ಧೂಮಪಾನ ಆರೋಗ್ಯಕ್ಕೆ ಹಾನಿ. ಧೂಮಪಾನಿಗಳಿಗೆ ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಇದರ ಅಪಾಯದ ಅರಿವು ಮಾಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಆದರೂ, ಧೂಮಪಾನಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಧೂಮಪಾನಿಗಳು ಮಾತ್ರವಲ್ಲದೇ, ಪರೋಕ್ಷ ಧೂಮಪಾನಕ್ಕೆ ಒಳಗಾಗುವವರು ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಧೂಮಪಾನ ಬಾಯಿ, ಶ್ವಾಸಕೋಶದ ಕ್ಯಾನ್ಸರ್ ಜೊತೆಗೆ ಹೃದಯಾಘಾತದ ಅಪಾಯ ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಧೂಮಪಾನದಿಂದ ಹೊರಬರುವುದು ಅತ್ಯಗತ್ಯ.
ಧೂಮಪಾನ ಅನೇಕರಲ್ಲಿ ಚಟವಾಗಿದ್ದು, ಬಿಡುವುದು ಕಷ್ಟವಾದರೂ ಇದನ್ನು ಬಿಟ್ಟರೆ ಮಾತ್ರ ಅನೇಕ ಆರೋಗ್ಯ ಪ್ರಯೋಜನಗಳಿದೆ ಎಂಬುದನ್ನು ಮರೆಯಬಾರದು. ಧೂಮಪಾನ ತ್ಯಜಿಸಲು ಅನೇಕ ಸಮರ್ಪಣೆ ಮನೋಭಾವ ಮತ್ತು ಪ್ರಯತ್ನ ಕೂಡ ಅವಶ್ಯ. ತಂಬಾಂಕಿನಲ್ಲಿರುವ ನಿಕೋಟಿನ್ಗಳು ಮಿದುಳಿನಲ್ಲಿ ಡೂಪಮೈನ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದು ಉಲ್ಲಾಸ ಮೂಡಿಸುತ್ತದೆ. ಇದರಿಂದ ಹೆಚ್ಚು ಹೆಚ್ಚು ನಿಕೋಟಿನ್ ಸೇವಿಸುವಂತೆ ಪ್ರೇರಣೆ ನೀಡುತ್ತದೆ. ಕ್ರಮೇಣ ಚಟವಾಗಿ ರೂಪುಗೊಳ್ಳುತ್ತದೆ. ಧೂಮಪಾನವನ್ನು ಯಾವಾಗ ನೀವು ಬಿಡಬೇಕು ಎಂದು ನಿರ್ಧರಿಸುತ್ತೀರಾ ಆಗ ನಿಮ್ಮ ದೇಹದಲ್ಲಿನ ನಿಕೋಟಿನ್ ಕಡಿಮೆಯಾಗುತ್ತದೆ. ಇದರಿಂದ ಖಿನ್ನತೆ, ಹತಾಶೆಗಳ ಲಕ್ಷಣಗಳು ಶುರುವಾಗುತ್ತದೆ. ಇದರಿಂದಾಗಿ ಧೂಮಪಾನದಿಂದ ಹೊರಬರಲು ಯತ್ನಿಸಿದ ಅನೇಕರು ಮತ್ತೆ ಧೂಮಪಾನ ಆರಂಭಿಸುತ್ತದೆ. ಇದಕ್ಕಾಗಿ ಚಟದಿಂದ ಹೊರ ಬರಲು ಸರಿಯಾದ ರೀತಿಯ ಯೋಜನೆ ಅತ್ಯಗತ್ಯ. ಇದರಿಂದ ಮಾತ್ರ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ.
ಮೊದಲಿಗೆ ಏನೇ ಆದರೂ ಧೂಮಪಾನ ಬಿಟ್ಟು ಬಿಡುತ್ತೇನೆ ಎಂಬ ಗಟ್ಟಿ ನಿರ್ಧಾರಕ್ಕೆ ಬರಬೇಕು. ಇದನ್ನು ನಿಕಟ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ತಿಳಿಸಬೇಕು. ಬಳಿಕ ದಿನಾಂಕ ನಿರ್ಧರಿಸಬೇಕು. ಇದಕ್ಕೆ ಅಗತ್ಯವಾದ ಪ್ರಮಾಣಿಕತೆಯನ್ನು ರೂಢಿಸಿಕೊಳ್ಳಬೇಕು. ಯೋಜನೆಯನ್ನು ಅಳವಡಿಸಿಕೊಳ್ಳಲು ಸಾಕಷ್ಟು ಸಮಯ ಇದೆಯಾ ಎಂಬುದನ್ನು ತಿಳಿಯಬೇಕು.
ಇದಾದ ಬಳಿಕ ಧೂಮಪಾನದಿಂದ ಹೊರ ಬರುವ ವ್ಯವಸ್ಥೆಗೆ ಉತ್ತೇಜನ ನೀಡಬೇಕು. ಇದಕ್ಕಾಗಿ ನಿಮ್ಮ ಜೊತೆಯಲ್ಲಿ ಸಿಗರೇಟ್ ಚಟದಿಂದ ಹೊರಬರುವವರನ್ನು ಸೇರಿಸಿಕೊಳ್ಳಬೇಕು. ಈ ಸಂಬಂಧ ಸಮಾನ ಸಾಮಾಜಿಕ ಮಾಧ್ಯಮದ ಗುಂಪುಗಳನ್ನು ರೂಢಿಸಿಕೊಳ್ಳಬೇಕು.