ಬೆಂಗಳೂರು: 1989ರಲ್ಲಿ ಜಾಗತಿಕ ಜನಸಂಖ್ಯೆ ಸರಿಸುಮಾರು 5 ಬಿಲಿಯನ್ ನಷ್ಟಿತ್ತು. ಜನಸಂಖ್ಯೆ ಹೆಚ್ಚಳ ಉಂಟುಮಾಡುವ ಸಮಸ್ಯೆಗಳ ಕುರಿತು ಚಿಂತೆಗೆ ಒಳಗಾದ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮುಂದಾಯಿತು. ಅದರ ಅನುಸಾರ ಜಾಗತಿಕವಾಗಿ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನದ ಆಚರಣೆಗೆ ಮುಂದಾಗಿ, ಅದರ ನಿಯಂತ್ರಣ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಯಿತು. ಅಧಿಕ ಜನಸಂಖ್ಯೆಯಿಂದ ಆಗುವ ಪರಿಣಾಮ ಮತ್ತು ಇದರಿಂದ ಆಗುವ ಸಮಸ್ಯೆಗಳಿಂದ ಜಾಗತಿಕವಾಗಿ ಬೀರುವ ಪರಿಣಾಮದ ಕುರಿತು ಈ ದಿನವನ್ನು ಕೇಂದ್ರೀಕರಿಸಲಾಗಿದೆ.
ಅಧಿಕ ಜನಸಂಖ್ಯೆ ನಿಸ್ಸಾಂಶಯವಾಗಿ ಭೂಮಿಯ ಮೇಲೆ ಬದುಕುವ ಪ್ರತಿ ಜೀವಿಗಳಿಗೆ ಅನೇಕ ಸಮಸ್ಯೆಯನ್ನು ತಂದೊಡ್ಡುತ್ತದೆ. 2023ರಲ್ಲಿ ವಿಶ್ವ ಜನಸಂಖ್ಯಾ ದಿನದಂದು ಜಾಗತಿಕವಾಗಿ 8 ಬಿಲಿಯನ್ ಜನಸಂಖ್ಯೆ ವರದಿಯಾಗಿದೆ. ಪ್ರತಿ ರಾಷ್ಟ್ರಗಳು ಜನಸಂಖ್ಯಾ ನಿಯಂತ್ರಣಕ್ಕೆ ಸಕರಾತ್ಮಕ ಕ್ರಮಕ್ಕೆ ಮುಂದಾಗಬೇಕುದೆ. ಜೊತೆಗೆ ಇದಕ್ಕೆ ನಾಗರಿಕರು ಕೂಡ ಸಹಕರಿಸಬೇಕಿದ್ದು, ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುವ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕಿದೆ.
ಬೇಕಿದೆ ಮಾನವ ಸಂಪನ್ಮೂಲದ ಬುದ್ದಿವಂತ ಬಳಕೆ: ವರದಿ ಅನುಸಾರ, ಭಾರತ ಚೀನಾವನ್ನು ಹಿಂದಿಕ್ಕಿ 1.4 ಬಿಲಿಯನ್ ಜನಸಂಖ್ಯೆಯನ್ನು ಹೊಂದುವ ಮೂಲಕ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರ ಹೊಮ್ಮಿದೆ. ಭಾರತ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಯೋಜನೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಅನೇಕ ಕ್ರಮವನ್ನು ಕೈಗೊಂಡಿದೆ. ಇವುಗಳನ್ನು ಪರಿಣಾಮಕಾರಿಯಾಗಿ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕಿದೆ. ಅಧಿಕ ಜನಸಂಖ್ಯೆಯು ದೇಶದ ಅಭಿವೃದ್ಧಿಯಲ್ಲಿ ಸಹಾಯ ಮಾಡಲು ಅನೇಕ ಬುದ್ದಿವಂತಿಕೆ ಮಿದುಳಿನ (ಯುವ ಜನತೆ) ಕೊಡುಗೆ ನೀಡುತ್ತದೆ.