ಕರ್ನಾಟಕ

karnataka

ETV Bharat / sukhibhava

60 ವರ್ಷ ಮೇಲ್ಪಟ್ಟವರು ಕೇಳಿ! ಹೃದಯಾಘಾತ ತಡೆಗಟ್ಟಲು ವಿಟಮಿನ್​ ಡಿ ಪೂರಕಗಳು ಸಹಾಯಕ - ಹೃದಯಾಘಾತದಂತಹ ಪ್ರಮುಖ

ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕಣಗಳು ಇತ್ತೀಚೆಗೆ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಪರಿಹಾರವೂ ಇದೆ.

Vitamin D supplements help prevent heart attacks in people over 60
Vitamin D supplements help prevent heart attacks in people over 60

By

Published : Jun 30, 2023, 5:31 PM IST

ನ್ಯೂಯಾರ್ಕ್​: ವಿಟಮಿನ್ ಡಿ ಪೂರಕಗಳು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೃದಯಾಘಾತದಂತಹ ಪ್ರಮುಖ ಹೃದಯರಕ್ತನಾಳದ ಘಟನೆಗಳ ಅಪಾಯ ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ಹೃದಯರೋಗ ಸಮಸ್ಯೆ (ಸಿವಿಡಿ) ಸಾಮಾನ್ಯ ಸ್ಥಿತಿಯು ಹೃದಯ ಅಥವಾ ರಕ್ತದ ನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣವಾಗಿದೆ.

ಅಧ್ಯಯನ 21,315 ಜನರನ್ನು ಒಳಗೊಂಡಿದೆ. ಪ್ಲಸೀಬೊ ಗುಂಪಿನೊಂದಿಗೆ ಹೋಲಿಸಿದರೆ ಪ್ರಮುಖ ಹೃದಯರಕ್ತನಾಳದ ಘಟನೆಗಳ ದರವು ವಿಟಮಿನ್ ಡಿ ಯಲ್ಲಿ 9 ಪ್ರತಿಶತ ಕಡಿಮೆಯಾಗಿದೆ ಎಂದು ತೋರಿಸಿದೆ. ವಿಟಮಿನ್​ ಡಿ ಗುಂಪುಗಳು ಹೃದಯಾಘಾತ ದರ 19ರಷ್ಟು ಕಡಿಮೆ ಮತ್ತು ಕರೊನಾರಿ ರೆವಸ್ಕ್ಯೂಲರಿಸಷನ್​ 11ರಷ್ಟು ಕಡಿಮೆ ಇದೆ. ಈ ಎರಡು ಗುಂಪಿನ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.

ಪ್ರಯೋಗದ ಪ್ರಾರಂಭದಲ್ಲಿ ಸ್ಟ್ಯಾಟಿನ್​ಗಳು ಅಥವಾ ಇತರ ಹೃದಯರಕ್ತನಾಳದ ಔಷಧಗಳನ್ನು ಬಳಸುತ್ತಿರುವವರಲ್ಲಿ ಬಲವಾದ ಪರಿಣಾಮದ ಕೆಲವು ಸೂಚನೆ ಹೊಂದಿದೆ. 172 ಜನರು ವಿಟಮಿನ್​ ಡಿ ಪೂರಕಗಳನ್ನು ಮಾಸಿಕವಾಗಿ ವಿಟಮಿನ್​ ಡಿ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಪ್ರಮುಖವಾಗಿ ಹೃದಯ ರೋಗದ ತಡೆಗಟ್ಟಬಹುದು. ಸ್ಪ್ಯಾಟಿನ್​​ಗಳು ಮತ್ತು ಇತರ ಹೃದಯರಕ್ತನಾಳದ ಔಷಧಿಗಳನ್ನು ತೆಗೆದುಕೊಳ್ಳುವವರಲ್ಲಿ ಈ ರಕ್ಷಣಾತ್ಮಕ ಪರಿಣಾಮವನ್ನು ಹೆಚ್ಚು ಗುರುತಿಸಬಹುದು.

