ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುವ ಡೆಮನ್ಶಿಯಾ ಮತ್ತು ಆಲ್ಝಮೈರಾ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 60 ವರ್ಷ ದಾಟಿದವರಲ್ಲಿ ಈ ಸಂಖ್ಯೆ ಹೆಚ್ಚಿದ್ದರೂ, ವಯಸ್ಕರಲ್ಲೂ ಸಮಸ್ಯೆ ಕಂಡುಬರದೇ ಇರಲಾರದು. ಮರೆವಿನ ಸಮಸ್ಯೆಗೆ ಪ್ರಮುಖ ಕಾರಣ ವಿಟಮಿನ್ ಡಿ ಕೊರತೆ ಎಂಬುದು ಈಗಾಗಲೇ ಅನೇಕ ಹಿಂದಿನ ಅಧ್ಯಯನಗಳು ತಿಳಿಸಿವೆ. ಮರೆವಿನ ಸಮಸ್ಯೆ ಪ್ರಾರಂಭವಾಗುವ ಆರಂಭದಲ್ಲೇ ವಿಟಮಿನ್ ಡಿ ಪೂರಕಗಳನ್ನು ಸೇವಿಸುವುದರಿಂದ ಇಂಥ ಸಮಸ್ಯೆಗಳನ್ನು ಒಂದು ಹಂತದವರೆಗೆ ಕಡಿಮೆ ಮಾಡಬಹುದು ಎಂದು ಎಕ್ಸೆಟರ್ ಯುನಿವರ್ಸಿಟಿ ತಜ್ಞರು ತಿಳಿಸಿದ್ದಾರೆ. ಇದು ಅಲ್ಝಮೈರಾಗೆ ಕಾರಣವಾಗುವ ಅಮಿಲೋಯ್ಡ್ ಪ್ರೋಟಿನ್ ಶೇಖರವಾಗುವುದನ್ನು ತಡೆಯುತ್ತದೆ.
ಈ ನಿಟ್ಟಿನಲ್ಲಿ ಸರಿಸುಮಾರು 70 ವರ್ಷದ ಆಸುಪಾಸಿನ 13,000 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಡೆಮನ್ಶಿಯಾ ಪ್ರಾರಂಭವಾಗಬೇಕಾಗಿದ್ದು, ಅವರಿಗೆ ವಿಟಮಿನ್ ಡಿ ಪೂರಕಗಳನ್ನು ನೀಡಲಾಗಿದೆ. ಮತ್ತೊಂದು ಗುಂಪಿಗೆ ಈ ಪೂರಕವನ್ನು ನೀಡಲಾಗಿಲ್ಲ. ಹತ್ತು ವರ್ಷಗಳ ಬಳಿಕ ಅವರನ್ನು ಗಮನಿಸಿದಾಗ ಮರೆವಿನ ಸಮಸ್ಯೆ ವಿಟಮಿನ್ ಡಿ ಪೂರಕ ಆಹಾರ ಪಡೆದವರಲ್ಲಿ ಪತ್ತೆಯಾಗಿಲ್ಲ. ವಯಸ್ಸಾದ ಬಳಿಕ ವಿಟಮಿನ್ ಡಿ ಮಾತ್ರೆ ತೆಗೆದುಕೊಳ್ಳುವುದರಿಂದ ಡೆಮನ್ಶಿಯ ಅಪಾಯವನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಬಹುದು.
ವಿಟಮಿನ್ ಡಿ ಮೆದುಳಿನಲ್ಲಿ ಕೆಲವು ಪರಿಣಾಮಗಳನ್ನು ಹೊಂದಿದೆ. ಇದು ನೆನಪಿನ ಶಕ್ತಿ ಮೇಲೆ ಬೀರುವ ಪರಿಣಾಮ ಕಡಿಮೆ ಮಾಡುತ್ತದೆ. ವಿಟಮಿನ್ ಡಿ ಮೆದುಳಿನಲ್ಲಿ ಅಮಿಲಾಯ್ಡ್ ಅನ್ನು ತೆರವುಗೊಳಿಸುವಲ್ಲಿ ತೊಡಗಿಸಿಕೊಂಡಿದೆ. ಡೆಮನ್ಶಿಯ ಬೆಳವಣಿಗೆಯಲ್ಲಿ ಒಳಗೊಂಡಿರುವ ಮತ್ತೊಂದು ಪ್ರೊಟೀನ್ ರಚನೆಯ ವಿರುದ್ಧ ಮೆದುಳನ್ನು ರಕ್ಷಿಸಲು ವಿಟಮಿನ್ ಡಿ ಸಹಾಯವನ್ನು ಮಾಡುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ.
ವಿಟಮಿನ್ ಡಿ ಪರಿಣಾಮವೇನು?: ಡೆಮನ್ಶಿಯಾ ಅಥವಾ ಬುದ್ದಿಮಾಂದ್ಯತೆ ಎಂಬುದು ನಿರ್ದಿಷ್ಟ ರೋಗವಲ್ಲ, ಆದರೆ ಹಲವಾರು ರೋಗಗಳು ಬುದ್ಧಿಮಾಂದ್ಯತೆಯನ್ನು ಉಂಟುಮಾಡಬಹುದು. ಇದರಿಂದ ಅರಿವಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಹೋಗಲಾಡಿಸಲು ವಿಟಮಿನ್ ಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅಧ್ಯಯನ ಕಂಡುಕೊಂಡಿದೆ.