ನವದೆಹಲಿ: ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಭಾರತದಾದ್ಯಂತ ತಂಪಾದ ವಾತಾವರಣ ಸಹಜ. ಈ ವಾತಾವರಣದಲ್ಲಿ ಕೂದಲು ಉದುರುವಿಕೆ ಗಮನಾರ್ಹವಾಗಿ ಹೆಚ್ಚಳವಾಗುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಪೋಷಕಾಂಶಗಳ ಕೊರತೆ. ಅದರಲ್ಲೂ ಪ್ರಮುಖವಾಗಿ ವಿಟಮಿನ್ ಇ ಅಲಭ್ಯತೆ. ಈ ಕಾಲೋಚಿತ ಸವಾಲಾದ ಕೂದಲಿನ ಚೈತನ್ಯವನ್ನು ರಕ್ಷಿಸಲು ಮತ್ತು ಹೆಚ್ಚಿಸಲು ವಿಟಮಿನ್ ಇ ಅನಿವಾರ್ಯ ಹಾಗೂ ಅವಶ್ಯಕವಾಗಿದೆ.
ವಿಟಮಿನ್ ಇ ಎಂಬುದು ಭಾರತೀಯರ ಕೂದಲ ರಕ್ಷಣೆಯ ಸಂಪ್ರದಾಯಗಳಲ್ಲಿ ಮೂಲಾಧಾರವಾಗಿದೆ. ಇದು ಗಮನಾರ್ಹವಾದ ಕೂದಲು-ಉತ್ತೇಜಿಸುವ ಕಾರಣಕ್ಕೆ ಎಲ್ಲೆಡೆ ಬೇಡಿಕೆಯೂ ಹೆಚ್ಚು. ವಿಟಮಿನ್ ಇಯಲ್ಲಿರುವ ಪ್ರಬಲ ಉತ್ಕರ್ಷಣಾ ನಿರೋಧಕ ಗುಣಲಕ್ಷಣಗಳು ಕೂದಲಿನ ಪೋಷಣೆಗೆ ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಕೂದಲಿನ ಕೋಶಗಳನ್ನು ಬಲಪಡಿಸುತ್ತವೆ ಮತ್ತು ಬೆಳವಣಿಗೆಗೆ ಪೂರಕವಾಗಿದೆ. ಆದ್ದರಿಂದ ಈ ಋತುಮಾನದ ಸವಾಲನ್ನು ಎದುರಿಸುವಲ್ಲಿ ಹಾಗೂ ಚಳಿಗಾಲದ ತಿಂಗಳುಗಳಲ್ಲಿ ಕೂದಲಿನ ಚೈತನ್ಯವನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ವಿಟಮಿನ್ ಇ ಬಳಕೆ ಸೂಕ್ತವಾಗಿದೆ.
ವಿಟಮಿನ್ ಇಗೆ ಇದೆ ಕೂದಲ ಬೆಳವಣಿಗೆ ಉತ್ತೇಜಿಸುವ ಶಕ್ತಿ: ವಿಟಮಿನ್ ಇ ಕೂದಲ ರಕ್ಷಣೆಯ ಡೊಮೇನ್‌ನಲ್ಲಿ ದೃಢವಾಗಿ ಹೊರಹೊಮ್ಮುತ್ತದೆ. ಇದು ಜೀವಕೋಶಗಳನ್ನು ಬಲಪಡಿಸುತ್ತದೆ. ಅಲ್ಲದೆ ಕೂದಲ ಬೆಳವಣಿಗೆಗೆ ಪ್ರೇರಕ. ಜೀವಕೋಶದ ಹಾನಿ ಕಡಿಮೆ ಮಾಡುವಲ್ಲಿ ಮತ್ತು ಕೂದಲಿನ ಕಿರುಚೀಲಗಳನ್ನು ಸದೃಢಗೊಳಿಸುವಲ್ಲಿ ಹಾಗೂ ಆಕ್ಸಿಡೇಟಿವ್ ಒತ್ತಡ ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಟಮಿನ್ ಇ ಸಮೃದ್ಧ ಆಹಾರಗಳು: ನಿಮಗೆ ಬೇಕಿರುವ ವಿಟಮಿನ್ ಇ ಅವಶ್ಯಕತೆಗಳನ್ನು ಬೀಜಗಳು, ಹ್ಯಾಝೆಲ್ನಟ್ಸ್, ಕಡಲೆಕಾಯಿಗಳು, ಪೈನ್ ಬೀಜಗಳು ಮತ್ತು ಬಾದಾಮಿಗಳನ್ನು ಒಳಗೊಂಡಿರುವ ವ್ಯಾಪಕ ಶ್ರೇಣಿಯ ಆಹಾರ ಉತ್ಪನ್ನಗಳಿಂದ ಪಡೆಯಬಹುದು. ಅಲ್ಲದೇ, ಸೂರ್ಯಕಾಂತಿ ಎಣ್ಣೆಯಂತಹ ಸಸ್ಯಜನ್ಯ ಎಣ್ಣೆಗಳು, ಪಾಲಕ್, ಕೇಲ್, ಮತ್ತು ಮಾವಿನ ಹಣ್ಣುಗಳು, ಪಪ್ಪಾಯಿಗಳು ಮತ್ತು ಕಿವಿಯಂತಹ ಹಣ್ಣುಗಳಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದಲ್ಲದೆ, ಕಂದು ಅಕ್ಕಿ ಮತ್ತು ಬಾರ್ಲಿಯಲ್ಲಿಯೂ ಪಡೆಯಬಹುದು.