ಇದೇ ಸಮಯದಲ್ಲಿ, ವಿಟಮಿನ್ ಡಿ ಪೂರೈಕೆಯು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಅಕಾಲಿಕವಾಗಿ ಬದಲಾಯಿಸುವುದಿಲ್ಲ ಎಂದು ಸಂಶೋಧನೆ ತೋರಿಸುತ್ತದೆ. 2014 ರಿಂದ 2020ರವರೆಗೆ 21,315 ಆಸ್ಟ್ರೇಲಿಯಾದ 60ರಿಂದ 84 ವಯೋಮಾನದವನ್ನು ಪ್ರಯೋಗ ನಡೆಸಲಾಗಿದೆ. ಭಾಗಿದಾರರು ಯಾದೃಚ್ಛಿಕವಾಗಿ 60 ಸಾವಿರ ಐಯು ವಿಟಮಿನ್​ ಡಿ ಅನ್ನು ಮೌಖಿಕವಾಗಿ ಪ್ರತಿ ತಿಂಗಳು ಐದು ವರ್ಷ ತೆಗೆದುಕೊಂಡಿದ್ದಾರೆ. ಈ ಸಂಶೋಧನೆ ಸಣ್ಣ ಅಧ್ಯಯನವಾಗಿದ್ದು, ದೊಡ್ಡಮಟ್ಟದ ಜನಸಂಖ್ಯೆಗೆ ಅನ್ವಯವಾಗುವುದಿಲ್ಲ ಎಂದು ವರದಿ ತಿಳಿಸಿದೆ.

ಮರೆವಿನ ಕಾಯಿಲೆಗೂ ವಿಟಮಿನ್​ ಮದ್ದು:ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುವ ಡೆಮನ್ಶಿಯಾ ಮತ್ತು ಆಲ್ಝಮೈರಾ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 60 ವರ್ಷ ದಾಟಿದವರಲ್ಲಿ ಈ ಸಂಖ್ಯೆ ಹೆಚ್ಚಿದ್ದರೂ, ವಯಸ್ಕರಲ್ಲೂ ಸಮಸ್ಯೆ ಕಂಡುಬರದೇ ಇರಲಾರದು. ಮರೆವಿನ ಸಮಸ್ಯೆಗೆ ಪ್ರಮುಖ ಕಾರಣ ವಿಟಮಿನ್​ ಡಿ ಕೊರತೆ ಎಂಬುದು ಈಗಾಗಲೇ ಅನೇಕ ಹಿಂದಿನ ಅಧ್ಯಯನಗಳು ತಿಳಿಸಿವೆ. ಮರೆವಿನ ಸಮಸ್ಯೆ ಪ್ರಾರಂಭವಾಗುವ ಆರಂಭದಲ್ಲೇ ವಿಟಮಿನ್​ ಡಿ ಪೂರಕಗಳನ್ನು ಸೇವಿಸುವುದರಿಂದ ಇಂಥ ಸಮಸ್ಯೆಗಳನ್ನು ಒಂದು ಹಂತದವರೆಗೆ ಕಡಿಮೆ ಮಾಡಬಹುದು ಎಂದು ಎಕ್ಸೆಟರ್​ ಯುನಿವರ್ಸಿಟಿ ತಜ್ಞರು ತಿಳಿಸಿದ್ದಾರೆ. ಇದು ಅಲ್ಝಮೈರಾಗೆ ಕಾರಣವಾಗುವ ಅಮಿಲೋಯ್ಡ್​​ ಪ್ರೋಟಿನ್​ ಶೇಖರವಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿ:ಜಯದೇವ ಹೃದ್ರೋಗ ಸಂಸ್ಥೆಯಿಂದ 52 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿ ದಾಖಲೆ: ಡಾ.ಸಿ.ಎನ್.ಮಂಜುನಾಥ್‌

ABOUT THE AUTHOR

...view details