ಬೆಂಗಳೂರು: ನರಹುಲಿ ಅಥವಾ ನರೂಲಿ (warts) ಎಂಬ ಚರ್ಮ ಸಮಸ್ಯೆ ಅನೇಕರನ್ನು ಕಾಡುತ್ತದೆ. ಮುಖದ ಅಂದವನ್ನು ಹಾಳು ಮಾಡುವ ಈ ನರಹುಲಿಗಳು ಕೆಂಪಾಗಿ, ಕೆಲವೊಮ್ಮೆ ರಕ್ತಸ್ರಾವಕ್ಕೆ ಕಾರಣವಾಗಬಹುದು. ಇನ್ನು ಈ ನರಹುಲಿಗಳು ವ್ಯಕ್ತಿಗಳ ಕೈ ಅಥವಾ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಈ ಚರ್ಮದ ಬೆಳವಣಿಗೆ ಅಹಿತಕರ ಅನುಭವವನ್ನು ಉಂಟು ಮಾಡುತ್ತದೆ. ಇದರ ಹೊರತಾಗಿ ದೇಹದ ಅನೇಕ ಭಾಗಗಳಲ್ಲಿ ಕೂಡ ಈ ಸಮಸ್ಯೆ ಕಾಡುತ್ತದೆ. ಇನ್ನು ಈ ಸಮಸ್ಯೆಗೆ ಪ್ರಮುಖ ಕಾರಣ ಹ್ಯೂಮನ್ ಪಾಪಿಲೊಮನೊ ವೈರಸ್ (ಎಚ್ಪಿವಿ) ಆಗಿದೆ. ಇದೊಂದು ಸೋಂಕು ಆಗಿದ್ದು, 150ಕ್ಕೂ ಹೆಚ್ಚು ವೈರಸ್ ಮೇಕಪ್ಗಳು ಈ ವರ್ಗದಲ್ಲಿ ಬರುತ್ತದೆ.
ಇನ್ನು ಈ ಎಸ್ಡಿಟಿ, ಎಸ್ಟಿಐ, ಎಚ್ಪಿವಿಗಳಿ ಲೈಂಗಿಕತೆ ಅಥವಾ ಇನ್ನಿತರ ವರ್ಗಾವಣೆಯಿಂದಲೂ ಆಗುತ್ತದೆ. ಈ ವೈರಸ್ ಹೊಂದಿರುವ ವ್ಯಕ್ತಿಯೊಂದಿಗಿನ ಲೈಂಗಿಕ ಸಂಬಂಧದಿಂದ ಇದು ದೇಹಕ್ಕೆ ಹರಡುತ್ತದೆ. ಕಾಸ್ಮೋಟೊಲಾಜಿಸ್ಟ್ ಡಾ ಕರುಣಾ ಮಲ್ಹೋತ್ರಾ ತಿಳಿಸುವಂತೆ, ಈ ನರಹುಲಿ, ಗುಳ್ಳೆ ಮತ್ತು ಸ್ಕಿನ್ ಟ್ಯಾಗ್ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ಈ ಮೂರು ವಿಶಿಷ್ಟ ಗುಣವನ್ನು ಹೊಂದಿದ್ದು, ಇದರ ಕಾರಣ ಕೂಡ ಬೇರೆಯಾಗಿದೆ.
ಹೇಗೆ ಹರಡುತ್ತದೆ: ಈ ನರಹುಲಿಗಳಿ ಸಾಮಾನ್ಯವಾಗಿ ಚರ್ಮದ ಸಂಪರ್ಕದಿಂದ ಬರುತ್ತದೆ. ಕೈ ಕುಲುಕುವುದು, ಒಬ್ಬರ ಟವೆಲ್, ಶೂಗಳನ್ನು ಮತ್ತೊಬ್ಬರು ಬಳಕೆ ಮಾಡುವುದರಿಂದ ಕೂಡ ಬರುವ ಸಾಧ್ಯತೆ ಇದೆ. ಇನ್ನು ಈ ನರಹುಲಿಗಳು ಸಾಮಾನ್ಯವಾಗಿ ಒಬ್ಬರಿಂದ ಒಬ್ಬರಿಗೆ ಬರುವ ಹಿನ್ನಲೆ ಈ ಬಗ್ಗೆ ಕಾಳಜಿವಹಿಸುವುದು ಅಗತ್ಯವಾಗಿದೆ.