ಕರ್ನಾಟಕ

karnataka

ETV Bharat / sukhibhava

ಹೆಚ್ಚು ನೀರು ಕುಡಿಯದಿದ್ದರೆ ಕೋಪ, ಹಗೆತನ, ಗೊಂದಲ, ಆಯಾಸದಿಂದ ಬಳಲುವಿರಿ ಜೋಕೆ!

ಆತಂಕವು ಇಂದು ಜನರಲ್ಲಿ ಸಾಮಾನ್ಯವಾಗಿದೆ. ವಿಶೇಷವಾಗಿ ಯುವ ಜನಸಂಖ್ಯೆಯಲ್ಲಿ, ಅದರಲ್ಲೂ ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಇದು ಹೆಚ್ಚಾಗಿದೆ. ಆದ್ದರಿಂದ, ಕುಡಿಯುವ ನೀರು ಇದನ್ನೆಲ್ಲಾ ತಡೆಯಲು ಪ್ರಮುಖ ಅಸ್ತ್ರವಾಗಿದೆ. ಇದು ಮನುಷ್ಯನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ನೀರನ್ನು ಹೆಚ್ಚು ಕುಡಿಯದಿದ್ದರೆ ಕೋಪ, ಹಗೆತನ, ಗೊಂದಲ, ಆಯಾಸ ಹೆಚ್ಚಾಗುತ್ತದೆ!
ನೀರನ್ನು ಹೆಚ್ಚು ಕುಡಿಯದಿದ್ದರೆ ಕೋಪ, ಹಗೆತನ, ಗೊಂದಲ, ಆಯಾಸ ಹೆಚ್ಚಾಗುತ್ತದೆ!

By

Published : Feb 28, 2022, 5:57 PM IST

ಹೈದರಾಬಾದ್ : ಹೆಚ್ಚಿನ ಆಸ್ಟ್ರೇಲಿಯನ್ನರಲ್ಲಿ ಈ ಒಂದು ಸಾಮಾನ್ಯ ಲಕ್ಷಣ ಕಂಡುಬರುತ್ತದೆ. ಅದೇನೆಂದರೆ ಜೀವನದಲ್ಲಿ ಕೆಲವು ಹಂತದಲ್ಲಿ ತೀವ್ರ ಮಾನಸಿಕ ಒತ್ತಡದಿಂದ ಬಳಲುವುದು. ಸುಮಾರು 3.2 ಮಿಲಿಯನ್ ಆಸ್ಟ್ರೇಲಿಯನ್ನರಲ್ಲಿ ಆತಂಕದ ಕಾಯಿಲೆಗಳು ವರದಿಯಾಗಿವೆ. ರೋಗಲಕ್ಷಣಗಳು ತೀವ್ರವಾಗಿವೆ, ವಿಶೇಷವಾಗಿ 15-24 ವರ್ಷ ವಯಸ್ಸಿನವರಲ್ಲಿ ಇದು ಕಾಣಿಸಿಕೊಳ್ಳುತ್ತಿದೆ.

ನೀರನ್ನು ಹೆಚ್ಚು ಕುಡಿಯದಿದ್ದರೆ ಕೋಪ, ಹಗೆತನ, ಗೊಂದಲ, ಆಯಾಸ ಹೆಚ್ಚಾಗುತ್ತದೆ!

ಮಾನಸಿಕ ಆರೋಗ್ಯವು ಸಾಮಾನ್ಯವಾಗಿ ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದೆ ಎಂದು ನ್ಯೂಟ್ರಿಷನ್ ಸೈಕಿಯಾಟ್ರಿ ತೋರಿಸಿದೆ. ಮಾನವ ದೇಹವು 60-80% ನೀರಿನಿಂದ ತುಂಬಿದೆಯಾದರೂ ನಾವು ಅದರ ಪೌಷ್ಟಿಕಾಂಶದ ಮೌಲ್ಯವನ್ನು ನಿರ್ಲಕ್ಷಿಸುತ್ತೇವೆ. ಫೆಡರಲ್ ಆರೋಗ್ಯ ಪ್ರಾಧಿಕಾರದ ಇತ್ತೀಚಿನ ಟ್ವೀಟ್ ಉಲ್ಲೇಖದಂತೆ, ನೀರು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಾಧ್ಯತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಕುಡಿಯುವ ನೀರು ಮತ್ತು ಜಲಸಂಚಯನವು ಆತಂಕವನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಪುರಾವೆಗಳಿವೆ.

