ಪದೇ ಪದೇ ವಾಟರ್ ಪಾರ್ಕ್ ಮತ್ತು ಈಜುಕೊಳಗಳಿಗೆ ಭೇಟಿ ಕೊಟ್ಟವರಲ್ಲಿ ಕಿವಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಇದು ವಿಶೇಷವಾಗಿ ಮಕ್ಕಳಿಗೆ ಬಾಧಿಸುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. ನೀರಿಗಿಳಿದಾಗ ಕಿವಿಯಲ್ಲಿ ನೀರು ಸಂಗ್ರಹಣೆಯಾಗುತ್ತದೆ. ಇದರಿಂದ ಅಲ್ಲಿ ತೇವಾಂಶದ ವಾತಾವರಣ ರೂಪಿಸಿ, ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ. ನಗರಗಳಲ್ಲಿ ಬೇಸಿಗೆಯಲ್ಲಿ ವಾಟರ್ಪಾರ್ಕ್ಗಳಿಗೆ ಭೇಟಿ ನೀಡಿದ ಮಕ್ಕಳಲ್ಲಿ ಈ ರೀತಿಯ ಕಿವಿ ಸೋಂಕು ಪ್ರಕರಣ ಹೆಚ್ಚಾಗುತ್ತಿರುವುದನ್ನು ವೈದ್ಯರು ಗಮನಿಸಿದ್ದಾರೆ.
ವೈದ್ಯರ ಸಲಹೆಗಳೇನು?: ಕಿವಿ ಸೋಂಕಿನಿಂದ ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಅವರ ಕಿವಿ ಕೊಳವೆಗಳು ಸಣ್ಣದಾಗಿದ್ದು ದೀರ್ಘಕಾಲದವರೆಗೆ ನೀರು ಇರುತ್ತದೆ. ಈ ಕುರಿತು ಮಾತನಾಡಿರುವ ವೈದ್ಯ ರಾಜೇಶ್ ಕಪೂರ್, ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಕಿವಿ ಸೋಂಕಿನ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಇಂತಹ ಅನಾಹುತಗಳನ್ನು ತಪ್ಪಿಸಲು ವಾಟರ್ ಪಾರ್ಕ್‌ಗೆ ಇಳಿಯುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು.
ವಾಟರ್ ಪಾರ್ಕ್‌ಗೆ ಭೇಟಿ ನೀಡುವವರು ಇಯರ್ಪ್ಲಗ್ ಅನ್ನು ವಿಶೇಷವಾಗಿ ಈಜಿಗಾಗಿ ರೂಪಿಸಿದ ಈ ಸಾಧನಗಳನ್ನು ಬಳಸಿದಾಗ ಕಿವಿಯೊಳಗೆ ನೀರು ಶೇಖರಣೆಯಾಗುವುದನ್ನು ತಡೆಯಬಹುದು. ಇನ್ನು ನೀರಿನಲ್ಲಿ ಆಟವಾಡಿದ ಬಳಿಕ ಕಿವಿಯನ್ನು ಸಂಪೂರ್ಣವಾಗಿ ನೀರಿಲ್ಲದಂತೆ ಇರುವಂತೆ ನೋಡಿಕೊಳ್ಳಬೇಕು. ಶುಚಿಯಾದ ಟವಲ್ ಅಥವಾ ಕಡಿಮೆ ಶಾಖದ ಗಾಳಿ ಮೂಲಕ ಕಿವಿಯನ್ನು ಒಣಗಿಸಬಹುದು.
ವಾಟರ್ ಪಾರ್ಕ್‌ಗೆ ಭೇಟಿ ಬಳಿಕ ಜನರಲ್ಲಿ ಕಿವಿ ಸೋಂಕಿನ ಪ್ರಕರಣಗಳು ಹೆಚ್ಚಾಗಿದೆ. ಅತಿ ಹೆಚ್ಚುಕಾಲ ನೀರಿನಡಿ ಇರುವುದು ಕೂಡ ಇದರ ಅಪಾಯ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ಕೆಜಿಎಂಯು ವೈದ್ಯ ವಿರೇಂದ್ರ ವರ್ಮಾ. ಇನ್ನು ಸೋಂಕು ಆಗದಂತೆ ತಡೆಯಲು ಮೃದು, ಪಿಎಚ್ ಸಮತೋಲಿತ ಕಿವಿ ಶುದ್ದಿಕರಿಸುವ ಸಲ್ಯೂಷನ್ ಅನ್ನು ಬಳಿಕ ಶೇಖರಣೆಯಾಗಿರುವ ನೀರನ್ನು ಹೊರಗೆ ತೆಗೆಯಬಹುದು. ಇದು ಬ್ಯಾಕ್ಟಿರಿಯಾ ಬೆಳೆಯುವುದನ್ನು ತಡೆಯುತ್ತದೆ.