ಪ್ರತಿಯೊಬ್ಬರಿಗೂ ಬೇಕಾದ ಅಗತ್ಯ ಪೋಷಕಾಂಶದಲ್ಲಿ ವಿಟಮಿನ್ ಡಿ ಒಂದು. ವಿಟಮಿನ್ ಡಿ ಕೊರತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಕ್ಕಳಲ್ಲಿ ಇದು ಚಯಾಪಚಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಧ್ಯಯನ ಅನುಸಾರ, ಚಯಾಪಚಯನ ಸಮಸ್ಯೆಗೆ ಚಿಕಿತ್ಸೆ ನೀಡದೇ ಹೋದಲ್ಲಿ ಹೃದಯರಕ್ತನಾಳದಂತಹ ಅನೇಕ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.
ಅಧ್ಯಯನದ ಫಲಿತಾಂಶವನ್ನು ಮೆಟಾಬೊಲಿಟ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. 14 ರಿಂದ 18 ವರ್ಷ ವಯೋಮಾನದ 78 ಮಂದಿ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಬಳಿಕ ವಿಟಮಿನ್ ಡಿ ಸೇವನೆ ಮಾಡುವ ಮತ್ತು ಸೇವನೆ ಮಾಡದಿರುವ ಎರಡು ಗುಂಪುಗಳನ್ನು ರಚಿಸಲಾಗಿದೆ.
ಸಂಶೋಧಕರ ಪ್ರಕಾರ, ಮಾನವನ ದೇಹದಲ್ಲಿ ಅನೇಕ ಪ್ರಕ್ರಿಯೆಗಳ ನಿಯಂತ್ರಣದಲ್ಲಿ ವಿಟಮಿನ್ ಡಿ ಒಳಗೊಂಡಿದೆ. ಇದು ಕೇವಲ ಮೂಳೆಗಳ ಟಿಶ್ಯೂಗೆ ಮಾತ್ರವಲ್ಲದೇ ಅಡಿಪೊಸ್ ಟಿಶ್ಯೂ ಸೇರಿದಂತೆ ಹಲವು ಪ್ರಯೋಜನ ಹೊಂದಿದೆ. ವಿಟಮಿನ್ ಡಿ ಸ್ನಾಯುಕೋಶ ಅಭಿವೃದ್ಧಿ, ಪ್ರತಿರಕ್ಷಣೆಯ ಜೊತೆಗೆ ಮೂಳೆ ವ್ಯವಸ್ಥೆಗೆ ಅತ್ಯಗತ್ಯ.
ವಿಟಿಮಿನ್ ಡಿ ಕೊರತೆಯು ರೋಗಶಾಸ್ತ್ರೀಯ ಅಸ್ಥಿಪಂಜರದ ಬೆಳವಣಿಗೆಗೆ ಸಂಬಂಧಿಸಿದ ಕೊಮೊರ್ಬಿಡಿಟಿಗಳಗಳೊಂದಿಗೆ ಸಂಬಂಧ ಹೊಂದಿದೆ. ಕಡಿಮೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆಹಾರದಲ್ಲಿ ಕೊರತೆ ಮತ್ತು ಹೆಪೆಟಿಕ್ ರೋಗದಿಂದಲೂ ಇದು ಕಡಿಮೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.