ಇಂಧನ ಖಾಲಿಯಾದಾಗ ವಾಹನ ಹೇಗೆ ಓಡುದಿಲ್ಲವೋ ಹಾಗೆ ಮನುಷ್ಯನಿಗೆ ನೀರು ಅತ್ಯಗತ್ಯ:

ಉದಾಹರಣೆಗೆ, ಬೈಕ್​ ಸವಾರಿ ಮಾಡಲು ಸಮಯಕ್ಕೆ ಇಂಧನ ತುಂಬುವ ಅಗತ್ಯವಿದೆ ಮತ್ತು ತೈಲ ಕಡಿಮೆಯಾದಾಗ ಮೀಟರ್​ ಬೋರ್ಡ್​ನಲ್ಲಿ ಅದರ ಸೂಚನೆಗಳನ್ನು ಗಮನಿಸಲಬಹುದು. ನಮ್ಮ ದೇಹವು ಸಹ ಅದೇ ರೀತಿಯಲ್ಲಿ ಪ್ರೋಗ್ರಾಮ್ ಆಗಿದೆ. ವ್ಯಕ್ತಿ ಪುನರ್ಜಲೀಕರಣಗೊಳ್ಳಬೇಕಾದಾಗ ದೇಹವು ಅದರ ಬಗ್ಗೆ ಸೂಚನೆಯನ್ನು ನೀಡುತ್ತದೆ. ಹಲವಾರು ವರ್ಷಗಳ ಹಿಂದೆ, ಜಲಸಂಚಯನವು ಆರೋಗ್ಯದ ಮೇಲೆ ವಿವಿಧ ರೀತಿಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಶಂಶೋಧನೆಯೊಂದನ್ನು ಸಹ ನಡೆಸಿದ್ದರು.

ಇದನ್ನೂ ಓದಿ: ತೀವ್ರವಾದ ಬೇಸಿಗೆ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ: ಅಧ್ಯಯನ

ನಿರ್ಜಲೀಕರಣವು ವಿಶೇಷವಾಗಿ ಕೋಪ, ಹಗೆತನ, ಗೊಂದಲ, ಆಯಾಸ ಸೇರಿದಂತೆ ಮುಂತಾದ ವಿವಿಧ ನಕಾರಾತ್ಮಕ ಭಾವನೆಗಳಿಗೆ ಸಂಬಂಧಿಸಿದೆ.

ನೀರನ್ನು ಹೆಚ್ಚು ಕುಡಿಯದಿದ್ದರೆ ಕೋಪ, ಹಗೆತನ, ಗೊಂದಲ, ಆಯಾಸ ಹೆಚ್ಚಾಗುತ್ತದೆ!

ಇತ್ತೀಚಿನ ಅಧ್ಯಯನದ ಪ್ರಕಾರ ಸಣ್ಣದೊಂದು ನಿರ್ಜಲೀಕರಣವೂ ಸಹ ಆತಂಕ-ಸಂಬಂಧಿತ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದಂತೆ. ನೀರು ಕುಡಿಯುವುದನ್ನು ಮುಂದುವರೆಸಿದಾಗ ಅವರು ಮೊದಲಿಗಿಂತ ಶಾಂತ ಮತ್ತು ತಾಜಾತನವನ್ನು ಅನುಭವಿಸುತ್ತಾರಂತೆ. ದಿನಕ್ಕೆ ಐದು ಕಪ್ ಅಥವಾ ಅದಕ್ಕಿಂತ ಹೆಚ್ಚು ನೀರು ಸೇವಿಸುವ ಜನರು ಖಿನ್ನತೆ ಮತ್ತು ಆತಂಕದ ಅಪಾಯಕ್ಕೆ ಒಳಗಾಗುವುದಿಲ್ಲ ಎಂದು ಎಂದು ಮತ್ತೊಂದು ಅಧ್ಯಯನವು ವಿವರಿಸಿದೆ.

