ಕರ್ನಾಟಕ

karnataka

ವಿಟಮಿನ್​ ಬಿ12 ಕೊರತೆ ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು; ಅಧ್ಯಯನ

By ETV Bharat Karnataka Team

Published : Oct 18, 2023, 10:47 AM IST

ವಿಟಮಿನ್​ ಬಿ 12 ಕೊರತೆಯಿಂದ ಉರಿಯೂತ ಉಂಟಾಗಿ ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ.

Vitamin B12 deficiency can lead to chronic inflammation
Vitamin B12 deficiency can lead to chronic inflammation

ನವದೆಹಲಿ: ವಿಟಮಿನ್​ ಬಿ 12 ಕೊರತೆಯು ದೀರ್ಘಾವಧಿ ಉರಿಯೂತದೊಂದಿಗೆ ಸಂಬಂಧವನ್ನು ಹೊಂದಿದ್ದು, ಇದು ಹೃದಯ ರಕ್ತನಾಳ, ಮಧುಮೇಹ ಸೇರಿದಂತೆ ಹಲವು ಹೃದಯದ ಸಮಸ್ಯೆಗೆ ಕಾರಣವಾಗುವ ಬಗ್ಗೆ ಹೊಸ ಅಧ್ಯಯನವೊಂದು ತಿಳಿಸಿದೆ.

ಈ ಅಧ್ಯಯನವನ್ನು ಜರ್ನಲ್​ ಆಫ್​ ದಿ ಸೈನ್ಸ್​​ ಆಫ್​ ಫುಡ್​ ಅಂಡ್​​ ಅಗ್ರಿಕಲ್ಚರ್​​ನಲ್ಲಿ ಪ್ರಕಟಿಸಲಾಗಿದೆ. ವರದಿಯಲ್ಲಿ ಸಂಶೋಧಕರು, ಬಿ12 ಚಲನೆಯ ಪರಿಣಾಮದ ಉರಿಯೂತದ ಕುರಿತು ಮನುಷ್ಯರು ಮತ್ತು ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ.

ಸ್ಪೇನ್​ನ ಸಂಶೋಧಕರ ತಂಡ ಈ ಅಧ್ಯಯನವನ್ನು ನಡೆಸಿದ್ದು, ವಿಟಮಿನ್​ ಬಿ 12ನ ತನಿಖೆ ನಡೆಸಿದೆ. ಇಂಟರ್‌ಲ್ಯೂಕಿನ್ (ಐಎಲ್) -6 ಮತ್ತು ಸಿ-ರಿಯಾಕ್ಟಿವ್ ಪ್ರೋಟೀನ್ ದೇಹದಲ್ಲಿ ಎರಡು ಅಣುಗಳ ಮಟ್ಟದಲ್ಲಿ ವಿಟಮಿನ್​ ಬಿ 12 ಪರಿಣಾಮವನ್ನು ಗಮನಿಸಲಾಗಿದೆ.

ಯೂನಿವರ್ಸಿಟಿ ಆಫ್ ಬಾರ್ಸಿಲೋನಾದ ಗ್ಯಾಸ್ಟ್ರೊನೊಮಿ ಪ್ರಾಧ್ಯಾಪಕ ರೋಸಾ ಎಂ ಲಮುಯೆಲಾ-ರಾವೆಂಟೋಸ್ ಮತ್ತು ಬಾರ್ಸಿಲೋನಾ ವಿಶ್ವವಿದ್ಯಾನಿಲಯದ ಸಂಶೋಧಕ ಇನೆಸ್ ಡೊಮಿಂಗ್ಯೂಜ್ ಲೋಪೆಜ್ ಈ ಅಧ್ಯಯನದ ನೇತೃತ್ವ ವಹಿಸಿದ್ದಾರೆ.

