ಹೈದರಾಬಾದ್: ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸುವುದು ಶಿಕ್ಷಾರ್ಹ ಅಪರಾಧ. ಆದರೂ ಅನೇಕ ಮಂದಿ ಈ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ನಾಲ್ಕು ಗೋಡೆಗಳ ನಡುವೆ ನಡೆಯುವ ಇಂತಹ ದೌರ್ಜನ್ಯಗಳು ಹಲವು ವೇಳೆ ಬೆಳಕಿಗೆ ಬರುವುದಿಲ್ಲ. ಇಂತಹ ಸಂತ್ರಸ್ತರಿಗಾಗಿ ಇಂದು ಅನೇಕ ಸಾಮಾಜಿಕ ಸಂಸ್ಥೆಗಳು ಸೇರಿದಂತೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕು ಇದ್ದು, ಅದನ್ನು ಗೌರವಿಸಬೇಕಿದೆ.
ಇಂತಹ ಚಿತ್ರ ಹಿಂಸೆಗಳು ಮಾನವ ಹಕ್ಕುಗಳ ಉಲ್ಲಂಘನೆ ಆಗಿದ್ದು, ಇದು ಸಂತ್ರಸ್ತರಿಗೆ ಭಾರೀ ನೋವು ಉಂಟು ಮಾಡಿ, ಇದರಿಂದ ಬಳಲುವಂತೆ ಮಾಡುತ್ತದೆ. ಇಂತಹ ಕಿರುಕುಳ ಅಥವಾ ದೌರ್ಜನ್ಯ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು, ಅಂತಹ ಸಂತ್ರಸ್ತರ ಪರವಾಗಿ ಧ್ವನಿ ಎತ್ತುವ ಉದ್ದೇಶದಿಂದ ಅದಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಕಿರುಕುಳದ ಸಂತ್ರಸ್ತರಿಗೆ ಬೆಂಬಲ ನೀಡುವ ಈ ಅಂತಾರಾಷ್ಟ್ರೀಯ ದಿನವನ್ನು ಜಾರಿಗೆ ತರುವ ಸಂಬಂಧ ಡಿಸೆಂಬರ್ 12 1997ರಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು. ಅದರ ಅನುಸಾರವಾಗಿ ಈ ದಿನವನ್ನು ಜೂನ್ 26ರಂದು ಜಾಗತಿಕವಾಗಿ ಆಚರಣೆ ಮಾಡಲಾಗುತ್ತಿದೆ
ಕಿರುಕುಳಕ್ಕೆ ಒಳಗಾದ ಮಂದಿ ಮತ್ತು ಅಂತಹ ಸಂತ್ರಸ್ತರಿಗೆ ಬೆಂಬಲದ ಸಹಾಯದ ಕುರಿತು ಜಾಗೃತಿ ಮೂಡಿಸಲು ಕಿರುಕುಳದ ಸಂತ್ರಸ್ತರ ಅಂತಾರಾಷ್ಟ್ರೀಯ ಬೆಂಬಲ ದಿನದಂದು ಜಾಗತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ವಿಶ್ವ ಸಮಸ್ಥೆ ತಿಳಿಸಿದೆ. ಈ ದಿನದ ಉದ್ದೇಶ ಹಿಂದೆ, ಮತ್ತಿತ್ತರ ಕ್ರೌರ್ಯ, ಅಮಾನವೀಯತೆ ತೊಲಗಿಸಿ, ಸಂತ್ರಸ್ತರಿಗೆ ಬೆಂಬಲ ಮತ್ತು ಮಾನವ ಹಕ್ಕುನ್ನು ಪ್ರೋತ್ಸಾಹಿಸುವುದಾಗಿದೆ.