ಹೈದರಾಬಾದ್: ವಿಡಿಯೋ ಗೇಮ್ಗಳ ಅತಿಯಾದ ಶಬ್ಧದಿಂದ ಕೇಳುವಿಕೆ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದು ಕಿವುಡತಕ್ಕೆ ಕಾರಣವಾಗಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ನಲ್ಲಿ ಈ ಕುರಿತು ಮಾಹಿತಿ ಪ್ರಕಟವಾಗಿದ್ದು, ವಿಡಿಯೋ ಗೇಮ್ ಆಡುವವರಿಗೆ ಎಚ್ಚರಿಕೆಯನ್ನು ನೀಡಿದೆ.
ವಿಡಿಯೋ ಗೇಮ್ ಆಡುವಾಗ ಬಳಕೆ ಮಾಡುವ ಶಬ್ಧ ಅತಿ ಹೆಚ್ಚಿರುತ್ತದೆ. ಹೆಡ್ಫೋನ್, ಇಯರ್ ಬಡ್ಸ್ಗಳ ಮೂಲಕ ಕೇಳಿದಾಗ ಅದರ ತೀವ್ರತೆ ಮತ್ತಷ್ಟು ಹೆಚ್ಚಿರಲಿದೆ. ಈ ಸಂಗೀತದ ಸ್ಥಳಗಳು ಅಸುರಕ್ಷಿತ ಶಬ್ಧದ ಮಟ್ಟವನ್ನು ಹೊಂದಿದೆ. ಪ್ರತಿನಿತ್ಯ ವಿಡಿಯೋ ವಿಡಿಯೋ ಗೇಮ್ಗಳಿಗೆ ಒಡ್ಡಿಕೊಳ್ಳುವುದರಿಂದ ಅನುಮತಿಸಲಾದ ಮಟ್ಟಕ್ಕಿಂತಲೂ ಹೆಚ್ಚಿನ ಶಬ್ಧಕ್ಕೆ ಒಡ್ಡಿಕೊಳ್ಳಲಾಗುವುದು. ಇದು ಕೇಳುವಿಕೆ ಮೇಲೆ ಭಾರೀ ಪರಿಣಾಮ ಬೀರಲಿದೆ.
ಈ ಅಧ್ಯಯನವನ್ನು 9 ದೇಶದಲ್ಲಿ 560 ಸಾವಿರ ಜನರನ್ನು ಭಾಗಿದಾರರನ್ನಾಗಿಸಿ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ಸೌತ್ ಕರೊಲಿನಾ ಯುನಿವರ್ಸಿಟಿ ಕೂಡ ಭಾಗಿಯಾಗಿದೆ. 2022ರಲ್ಲಿ ಜಗತ್ತಿನಾದ್ಯಂತ 300 ಮಿಲಿಯನ್ ಜನರು ವಿಡಿಯೋ ಗೇಮ್ ಆಡಿದ್ದಾರೆ. ಇದರಲ್ಲಿ 20 ರಿಂದ 68 ಪ್ರತಿಶತ ಯುವ ವಯಸ್ಕರಾಗಿದ್ದಾರೆ. ವಾರದಲ್ಲಿ 40 ಗಂಟೆಗಳ ಕಾಲ 75 ಡೆಸಿಬಲ್ನ ಶಬ್ಧವನ್ನು ಕೇಳಿದಾಗ ಅದು ಶ್ರವಣ ಸಮಸ್ಯೆಗೆ ಕಾರಣವಾಗುತ್ತದೆ. 83 ಡೆಸಿಬಲ್ನ ಶಬ್ಧವನ್ನು ವಾರದಲ್ಲಿ ಆರೂವರೆ ಗಂಟೆಗಳ ಕಾಲ ಕೇಳುವುದರಿಂದ ಯಾವುದೇ ಅಪಾಯವಿಲ್ಲ ಎಂದು ಅಧ್ಯಯನ ತಿಳಿಸಿದೆ.