ಅವರು ಅಧ್ಯಯನಕ್ಕಾಗಿ ಯಾದ್ರಚಿಕ ಭಾಗಿದಾರರನ್ನು ಸ್ಪೇನ್​ ಮೂಲದ ದೊಡ್ಡ ಕ್ಲಿನಿಕಲ್​ ಟ್ರಯಲ್​ಗೆ ಬಳಕೆ ಮಾಡಿದರು. ಹೃದಯ ರಕ್ತನಾಳದ ಕಾಯಿಲೆಯ ಪ್ರಾಥಮಿಕ ತಡೆಗಟ್ಟುವಿಕೆಯ ಮೇಲೆ ಮೆಡಿಟರೇನಿಯನ್ ಆಹಾರದ ಪರಿಣಾಮವನ್ನು ನಿರ್ಣಯಿಸಲು ವಿನ್ಯಾಸ ಮಾಡಿದರು.

ವಿಟಮಿನ್​ ಬಿ 12 ಸೆರಂ ಮಟ್ಟವೂ ಉರಿಯೂತದ ಗುರುತುಗಳ ಸಾಂದ್ರತೆಯು ಇವೆರಡರ ನಡುವಿನ ಪರಸ್ಪರ ಸಂಬಂಧವನ್ನು ಬಹಿರಂಗಪಡಿಸಿತು. ನಮ್ಮ ಅಧ್ಯಯನವೂ ಸಾಮಾನ್ಯವಾಗಿದೆ. ಹೆಚ್ಚಿನ ವಿಟಮಿನ್​ ಬಿ 12 ಕಡಿಮೆ ಊರಿತಯುತದ ಗುರುತನ್ನು ಹೊಂದಿದ್ದು, ನಾವು ಇದನ್ನು ವಿಲೋಮ ಸಂಬಂಧ ಎಂದು ಕರೆದಿದ್ದೇವೆ ಎಂದು ಸಂಶೋಧಕ ಮಾರ್ಟಾ ಕೊವಾಚೆವಾ ತಿಳಿಸಿದರು.

ವಿಟಮಿನ್​ ಬಿ 12 ಕೊರತೆಯಿಂದ ಅನೇಕ ರೀತಿಯಲ್ಲಿ ಹಾನಿ ಮಾಡುತ್ತದೆ. ಆದರೆ ಇದೀಗ ನಾವು ಮಾಡಿರುವ ವರದಿ ಹೊಸ ಸಂಬಂಧಗಳ ಕುರಿತಾಗಿದೆ. ಇದರಿಂದ ಬಿ 12 ಕೊರತೆಯಿಂದ ನರವೈಜ್ಞಾನಿಕ ದೋಷಗಳಂತಹ ಕೆಲವು ವಿವರಿಸಲಾಗದ ರೋಗಲಕ್ಷಣಗಳು ಏಕೆ ಸಂಭವಿಸುತ್ತವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಲೇಖಕರು ತಿಳಿಸಿದ್ದಾರೆ.

ಅಧ್ಯಯನದಲ್ಲಿ ಕಂಡು ಬಂದ ಮತ್ತೊಂದು ಅಚ್ಚರಿ ಅಂಶ ಎಂದರೆ ಇಲಿಗಳಲ್ಲಿ ವಯಸ್ಸಿನೊಂದಿಗೆ ಬಿ 12 ಕೊರತೆ ಕಾಡುವುದಿಲ್ಲ. ಇಲಿಗಳನ್ನು ಅಧ್ಯಯನ ಮಾಡುವುದರಿಂದ ವಯಸ್ಸಾದ ಮಾನವರಲ್ಲಿ ಬಿ12 ಕೊರತೆಯನ್ನು ಹೇಗೆ ತಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ:ಭಾರತೀಯರ ಆರೋಗ್ಯ ಗುರಿಗಳ ಮೇಲೆ ಕುಟುಂಬ, ಸ್ನೇಹಿತರ ಪ್ರಭಾವ ಹೆಚ್ಚು, ಸಾಮಾಜಿಕ ಮಾಧ್ಯಮವಲ್ಲ: ಸಮೀಕ್ಷೆ

ABOUT THE AUTHOR

...view details