ಬೆಂಗಳೂರು: ಪ್ರಯಾಣ ಎಂಬುದು ಕೇವಲ ಹೊಸ ಸ್ಥಳಗಳ ಅನ್ವೇಷಣೆ ಅಲ್ಲ. ಅದು ನೆಮ್ಮದಿ, ಹೊಸತನ, ಉತ್ಸಾಹ, ಕಲಿಕೆಗೂ ಅವಕಾಶ ನೀಡುತ್ತದೆ. ಇಂತಹ ಪ್ರಯಾಣಿಗರಿಗೆ ಬೇಸಿಗೆ ಎಂಬುದು ಮತ್ತೊಂದು ದೊಡ್ಡ ಸಂಭ್ರಮ. ಅನೇಕ ಪ್ರಯಾಣಿಕರು ಈ ಋತುಮಾನದಲ್ಲಿ ಹೊಸ ಹೊಸ ಸ್ಥಳಗಳ ಅನ್ವೇಷಣೆ ಮಾಡುತ್ತಾರೆ. ಗಿರಿ ಶಿಖರ, ಕಡಲ ತೀರ, ಕಾಡು ಅಥವಾ ಗಿರಿಧಾಮಗಳ ಅರಸುತ್ತಾ ಹೋಗುತ್ತಾರೆ. ಈ ರೀತಿ ಬೇಸಿಗೆಯಲ್ಲಿ ಅದ್ಬುತ ತಾಣಗಳನ್ನು ಸುತ್ತ ಬೇಕು ಎಂದರೆ, ಇವು ಹೊಸ ಅನುಭೂತಿ ನೀಡುವುದು ಸುಳ್ಳಲ್ಲ. ಬೇಸಿಗೆ ಅವಧಿಯಲ್ಲಿ ಬೇಗೆಯನ್ನು ಹೊಡದೋಡಿಸಿ ಅಲ್ಲಿನ ಅದ್ಬುತ ಸೌಂದರ್ಯ ಅನುಭವಿಸಬೇಕು ಎಂದರೆ ಈ ಅದ್ಬುತ ತಾಣಗಳನ್ನು ಅನ್ವೇಷಿಸಬಹುದು.
ಲಡಾಖ್: ಹಿಮಾಲಯದ ಸೌಂದರ್ಯ ಸವಿಯಬೇಕು ಎಂಬ ಆಸೆ ಇದ್ದರೆ, ಅದಕ್ಕೆ ಲಡಾಖ್ ಸೂಕ್ತ ಸ್ತಳ. ಅದರಲ್ಲೂ ನೀವು ಬೈಕರ್ ಆಗಿದ್ದರೆ, ನಿಮ್ಮ ದೊಡ್ಡ ಕನಸು ನನಸಾಗಿಸುವ ತಾಣ ಇದಾಗಿದೆ. ಗ್ರಾಗ್ಗಿ ಬೆಟ್ಟ ಪ್ರದೇಶದಲ್ಲಿ ನೀಲಿ ಸರೋವರ, ಶುಭ್ರ ಆಕಾಶದ ಕೆಳಗೆ, ಬೈಕ್ನಲ್ಲಿ ಸಾಗುವುದು ಊಹಿಸಲಾಗದ ಅದ್ಬುತ ಅನುಭೂತಿ ನೀಡುತ್ತದೆ. ಇಲ್ಲಿನ ಪಚ್ಚೆ ಪಾಂಗಾಂಘ್ ತ್ಸೋ ಸರೋವಾರ ಮತ್ತು ನುಬ್ರಾ ಕಣಿವೆಯ ಮರಳು ದಿಬ್ಬಗಳ ಮೇಲೆ ಒಂಟೆ ಸವಾರಿಯನ್ನು ಕೂಡ ಮಾಡಬಹುದಾಗಿದೆ.
ಕಾಶ್ಮೀರ: ಬಹುತೇಕ ಪ್ರವಾಸಿಗರ ಮೆಚ್ಚಿನ ಸ್ಥಳ ಇದಾಗಿದೆ. ಚಳಿಗಾಲದಲ್ಲಿ ಒಂದು ರೀತಿಯ ಸೊಬಗು ಹೊಂದಿರುವ ಈ ಕಣಿವೆ ರಾಜ್ಯ ಬೇಸಿಗೆಯಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುತ್ತದೆ. ದಾಲ್ ಸರೋವರ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲಿ ಕಾಣುಬು ಗುಲ್ಮಾರ್ಗ್ನ ಗೊಂಡೊಲಾ, ಪಹಲ್ಗಾಮ್ನಲ್ಲಿ ಅದ್ಬುತ ಪ್ರಕೃತಿ ಅಹ್ಲಾದಿಸಬಹುದು.