ಎಷ್ಟು ನೀರು ಕುಡಿಯಬೇಕು..ನೀವು ದಿನಕ್ಕೆ ಎರಡು ಕಪ್​​ಗಳಿಗಿಂತ ಕಡಿಮೆ ನೀರು ಕುಡಿಯುತ್ತಿದ್ದರೆ ಈ ಅಪಾಯವು ದ್ವಿಗುಣಗೊಳ್ಳುತ್ತದೆಯಂತೆ. ಅದರಲ್ಲೂ ಪ್ರಮುಖವಾಗಿ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುವ ನೀರು ಸರಳ ನೀರಿಗಿಂತ ಹೆಚ್ಚು ಆತಂಕವನ್ನು ದೂರಮಾಡುತ್ತದೆ ಎಂದು ಸಂಶೋಧಕರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಆದರೆ, ಅವು ಪ್ಲಸೀಬೊ ಪರಿಣಾಮ(ಋಣಾತ್ಮಹ ಅಥವಾ ಧನಾತ್ಮಕ) ವನ್ನು ಸಹ ಹೊಂದಿರಬಹುದು. ನಿರ್ಜಲೀಕರಣ ಮತ್ತು ಆತಂಕದ ನಡುವಿನ ಸಂಬಂಧವನ್ನು ಮಕ್ಕಳಲ್ಲಿಯೂ ಗಮನಿಸಲಾಗಿದೆ. ನಿರ್ಜಲೀಕರಣದಿಂದ ಬಳಲುತ್ತಿರುವ ಮಕ್ಕಳು ರಾತ್ರಿ ಕಳಪೆ ನಿದ್ರೆ ಮಾಡುವುದನ್ನೂ ಸಹ ಸಂಶೋಧಕರು ಗಮನಿಸಿದ್ದಾರೆ.

ಮೆದುಳಿನ ಮೇಲೆ ನೀರಿನ ಪರಿಣಾಮ..ಪ್ರತಿಯೊಂದು ದೈಹಿಕ ಚಟುವಟಿಕೆಯು ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಮೆದುಳಿನ ಅಂಗಾಂಶದ 75% ನೀರಿನಿಂದಲೇ ಕೆಲಸ ಮಾಡುತ್ತದೆ. ನಿರ್ಜಲೀಕರಣವು ಮೆದುಳಿನಲ್ಲಿ ಶಕ್ತಿಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದು ಮೆದುಳಿನ ರಚನೆಯನ್ನು ಬದಲಾಯಿಸಬಹುದು. ಹಾಗೆ ಇದು ಮೆದುಳಿನ ಕೆಲಸವನ್ನು ನಿಧಾನಗೊಳಿಸುತ್ತದೆ. ನೀರಿನ ಮಟ್ಟವು ತೀವ್ರವಾಗಿ ಕಡಿಮೆಯಾದಾಗ, ಮೆದುಳಿನ ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ ಮತ್ತು ಆಗ ನಾವು ಆಯಾಸದ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸುತ್ತೇವೆ. ನಿರ್ಜಲೀಕರಣದ ಸಮಯದಲ್ಲಿ ಮೆದುಳು ಸಿರೊಟೋನಿನ್ (ಮೆದುಳಿನ ಜೀವಕೋಶಗಳ ನಡುವಿನ ರಾಸಾಯನಿಕ ಸಂದೇಶವಾಹಕ) ತಯಾರಿಸಲು ಅಗತ್ಯವಾದ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಪರಿಣಾಮವಾಗಿ, ಆತಂಕ ಹೆಚ್ಚಾಗಿ ಆ ಮೂಲಕ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆಯಂತೆ.

-ನಿಕೊಲಾಜ್ ಟ್ರಾವಿಕಾ,ಪೋಸ್ಟ್‌ಡಾಕ್ಟರಲ್ ರಿಸರ್ಚ್ ಫೆಲೋ, ಡೀಕಿನ್ ವಿಶ್ವವಿದ್ಯಾಲಯ

ABOUT THE AUTHOR

...view details