ಕರ್ನಾಟಕ

karnataka

By

Published : May 24, 2023, 2:01 PM IST

ETV Bharat / sukhibhava

ಬಲು ಅಪರೂಪದ ಮಾನಸಿಕ ಅಸ್ವಸ್ಥತೆಗಳಿವು..: ಈ ರೋಗಿಗಳಿಗೆ ಬೇಕು ಸೂಕ್ತ ಚಿಕಿತ್ಸೆ

ಮಾನಸಿಕ ಅಸ್ವಸ್ಥತೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಕಾಡುತ್ತವೆ.

Very rare mental disorders psychiatric syndromes
Very rare mental disorders psychiatric syndromes

ಸ್ಕಿಜೋಪ್ರಿನಿಯಾ ಮತ್ತು ಬೈಪ್ಲೊರ್​ ಸಮಸ್ಯೆಯಂತಹ ಅನೇಕ ಮಾನಸಿಕ ಅಸ್ವಸ್ಥತೆಯನ್ನು ಅನೇಕ ಮಂದಿ ಅನುಭವಿಸುತ್ತಿರುತ್ತಾರೆ. ಆದರೆ, ಇದಕ್ಕಿಂತ ಕೆಲವೊಂದು ಮಾನಸಿಕ ಅಸ್ವಸ್ಥತೆಗಳು ತುಂಬಾ ಅಪರೂಪವಾಗಿವೆ. ಅಂತಹ ಐದು ಅಪರೂಪದ ವಿಚಿತ್ರ ಮಾನಸಿಕ ಅಸ್ವಸ್ಥತೆಯ ಪರಿಚಯ ಇಲ್ಲಿದೆ.

ಫ್ರೆಗೊಲಿ ಅಸ್ವಸ್ಥತೆ: ಒಬ್ಬ ವ್ಯಕ್ತಿಯಲ್ಲಿ 'ಅನೇಕ ವ್ಯಕ್ತಿಗಳು' ಇರುತ್ತಾರೆ. ಅವರು ತಮ್ಮ ಇರುವಿಕೆಯನ್ನು ಬದಲಾಯಿಸುತ್ತಾರೆ ಎಂದು ನಂಬುವ ಮಾನಸಿಕ ಸ್ಥಿತಿಗಳನ್ನು ಫ್ರೆಗೊಲಿ ಸಿಂಡ್ರೋಮ್​ ಎನ್ನಲಾಗುವುದು. ಇದನ್ನು ಬಳಿಕ ಲೆಪೊಲ್ಡೊ ಪ್ರೆಗೊಲಿ ಎಂದು ಕೂಡ ಗುರುತಿಸಲಾಗಿದೆ. ಇವರನ್ನು ಸಾಮಾನ್ಯವಾಗಿ ವೇಷಧಾರಿಗಳು ಎಂದು ಗುರುತಿಸಲಾಗುತ್ತದೆ. ಇಟಾಲಿಯನ್​ ರಂಗಭೂಮಿ ಕಲಾವಿದ ಈ ಸಮಸ್ಯೆಗೆ ಹೆಸರಾಗಿದ್ದ. ಆತ ವೇದಿಕೆ ಮೇಲಿದ್ದಾಗ ತನ್ನ ವ್ಯಕ್ತಿತ್ವವನ್ನು ತಕ್ಷಣಕ್ಕೆ ಗಮನಾರ್ಹವಾಗಿ ಬದಲಾಯಿಸುತ್ತಿದ್ದನಂತೆ. ಇದು ಮಿದುಳಿನ ಗಾಯ ಅಥವಾ ಪಾರ್ಕಿನ್ಸನ್​ ಸಮಸ್ಯೆಯ ಚಿಕಿತ್ಸೆಯ ಔಷಧಗಳ ದೋಷದಿಂದ ಆಗಬಹುದು. 2018 ರಲ್ಲಿ ಈ ಸಂಬಂಧಿತ 50 ಪ್ರಕರಣಗಳು ಜಗತ್ತಿನಲ್ಲಿ ವರದಿಯಾಗಿದ್ದವು.

