್ತು ಇದಕ್ಕೆ ಪರಿಹಾರದ ಕುರಿತ ಕೆಲಸಗಳು ನಡೆಯುತ್ತಿದೆ. ಜೊತೆಗೆ ಇದು ಚರ್ಮಕ್ಕೆ ಅಂಟಿಸಬಹುದರ ಕುರಿತು ಚಿಂತನೆ ನಡೆಯುತ್ತಿದ್ದು, ಔಷಧ, ರಕ್ತದ ಆಕ್ಸಿಜನ್​ ಮಟ್ಟ ಮತ್ತು ಇತರೆ ಗಂಭೀರ ಚಿಹ್ನೆಗಳ ಅಧ್ಯಯನಕ್ಕೆ ಈ ಸಾಧನದ ಮೂಲಕ ಒತ್ತು ನೀಡಲಾಗುತ್ತಿದೆ. ದೀರ್ಘ ಕಾಯಿಲೆ ಹೊಂದಿರುವವರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಜೊತೆಗೆ ಬೆಂಬಲ ಸಿಗಲಿದೆ.

ಪ್ರಮಾಣೀಕರಣ: ಈಗಾಗಲೇ ಬೃಹತ್​ ಸಾಮಾಜಿಕ ಜಾಲತಾಣದಲ್ಲಿ ವಾಟ್ಸ್​​ಆ್ಯಪ್​ ಮತ್ತು ಟೆಸ್ಲಾ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಎರಡು ಹಂತದ ಪ್ರಮಾಣೀಕರಣ ವ್ಯವಸ್ಥೆ ಮಾಡಿದೆ. ಈ ಹಿನ್ನಲೆ ಇದಕ್ಕೆ ಕೂಡ ದೈಹಿಕ ಕೀ ಬದಲಾಗಿ ಡಿಜಿಟಲ್​ ಕೀ ಪತ್ತೆ ಮತ್ತು ಪ್ರಮಾಣೀಕರಣಕ್ಕೆ ಒತ್ತು ನೀಡಲಾಗಿದೆ.

ಭವಿಷ್ಯದಲ್ಲಿ ಪ್ರತಿಯೊಂದು ಡಿಜಿಟಲ್​ ರಾಡರ್​ ಮೂಲಕವೇ ಕಾರ್ಯಾಚರಣೆ ನಡೆಸಲಿದೆ. ಇಂದಿಗೂ ಕೆಲವು ಸಾಂಪ್ರದಾಯಿಕ ಹಾದಿಯಲ್ಲಿ ಜೀವಿಸುತ್ತಿದ್ದೇವೆ. ಆದರೆ, ದಿನದ ಕೊನೆಯಲ್ಲಿ ನಾವು ಒಂದಲ್ಲೊಂದು ವಿಧಾನದಲ್ಲಿ ತಂತ್ರಜ್ಞಾನವನ್ನು ಅಪ್ಪಬೇಕಿದೆ. ನಮ್ಮ ದೈನಂದಿನ ದಿನಚರಿಗಳು ಕೂಡ ಇದರ ನಿರ್ವಹಣೆಗೆ ಒಳಪಡಲಿದೆ.

ಇದನ್ನೂ ಓದಿ:ಸೋಂಕಿನ ವಿರುದ್ಧ ಹೋರಾಡುವಲ್ಲಿ ವಿಟಮಿನ್​ ಮತ್ತು ಮಿನರಲ್ಸ್​ಗಳು ಪಾತ್ರ ಮುಖ್ಯ!

ABOUT THE AUTHOR

...view details