ಹೈದರಾಬಾದ್, ತೆಲಂಗಾಣ:ನಮ್ಮ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಪ್ರಮುಖವಾಗಿ ಆಹಾರವು ಅತಿಮುಖ್ಯ ಅಂಶಗಳಲ್ಲೊಂದು. ನೀವು ಸರಿಯಾದ ಆಹಾರವನ್ನು ಸೇವಿಸುವ ಗುಣ ಅಥವಾ ಅಭ್ಯಾಸ ಹೊಂದಿದ್ದರೆ, ಅರ್ಧ ರೋಗಗಳನ್ನ ಗೆದ್ದಂತೆ. ಅಷ್ಟೇ ಅಲ್ಲ ಬಹುತೇಕ ಕಾಯಿಲೆಗಳನ್ನು ತಡೆಯುವ ಶಕ್ತಿಯನ್ನು ಹೊಂದಿರುತ್ತೀರಾ ಎಂದೇ ಅರ್ಥ. ಸಸ್ಯಾಹಾರಿ ಆಹಾರವು ಅನೇಕ ರೋಗಗಳನ್ನು ತಡೆಯುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಸಂಪೂರ್ಣವಾಗಿ ಸಸ್ಯಾಹಾರವನ್ನು ಸೇವಿಸುವವರು ಪೌಷ್ಟಿಕಾಂಶದ ಕೊರತೆ ತಪ್ಪಿಸಲು ಸರಿಯಾದ ಕಾಳಜಿ ವಹಿಸಬೇಕಾಗಿರುವುದು ಅತ್ಯಗತ್ಯವಾಗಿದೆ.
ಸಸ್ಯಾಹಾರವು ತುಂಬಾ ಆರೋಗ್ಯಕರ ಎಂದು ಹೇಳಲಾಗುತ್ತದೆ. ಆದರೆ ಮಾಂಸದ ಮಟ್ಟದಲ್ಲಿ ಪ್ರೋಟೀನ್ಗಳನ್ನು ಹೊಂದಿರುವುದಿಲ್ಲ ಎಂದು ಅನೇಕ ಜನರಲ್ಲಿ ಅಭಿಪ್ರಾಯವಿದೆ. ಸಸ್ಯಾಹಾರಿಗಳು ಪ್ರೋಟೀನ್ ಜೊತೆಗೆ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯಲು ಕಾಳುಗಳು ಮತ್ತು ಧಾನ್ಯಗಳಂತಹ ವಿವಿಧ ಆಹಾರಗಳನ್ನು ಬಳಕೆ ಮಾಡುತ್ತಾರೆ. ಮಾಂಸಹಾರ ಬದಲು ನಾವು ಯಾವರೀತಿಯ ಸಸ್ಯಾಹಾರಿ ಆಹಾರ ಸೇವಿಸಿದ್ರೆ ಪೋಷಕಾಂಶಗಳು ದೊರೆಯುತ್ತವೆ ಎಂಬುದರ ಕುರಿತು ತಿಳಿದುಕೊಳ್ಳಬೇಕು.
ಬೇಳೆಕಾಳುಗಳು, ತರಕಾರಿಗಳು, ಕ್ಯಾರೆಟ್, ಅಣಬೆ, ಲೆಟಿಸ್ ಮುಂತಾದ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಮೊಟ್ಟೆ ತಿನ್ನುವವರು ಅವುಗಳನ್ನು ಪ್ರೋಟೀನ್ಗಾಗಿ ತೆಗೆದುಕೊಳ್ಳಬಹುದು. ಸಸ್ಯಾಹಾರಿಗಳು ಧಾನ್ಯಗಳು, ಬೇಳೆಕಾಳುಗಳು, ಬೀಜಗಳು ಮತ್ತು ತರಕಾರಿಗಳಂತಹ ಆಹಾರಗಳ ಮೂಲಕ ತಮ್ಮ ಅಗತ್ಯ ಕ್ಯಾಲೋರಿಗಳು ಮತ್ತು ಪೋಷಕಾಂಶಗಳನ್ನು ಪಡೆಯಬಹುದು. ಕೆಲವು ಸಸ್ಯಾಹಾರಿಗಳು ಹಾಲು ಮತ್ತು ಮೊಟ್ಟೆಗಳನ್ನು ತಿನ್ನುತ್ತಾರೆ. ಇವುಗಳನ್ನು ಸೇವಿಸುವವರಿಗೂ ಮಾಂಸಾಹಾರಿಗಳಷ್ಟೇ ಪ್ರಮಾಣದ ಪೋಷಕಾಂಶಗಳು ಲಭಿಸುತ್ತವೆ. ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು.
ಲ್ಯಾಕ್ಟೋ ವೆಜಿಟೇರಿಯನ್, ಓವೋ ವೆಜಿಟೇರಿಯನ್, ಪ್ಯೂರ್ ವೆಜಿಟೇರಿಯನ್, ವೆಗನ್ ಹೀಗೆ ವಿವಿಧ ರೀತಿಯ ಸಸ್ಯಾಹಾರಿಗಳಿವೆ. ಲ್ಯಾಕ್ಟೋ ಸಸ್ಯಾಹಾರಿಗಳು ಅವರು ಇಷ್ಟಪಡುವ ಯಾವುದೇ ಡೈರಿ ಉತ್ಪನ್ನಗಳನ್ನು ಸೇವಿಸುತ್ತಾರೆ. ಓವೋ ಸಸ್ಯಾಹಾರಿಗಳು ಮೊಟ್ಟೆಗಳನ್ನು ತಿನ್ನುತ್ತಾರೆ. ಸಸ್ಯಾಹಾರಿಗಳು ತರಕಾರಿಗಳು ಮತ್ತು ಸಸ್ಯಗಳಿಂದ ಉತ್ಪತ್ತಿಯಾಗುವ ಆಹಾರವನ್ನು ಮಾತ್ರ ತಿನ್ನುತ್ತಾರೆ. ಅವರು ಡೈರಿ ಉತ್ಪನ್ನಗಳನ್ನು ಸಹ ತೆಗೆದುಕೊಳ್ಳುವುದಿಲ್ಲ. ಸಸ್ಯಾಹಾರಿಗಳು ತಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಸಮತೋಲಿತ ಆಹಾರವನ್ನು ಸೇವಿಸಬೇಕು ಎಂದು ಖ್ಯಾತ ಆಹಾರ ತಜ್ಞೆ ಡಾ.ಶ್ರಾವ್ಯ ಹೇಳುತ್ತಾರೆ.
ಸಸ್ಯಾಹಾರಿ ಡಯಟ್ನಿಂದ ದೂರವಿರಿ : ಲ್ಯಾಕ್ಟೋ ಸಸ್ಯಾಹಾರಿಗಳು ಪನೀರ್ನಂತಹ ಡೈರಿ ಉತ್ಪನ್ನಗಳನ್ನು ಸೇವಿಸಿದರೆ ಹೆಚ್ಚಿನ ಕ್ಯಾಲ್ಸಿಯಂ ಮತ್ತು ಪ್ರೋಟೀನ್ಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಹೆಚ್ಚು ಮೊಟ್ಟೆಗಳನ್ನು ಸೇವಿಸುವ ಮತ್ತು ಡೈರಿ ಉತ್ಪನ್ನಗಳನ್ನು ತ್ಯಜಿಸುವ ಓವೋ ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಎಲ್ಲ ರೀತಿಯ ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಆಗಾಗ್ಗೆ ಹಣ್ಣುಗಳನ್ನು ತಿನ್ನಲು ಸಹ ಸಲಹೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ಡಾ.ಶ್ರಾವ್ಯ.