ಕ್ಯಾನ್ಬೆರ್ರಾ (ಆಸ್ಟ್ರೇಲಿಯಾ):ಪರೀಕ್ಷೆಗೆ ಇನ್ನೇನು ವಾರ ಉಳಿದಿದೆ ಎಂದಾಗ ವಿದ್ಯಾರ್ಥಿಗಳಲ್ಲಿ ಆತಂಕ ಮೂಡುವುದು ಸಹಜ. ಈ ಆತಂಕ ನಿವಾರಣೆಗೆ ವಿದ್ಯಾರ್ಥಿಗಳು ತಮ್ಮ ಡಯಟ್ನಲ್ಲಿ ವಾಲ್ನಟ್ ಸೇರಿಸುವುದು ಒಳ್ಳೆಯದು ಎಂಬುದನ್ನು ಇತ್ತೀಚಿಗಿನ ಕ್ಲಿನಿಕಲ್ ಸಂಶೋಧನೆಯೊಂದು ತಿಳಿಸಿದೆ. ಪದವಿ ಪೂರ್ವ ವಿದ್ಯಾರ್ಥಿಗಳು ಅಧ್ಯಯನ ಸಮಯದಲ್ಲಿ ವಾಲ್ನಟ್ ಸೇವನೆಯು ಅವರ ಮಾನಸಿಕ ಆರೋಗ್ಯ ಮತ್ತು ಸಾಮಾನ್ಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂಬುದು ತಿಳಿದು ಬಂದಿದೆ.
ಜರ್ನಲ್ ನ್ಯೂಟ್ರಿಷಿಯನ್ನಲ್ಲಿ ಪ್ರಕಟವಾದ ಸೌತ್ ಆಸ್ಟ್ರೇಲಿಯಾ ಯುನಿವರ್ಸಿಟಿ ಅಧ್ಯಯನ ಅನಸಾರ, ವಾಲ್ನಟ್ ಕರುಳಿನ ಆರೋಗ್ಯ ಮತ್ತು ಅಧ್ಯಯನದ ಒತ್ತಡ ಹಾಗೂ ನಕಾರಾತ್ಮಕತೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಮಹಿಳೆಯರ ಮೇಲೆ ಇದು ಹೆಚ್ಚಿನ ಪರಿಣಾಮ ಹೊಂದಿದೆ. ವಾಲ್ನಟ್ ಮೆದುಳಿನ ಸಕ್ತಿ ಅಭಿವೃದ್ಧಿ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ ಎಂಬುದನ್ನು ಮುಖ್ಯ ಸಂಶೋಧಕರು ತಿಳಿಸಿದ್ದಾರೆ.
ಅಧ್ಯಯನದ ವೇಳೆ ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡವನ್ನು ಎದುರಿಸುತ್ತಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪರೀಕ್ಷೆಯ ಈ ಸಮಯ ಅವರಿಗೆ ಮೌಲ್ಯಯುತವಾಗಿದೆ ಎನ್ನುತ್ತಾರೆ ಹರ್ಸೆಲ್ಮನನ್. ಈ ಅಧ್ಯಯನಕ್ಕಾಗಿ 80 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 13 ವಾರ ಕಾರ ಮೂರು ಹಂತದಲ್ಲಿ ಪರೀಕ್ಷೆ ನಡೆಸಲಾಗಿದೆ.