ಕ್ಯಾಟರ್ಡ್​​ ಸಿಂಡ್ರೋಮ್​​: ಈ ಸಮಸ್ಯೆಗಳನ್ನು ವಾಂಕಿಂಗ್​ ಕೊರ್ಪ್ಸೆ ಸಿಂಡ್ರೋಮ್​ ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಗಳು ತಾವು ಬದುಕಿಲ್ಲ ಸತ್ತಿದ್ದೇವೆ, ಜಗತ್ತಿನಲ್ಲಿ ತಾವು ಅಸ್ತಿತ್ವದಲ್ಲಿಲ್ಲ ಎಂಬ ಭ್ರಮೆಯಲ್ಲಿ ಇರುತ್ತಾರೆ. ಮತ್ತೆ ಕೆಲವರು ತಮ್ಮ ದೇಹದ ಅಂಗಗಳು ಕಣ್ಮರೆಯಾಗಿದೆ ಎಂಬ ಭ್ರಮೆಯಲ್ಲಿರುತ್ತಾರೆ. 19 ನೇ ಶತಮಾನದಲ್ಲಿ ಫ್ರೆಂಚ್​ ನರವಿಜ್ಞಾನಿ ಜುಲೆಸ್ ಕೊತರ್ಡ್​​ ಈ ಅಸ್ವಸ್ಥೆಗೆ ಹೆಸರನ್ನು ನೀಡಿದೆ. ಈ ಸಮಸ್ಯೆ ಮೊದಲ ಬಾರಿಗೆ 1882 ರಲ್ಲಿ ವಿವರಿಸಲಾಗಿದೆ. ಕ್ಯಾಟರ್ಡ್​​ ಸಿಂಡ್ರೋಮ್ಗೆ ಸ್ಕಿಜೋಪ್ರಿನಿಯಾ, ಖಿನ್ನತೆ ಮತ್ತು ಪೈಪ್ಲೊರಾ ಸಮಸ್ಯೆಗಳ ಅಪಾಯವಾಗಿದೆ. ಮಿದುಳಿನ ಪ್ರದೇಶದಲ್ಲಿನ ಭಾವನಾತ್ಮಕ ಅಂಶಗಳು ಮತ್ತು ಮುಖದ ಗುರುತು ಪತ್ತೆ ಮಾಡುವ ನರಗಳ ಸಂಪರ್ಕ ಕಡಿತವೂ ಇದಕ್ಕೆ ಕಾರಣ.

ಏಲಿಯನ್​ ಹ್ಯಾಂಡ್​ ಸಿಂಡ್ರೋಮ್​: ಇದು ಕೂಡ ಬಲವಾದ ನರ ಅಸ್ವಸ್ಥೆಯ ಸಮಸ್ಯೆ ಇದಾಗಿದೆ. ಈ ಸಮಸ್ಯೆ ಹೊಂದಿರುವ ವ್ಯಕ್ತಿಗಳು ತಮ್ಮ ಕೈ ತಮಗೆ ಸಂಬಂಧಿಸಿದಲ್ಲ ಎಂಬ ಕಲ್ಪನೆಯಲ್ಲಿ ವಾಸ ಮಾಡುತ್ತಾರೆ. ಇದನ್ನು ಮೊದಲ ಬಾರಿ 1908 ರಲ್ಲಿ ಪತ್ತೆ ಮಾಡಲಾಯಿತು. 1970 ರವರೆಗೆ ಇದರ ಬಗ್ಗೆ ಸ್ಪಷ್ಟ ವ್ಯಾಖ್ಯಾನ ನೀಡಿರಲಿಲ್ಲ. ಮಿದುಳು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಈ ರೀತಿ ನಡವಳಿಕೆ ಪತ್ತೆಯಾಗುತ್ತದೆ ಎಂದು ಅಮೆರಿಕನ್​ ನ್ಯೂರೋಪಿಸಿಯಾಲಜಿಸ್ಟ್​​ ಜೋಸೆಫ್​ ಬೊಗೆನ್​ ತಿಳಿಸಿದ್ದಾರೆ. ಇವರು ಸಂವೇದನಾ ಅಸ್ವಸ್ಥೆಯನ್ನು ಹೊಂದಿರುತ್ತಾರೆ ಎಂದಿದ್ದಾರೆ.

