ಟೊರಂಟೊ: ಕೋವಿಡ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರೂ ಅವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ವರದಿಯಾಗುತ್ತಿವೆ. ಇವು ಅನೇಕ ಗಂಭೀರ ಸಮಸ್ಯೆಗಳನ್ನು ಹೊಂದಿದ್ದು, ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಈಗಾಗಲೇ ಅನೇಕ ಸಂಶೋಧನೆಗಳು ತಿಳಿಸಿವೆ. ಇತ್ತೀಚೆಗೆ ನಡೆದ ಹೊಸ ಸಂಶೋಧನೆ ಪ್ರಕಾರ, ದೀರ್ಘಕಾಲದ ಕೋವಿಡ್ ಮೆದುಳಿನ ಆಮ್ಲಜನಕದ ಮಟ್ಟಗಳು ಕಡಿತ ಮಾಡುವುದರ ಜೊತೆಗೆ, ಅರಿವಿನ ಪರೀಕ್ಷೆಗಳಲ್ಲಿ ಕೆಟ್ಟ ಕಾರ್ಯಕ್ಷಮತೆ ಮತ್ತು ಖಿನ್ನತೆ ಮತ್ತು ಆತಂಕದಂತಹ ಮನೋವೈದ್ಯಕೀಯ ರೋಗಲಕ್ಷಣಗಳನ್ನು ಹೊಂದಿದೆ ಎಂಬ ತಿಳಿಸಿದೆ.
ಸೋಂಕಿಗೆ ಒಳಗಾದವರ ಅರಿವಿನ ಕಾರ್ಯಕ್ಷಮತೆ: ಕೆನಡಾದ ವಟಾರ್ಲೂ ವಿಶ್ವವಿದ್ಯಾಲಯ ಈ ಸಂಬಂಧ ಪ್ರಯೋಗಾಲಯದ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ, ಕೋವಿಡ್ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಗಳು ಅರಿವಿನ ಮಟ್ಟ ಪರೀಕ್ಷೆ ನಡೆಸಲಾಗಿದೆ. ಅವರು ಎರಡು ಕಂಪ್ಯೂಟರ್ ಕಾರ್ಯಗಳಲ್ಲಿ ಕೆಟ್ಟದಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಇದು ತಿಳಿಸಿದೆ. ಇದರಲ್ಲಿ ಒಂದು ಪ್ರತಿಬಂಧವನ್ನು ಅಳೆಯುವುದು ಮತ್ತು ಇನ್ನೊಂದು ದೀಢೀರ್ ನಿರ್ಧಾರ ತೆಗೆದುಕೊಳ್ಳುವುದು ಆಗಿದೆ ಎಂದು ತಿಳಿಸಿದೆ.
ಅಮ್ಲಜನಕದ ಪೂರೈಕೆಯಲ್ಲಿ ಹಿನ್ನಡೆ: ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ಆಕ್ಸಿಜನ್ ಏರಿಳಿತದ ಕಡಿತವಾಗಿರುವುದು ಕಂಡು ಬಂದಿದೆ. ಅದರಲ್ಲೂ ಟಾಸ್ಕ್ ವೇಳೆ ಸೋಂಕಿತರ ವರ ಮಿದುಳಿನ ಆಮ್ಲಜನಕದಲ್ಲಿ ಸ್ಥಿರತೆಯನ್ನು ಹೊಂದಿಲ್ಲ ಎಂದು ಸಂಶೋಧನೆ ತಿಳಿಸಿದೆ. ಕೋವಿಡ್ 19 ಸೋಂಕಿನ ಗುಣಲಕ್ಷಣ ಹೊಂದಿದವರಲ್ಲಿ ಅರಿವಿನ ಪರೀಕ್ಷೆ ವೇಳೆ ಆಮ್ಲಜನಕವನ್ನು ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ ಎಂಬುದನ್ನು ನಾವು ತೋರಿಸಿದ್ದೇವೆ ಎಂದು ಅಧ್ಯಯನ ಪ್ರಮುಖ ಲೇಖಕ ಪೀಟರ್ ಹಾಲ್ ತಿಳಿಸಿದ್ದಾರೆ.