ನ್ಯೂಯಾರ್ಕ್: ತರಕಾರಿಗಳನ್ನು ಸುಲಭವಾಗಿ, ಬೇಗ ಹೆಚ್ಚಲು ಮರ ಅಥವಾ ಪ್ಲಾಸ್ಟಿಕ್ ಬೋರ್ಡ್‌ಗಳನ್ನು ಬಳಸುವುದು ಸಹಜ. ಇಂತಹ ಬೋರ್ಡ್‌ಗಳ ಕುರಿತು ಹೊಸ ಅಧ್ಯಯನವೊಂದನ್ನ ನಡೆಸಲಾಗಿದೆ. ತರಕಾರಿಗಳನ್ನು ಕತ್ತರಿಸುವ ಬೋರ್ಡ್ಗಳಿಂದ ಆಹಾರದಲ್ಲಿ ಹಾನಿಕಾರಕ ಮೈಕ್ರೋ ಪ್ಲಾಸ್ಟಿಕ್ ಅಂಶ ಹೆಚ್ಚಿರುತ್ತದೆ ಎಂದು ಹೊಸ ಭಾರತೀಯ ಅಧ್ಯಯನ ತಿಳಿಸಿದೆ.
ಬೋರ್ಡ್ಗಳಿಗೆ ಪದೇ ಪದೆ ಕಟ್ ಮಾಡುವುದರಿಂದ ಇದರಲ್ಲಿನ ಮೈಕ್ರೋ ಪ್ಲಾಸ್ಟಿಕ್ಗಳು ಆಹಾರ ಸೇರುತ್ತಿವೆ. ಈ ಮೈಕ್ರೋಪ್ಲಾಸ್ಟಿಕ್‌ಗಳು ಊರಿಯೂತ, ಇನ್ಸುಲಿನ್ ಪ್ರತಿರೋಧ, ಟೈಪ್ 2 ಡಯಾಬೀಟಿಸ್ ಮತ್ತು ಹೃದ್ರೋಗದಂತಹ ಹಲವಾರು ಅಪಾಯವನ್ನು ಹೊಂದಿದ್ದು, ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಜೀವ ಕೋಶಕ್ಕೆ ಹಾನಿ: ಅಷ್ಟೇ ಅಲ್ಲದೆ ಇವು, ಜೀವಕೋಶದ ಹಾನಿಯನ್ನು ಉಂಟು ಮಾಡುತ್ತದೆ. ಊರಿಯೂತ ಮತ್ತು ಅಲರ್ಜಿಗೆ ಕಾರಣವಾಗುವುದರ ಜೊತೆಗೆ ಮಾನವರ ಸಂತಾನೋತ್ಪತ್ತಿಯಲ್ಲಿ ತೊಡಗುವ ಹಾಗೂ ಸ್ಥೂಲಕಾಯತೆಗೆ ಕಾರಣವಾಗಬಹುದು. ಈ ಸಂಬಂಧ ನಾರ್ಟ್ ಡಕೋಟಾ ಯುನಿವರ್ಸಿಟಿ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಮರದ ಮತ್ತು ಪ್ಲಾಸ್ಟಿಕ್ ಬೋರ್ಡ್‌ಗಳ ಮೇಲೆ ಕ್ಯಾರೆಟ್ ಅನ್ನು ಕತ್ತರಿಸುವುದರಿಂದ ವರ್ಷಕ್ಕೆ ಹತ್ತು ಮಿಲಿಯನ್ ಮೈಕ್ರೋ ಪಾರ್ಟಿಕಲ್‌ಗಳನ್ನು ಉತ್ಪಾದಿಸಬಹುದು ಎಂದು ಅಧ್ಯಯನ ತಿಳಿಸಿದೆ. ಕತ್ತರಿಸುವ ಸಮಯದಲ್ಲಿ ಬಿಡುಗಡೆಯಾದ ಪಾಲಿಥಿಲೀನ್ ಅಥವಾ ಮರದ ಮೈಕ್ರೊಪಾರ್ಟಿಕಲ್‌ಗಳು ಕೋಶದ ಬದುಕುಳಿಯುವಿಕೆ ಪರಿಣಾಮ ಹೊಂದಿಲ್ಲ ಎಂದಿದ್ದಾರೆ
ಹಲವು ವಿಧದ ಬೋರ್ಡ್ ಲಭ್ಯ: ಬಹುತೇಕ ತರಕಾರಿ ಕಟಿಂಗ್ ಬೋರ್ಡ್‌ಗಳನ್ನು ರಬ್ಬರ್, ಬಿದಿರು, ಮರ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪಾಲಿಪ್ರೊಪಿಲೀನ್ ಮತ್ತು ಪಾಲಿಥಿಲೀನ್ ಸೇರಿದಂತೆ ಕೆಲವು ಪ್ಲಾಸ್ಟಿಕ್ ಬೋರ್ಡ್ ವಸ್ತುಗಳು ಚಾಕುಗಳಿಂದ ಕತ್ತರಿಸಿದಾಗ ನ್ಯಾನೊ ಮತ್ತು ಸೂಕ್ಷ್ಮ ಗಾತ್ರದ ಫ್ಲೆಕ್ಸ್ ಅನ್ನು ಹೊರ ಹಾಕುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