ಹೈದರಾಬಾದ್: ಸಸ್ಯಾಧಾರಿತ ಉತ್ಪನ್ನಗಳ ಹೆಚ್ಚು ಸೇವನೆ ಅಥವಾ ತರಕಾರಿ, ಕಾಳುಗಳು, ನಟ್ಸ್ಗಳಿಂದ ಕೂಡಿದ ಡಯಟಿಂಗ್ನಿಂದ ಕೋವಿಡ್ 19 ಸೋಂಕನ್ನು ಶೇ 39ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಬ್ರೆಜಿಲ್ನ ಸಾವೊ ಪೌಲೊ ಯುನಿವರ್ಸಿಟಿ ಸಂಶೋಧಕರು ತಿಳಿಸಿರುವಂತೆ ಕಡಿಮೆ ಡೈರಿ ಉತ್ಪನ್ನಗಳು ಮತ್ತು ಮಾಂಸಗಳು ಸೋಂಕಿಗೆ ಕಾರಣವಾಗಬಹುದು. ಸಸ್ಯಾಧಾರಿತ ಆಹಾರಗಳು ಸಮೃದ್ಧವಾದ ಆ್ಯಂಟಿ ಆಕ್ಸಿಡೆಂಟ್, ಫೈಟೊಸ್ಟೆರಾಲ್ ಮತ್ತು ಪಾಲಿಫಿನಾಲ್ಗಳಿಂದ ಕೂಡಿದ್ದು, ಇವು ರೋಗ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಅನೇಕ ರೀತಿಯ ಕೋಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದು ರೋಗ ನಿರೋಧಕ ಅಂಶವನ್ನು ನೇರವಾಗಿ ಪ್ರದರ್ಶಿಸುತ್ತದೆ ಎಂದು ತಂಡವೂ ತಿಳಿಸಿದೆ. ಈ ಅಧ್ಯಯನವನ್ನು ಬಿಎಂಜೆ ನ್ಯೂಟ್ರಿಷನ್ ಪ್ರಿವೆನ್ಷನ್ ಮತ್ತು ಹೆಲ್ತ್ನಲ್ಲಿ ಓದಲು ಲಭ್ಯವಿದೆ.
ಆಹಾರದ ಅಂಶಗಳು ಕೋವಿಡ್ ರೋಗಿಗಳಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂದು ಮೌಲ್ಯಮಾಪನ ಮಾಡಲು ತಂಡವು ಮುಂದಾಗಿದೆ. ಇದಕ್ಕಾಗಿ 2022ರ ಮಾರ್ಚ್ನಿಂದ ಜುಲೈವರೆಗೆ 702 ವಯಸ್ಕ ಸ್ವಯಂ ಕಾರ್ಯಕರ್ತರು ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ 424 ಮಂದಿ ಒಮ್ನಿವೈರಸ್ (ಸಸ್ಯ ಮತ್ತು ಪ್ರಾಣಿ ಮಾಂಸ ಸೇವಿಸುವವರಾಗಿದ್ದು), 278 ಮಂದಿ ಸಸ್ಯಾಧಾರಿತ ಆಹಾರ ಸೇವಿಸುವ ಗುಂಪಿನವರಾಗಿದ್ದಾರೆ.
ಆಹಾರ ಸೇವನೆ ಗುಂಪನ್ನು ಮೂರು ವರ್ಗವಾಗಿ ವಿಂಗಡಿಸಲಾಗಿದೆ. ವಾರದಲ್ಲಿ ಮೂರು ಬಾರಿ ಮಾಂಸ ಅಥವಾ ವಾರದಲ್ಲಿ ಕೆಲವು ಸಮಯ ಮಾಂಸ ಸೇವನೆ ಗುಂಪು ಮತ್ತು ತರಕಾರಿ ಸೇವಿಸುವ ಗುಂಪು ಮತ್ತು ಸಸ್ಯಾಹಾರಿಗಳು ಮತ್ತು ವೇಗನ್ ಎಂದು ವಿಭಾಗಿಸಲಾಗಿದೆ.