ವಿಂಚೆಸ್ಟರ್ ವಿಶ್ವವಿದ್ಯಾನಿಲಯವು ನಾಯಿಗಳ ಆಹಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದೆ. ಇದರ ಪ್ರಕಾರ, ಪೌಷ್ಟಿಕಾಂಶಯುಕ್ತ ಸಸ್ಯಾಹಾರಿ ಆಹಾರ ಕಚ್ಚಾ ಮಾಂಸಾಧಾರಿತ ಆಹಾರಕ್ಕಿಂತ ಉತ್ತಮ ಎಂದು ತಿಳಿದುಬಂದಿದೆ. ಈ ವಿಶ್ವವಿದ್ಯಾಲಯವು 2,500ಕ್ಕಿಂತ ಹೆಚ್ಚು ನಾಯಿಗಳನ್ನು ಬಳಸಿಕೊಂಡು ಈ ಅಧ್ಯಯನ ನಡೆಸಿದೆ.
ನಾಯಿಗಳು ಸೇವಿಸುವ ಆಹಾರ ಅವುಗಳ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು ಈ ಅಧ್ಯಯನ ನಡೆಸಲಾಗಿದೆ. ಪೌಷ್ಟಿಕಾಂಶಯುಕ್ತ ಸಸ್ಯಾಹಾರಿ ಆಹಾರ ಮಾಂಸಾಧಾರಿತ ಆಹಾರಗಳಿಗಿಂತ ಆರೋಗ್ಯಕರ ಮತ್ತು ಕಡಿಮೆ ಅಪಾಯಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಧ್ಯಯನದ ಆವಿಷ್ಕಾರಗಳನ್ನು ಮುಕ್ತ-ಪ್ರವೇಶ ಜರ್ನಲ್ 'PLOS ONE' ನಲ್ಲಿ ಪ್ರಕಟಿಸಲಾಗಿದೆ.