ಎಕ್​ಬೊಮ್​ ಸಿಂಡ್ರೋಮ್​: ಈ ಅಸ್ವಸ್ಥೆಯನ್ನು ಹೊಂದಿರುವವರು ತಮ್ಮ ಚರ್ಮದ ಕೆಳಗೆ ಕೀಟಗಳು ತೆವಳುತ್ತಿರುತ್ತದೆ ಎಂಬ ಭ್ರಮೆ ಹೊಂದಿರುತ್ತಾರೆ. ಇದನ್ನು ಕಾರ್ಲ್​ ಎಕ್ಬೊನ್​ ಎಂದು ಹೆಸರಿಸಲಾಗಿದೆ. 1930ರಲ್ಲಿ ಸ್ವೀಡನ್​ ನ್ಯೂರಾಲಾಜಿಸ್ಟ್​​ ಇದನ್ನು ಪತ್ತೆ ಮಾಡಿದ್ದರು. ಈ ಸಮಸ್ಯೆ ಹೊಂದಿರುವವರ ಸಂಖ್ಯೆ ನಿಖರವಾಗಿ ಪತ್ತೆಯಾಗಿಲ್ಲ. ಆದರೆ, ವರದಿ ಅನಸಾರ ಅಮೆರಿಕದಲ್ಲಿ ಕ್ಲಿನಿಕ್​ಗಳಲ್ಲಿ ವಾರ್ಷಿಕವಾಗಿ 20 ಪ್ರಕರಣಗಳು ವರದಿಯಾಗುತ್ತದೆ. ಈ ಅಸ್ವಸ್ಥತೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿದೆ. ವ್ಯಕ್ತಿಯ 40ನೇ ವಯೋಮಿತಿ ಬಳಿಕ ಈ ಸಮಸ್ಯೆಗಳ ಪತ್ತೆಯಾಗುತ್ತದೆ.

ಆಲಿಸ್​ ಇನ್​ ವಂಡರ್​ಲ್ಯಾಂಡ್​ ಸಿಂಡ್ರೋಮ್​: ತೊಡ್ಡ್​​ ಸಿಂಡ್ರೋ ಎಂದು ಕರೆಯುವ ಈ ಮಾನಸಿಕ ಅಸ್ವಸ್ಥತೆ ಹೊಂದಿರುವವರು ದೇಹ, ದೃಷ್ಟಿ, ಶ್ರವಣ, ಸ್ಪರ್ಶ ಮತ್ತು ಸ್ಥಳ, ಸಮಯದ ಪ್ರಜ್ಞೆಯನ್ನು ವಿಕೃತಗೊಳಿಸುತ್ತದೆ. ಈ ಸಮಸ್ಯೆ ಹೊಂದಿರುವವರ ಕಾಣುವ ವಸ್ತುಗಳು ನೈಜ ಸ್ಥಿತಿಗಿಂತ ಸಣ್ಣದಾಗಿದೆ ಎಂದು ಕೆಲವರು ಭಾವಿಸಿದರೆ, ಮತ್ತೆ ಕೆಲವರು ದೊಡ್ಡದಾಗಿದೆ ಎಂದು ಭಾವಿಸುತ್ತಾರೆ. ಇದು ಮಕ್ಕಳು ಮತ್ತು ಮೈಗ್ರೆನ್​ ಹೊಂದಿರುವವರಲ್ಲಿ ಹೆಚ್ಚಾಗಿ ಕಾಣುತ್ತದೆ. ವಿಶ್ರಾಂತಿ ಸೇರಿದಂತೆ ಉತ್ತಮ ಸೂಕ್ತ ಚಿಕಿತ್ಸೆ ಇದಕ್ಕೆ ಪರಿಹಾರವಾಗಬಲ್ಲದು.

ಇದನ್ನೂ ಓದಿ: ಆರೋಗ್ಯಕರ ಆಹಾರ ಯುಗ: ಪರಿಣಾಮಕಾರಿ ಊಟ ಯೋಜನೆ ರೂಪಿಸುವುದು ಹೇಗೆ?

ABOUT THE AUTHOR

...view details