ಚಳಿಗಾಲದಲ್ಲಿ ಈ ಪೌಷ್ಟಿಕಾಂಶವನ್ನು ಹೆಚ್ಚಿಸಲು ವಿಟಮಿನ್ ಇನೊಂದಿಗೆ ದೃಢೀಕರಿಸಿದ ಪೂರಕಗಳನ್ನು ಸೇವಿಸುವುದೊಳಿತು. ಉದಾಹರಣೆಗೆ, 100% ನೈಸರ್ಗಿಕ ಕ್ಯಾಪ್ಸುಲ್‌ಗಳು 480 IU ಸಸ್ಯ-ಆಧಾರಿತ ವಿಟಮಿನ್ ಇ ನೀಡುತ್ತದೆ. ಈ ಕ್ಯಾಪ್ಸುಲ್‌ಗಳು ಚರ್ಮ ಮತ್ತು ಕೂದಲನ್ನು ಬಲಪಡಿಸುತ್ತವೆ. ಇದು ಚರ್ಮದ ಕಾಂತಿ ಹೆಚ್ಚಿಸುತ್ತದೆ, ಮೊಡವೆ ತಡೆಗಟ್ಟುತ್ತದೆ. ಅಲೋವೆರಾವು ವಯಸ್ಸಾಗುವಿಕೆಯನ್ನು ತಡೆಯಲು ಹೆಸರುವಾಸಿ. ಅದೇ ರೀತಿ ಸೂರ್ಯಕಾಂತಿ ಎಣ್ಣೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕೂ ಹೆಚ್ಚುವರಿಯಾಗಿ ಗ್ಲುಟನ್, GMO, ಕೃತಕ ಸಿಹಿಕಾರಕಗಳು, ಸಕ್ಕರೆಯುತ ಪದಾರ್ಥಗಳಿಂದ ಮುಕ್ತವಾದ ಪೋಷಕಾಂಶ-ಸಮೃದ್ಧ ಪೂರಕಗಳು ಆಹಾರದ ಕೊರತೆಯನ್ನು ತುಂಬುತ್ತವೆ ಮತ್ತು ಉತ್ತಮ ಆರೋಗ್ಯವನ್ನು ಬೆಂಬಲಿಸುತ್ತವೆ.
ಖನಿಜ ತೈಲ, ಪ್ಯಾರಾಬೆನ್, ಸಲ್ಫೇಟ್‌ಗಳು, ಬಣ್ಣಗಳು, ಕೃತಕ ಸುಗಂಧಗಳು ಮತ್ತು ಸಿಲಿಕೋನ್‌ಗಳಿಂದ ಮುಕ್ತವಾದ ಸಸ್ಯಾಹಾರಿ, ಸಸ್ಯ ಆಧಾರಿತ ಫೇಸ್ ವಾಶ್, ಸೀರಮ್ ಮತ್ತು ನೈಟ್ ಜೆಲ್ ಅನ್ನೂ ಸಹ ನೀವು ಪ್ರಯತ್ನಿಸಬಹುದು. ಇದು ನಿಮ್ಮನ್ನು ಕಿರಿಯರಂತೆ ಕಾಣಲು ಹಾಗೂ ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯಕವಾಗುತ್ತದೆ ಎಂಬುದು ಪ್ರಾಯೋಗಿಕವಾಗಿ ಸಾಬೀತಾಗಿದೆ.
ಇದನ್ನೂ ಓದಿ:ಆತ್ಮಹತ್ಯೆ ಆಲೋಚನೆಯನ್ನು ರಕ್ತದ ಬಯೋಮಾರ್ಕರ್ ಗುರುತಿಸುತ್ತದೆ: ಅಧ್ಯಯನ