ಸಿಡ್ನಿ (ಆಸ್ಟ್ರೇಲಿಯಾ):ವಿಡಿಯೊ ಗೇಮ್‌ಗಳು ಕುರಿತು ಹೊಸ ಅಧ್ಯಯನಯೊಂದು ಆಘಾತಕಾರಿ ಮಾಹಿತಿ ನೀಡಿದೆ. ವಿಡಿಯೊ ಗೇಮ್‌ಗಳಿಂದ ಮಕ್ಕಳಲ್ಲಿ ಈ ಹಿಂದೆ ಗುರುತಿಸದೇ ಇರುವ ಮಕ್ಕಳಲ್ಲಿ ಮಾರಣಾಂತಿಕವಾದ ಹೃದಯ ಬಡಿತದ (cardiac arrhythmias) ಸಮಸ್ಯೆ ಉಂಟುಮಾಡಬಹುದು ಎಂದು ಎಚ್ಚರಿಸಿದೆ.
ಎಲೆಕ್ಟ್ರಾನಿಕ್ (ವಿಡಿಯೋ) ಗೇಮ್‌ಗಳನ್ನು ಆಡುವಾಗ ಪ್ರಜ್ಞೆಯನ್ನು ಕಳೆದುಕೊಳ್ಳುವ ಮಕ್ಕಳಲ್ಲಿ ಅಸಾಮಾನ್ಯ ಹಾಗೂ ವಿಭಿನ್ನ ಮಾದರಿ ಸಮಸ್ಯೆಗಳನ್ನು ಆಸ್ಟ್ರೇಲಿಯಾದ ದಿ ಹಾರ್ಟ್ ಸೆಂಟರ್ ಫಾರ್ ಚಿಲ್ಡ್ರನ್‌ನ ಪ್ರಮುಖ ಲೇಖಕ ಕ್ಲೇರ್ ಎಂ.ಲಾಲಿ ಸೇರಿದಂತೆ ಅಧ್ಯಯನಕಾರರು ದಾಖಲಿಸಿದ್ದಾರೆ.
ವಿಡಿಯೋ ಗೇಮ್‌ಗಳು ಕೆಲವು ಮಕ್ಕಳಿಗೆ ಹೃದಯ ಬಡಿತ ಏಳಿರಿತದ ಗಂಭೀರ ಅಪಾಯವನ್ನು ತಂದೊಡ್ಡಬಹುದು. ಅದು ರೋಗಿಗಳಲ್ಲಿ ಮಾರಕವಾಗಬಹುದು. ಆದರೆ, ಸಾಮಾನ್ಯವಾಗಿ ಹಿಂದೆ ಗುರುತಿಸದ ಸಮಸ್ಯೆ ಎಂದು ಲಾಲಿ ಹೇಳಿದ್ದಾರೆ. ಎಲೆಕ್ಟ್ರಾನಿಕ್ ಗೇಮಿಂಗ್ ಮಾಡುವಾಗ ಹಠಾತ್ತನೆ ಪ್ರಜ್ಞೆ ಕಳೆದುಕೊಳ್ಳುವ ಮಕ್ಕಳನ್ನು ಹೃದಯ ತಜ್ಞರು ಪರೀಕ್ಷಿಸಬೇಕು. ಏಕೆಂದರೆ ಇದು ಗಂಭೀರ ಹೃದಯ ಸಮಸ್ಯೆಯ ಮೊದಲ ಸೂಚನೆಯಾಗಿರಬಹುದು ಎಂದು ತಿಳಿಸಿದ್ದಾರೆ.
ಸಾವುಗಳೂ ಸಂಭವಿಸಿವೆ: ಈ ಅಧ್ಯಯನಕ್ಕಾಗಿ ತಂಡವು ವ್ಯವಸ್ಥಿತ ವಿಮರ್ಶೆ ನಡೆದಿದೆ. ವಿಡಿಯೋ ಗೇಮ್‌ಗಳನ್ನು ಆಡುವಾಗ ಹಠಾತ್ ಪ್ರಜ್ಞೆ ಕಳೆದುಕೊಳ್ಳುವ ಮಕ್ಕಳ ಪ್ರಕರಣಗಳ ಅಧ್ಯಯನ ನಡೆಸಲಾಗಿದೆ. ಅಧ್ಯಯನಕ್ಕೆ ಒಳಪಡಿಸಿ 22 ಪ್ರಕರಣಗಳಲ್ಲಿ ಮಲ್ಟಿಪ್ಲೇಯರ್ ವಾರ್ ಗೇಮಿಂಗ್ ಹೆಚ್ಚಾಗಿ ಪ್ರಚೋದಕವಾಗಿದೆ ಹಾಗೂ ಕೆಲವು ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.