ಕರ್ನಾಟಕ

karnataka

ETV Bharat / sukhibhava

ಇಂದು ದಡಾರ ರೋಗನಿರೋಧಕ ದಿನ.. ಮಾರಕ ಕಾಯಿಲೆ ತಡೆಗಟ್ಟಲು ವ್ಯಾಕ್ಸಿನೇಷನ್ ಅತ್ಯಗತ್ಯ - ದಡಾರ ಲಕ್ಷಣಗಳು

1963ರಲ್ಲಿ ದಡಾರ ವ್ಯಾಕ್ಸಿನೇಷನ್ ಪರಿಚಯಿಸುವ ಮೊದಲು, ದಡಾರದಿಂದಾಗಿ ಪ್ರತಿವರ್ಷ 2.6 ಮಿಲಿಯನ್ ಸಾವುಗಳು ಸಂಭವಿಸುತ್ತಿದ್ದವು ಎಂದು ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ. ಆದರೆ, ದಡಾರ ವ್ಯಾಕ್ಸಿನೇಷನ್ ಪರಿಣಾಮವಾಗಿ ವಿಶ್ವದಾದ್ಯಂತ 2000 ಮತ್ತು 2018ರ ನಡುವೆ ದಡಾರ ಸಾವು ಶೇ.73%ರಷ್ಟು ಕಡಿಮೆಯಾಗಿದೆ..

vaccine
vaccine

By

Published : Mar 16, 2021, 3:52 PM IST

ಹೈದರಾಬಾದ್ :ಇಂದು ದೇಶದಲ್ಲಿ ದಡಾರ ರೋಗ ನಿರೋಧಕ ದಿನವನ್ನು ಆಚರಿಸಲಾಗುತ್ತಿದೆ. ಈ ಮಾರಕ ಕಾಯಿಲೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ಅದಕ್ಕೆ ಲಸಿಕೆ ಏಕೆ ಮುಖ್ಯ ಎಂದು ತಿಳಿಸುವುದು ಈ ದಿನದ ಉದ್ದೇಶವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಪ್ರಕಾರ, ಸುರಕ್ಷಿತ ಮತ್ತು ವೆಚ್ಚದಾಯಕ ಲಸಿಕೆ ಲಭ್ಯವಿದ್ದರೂ, 2018ರಲ್ಲಿ ಜಾಗತಿಕವಾಗಿ 1,40,000 ದಡಾರ ಸಾವುಗಳು ಸಂಭವಿಸಿವೆ. ಅದರಲ್ಲಿ ಹೆಚ್ಚಾಗಿ ಐದು ವರ್ಷದೊಳಗಿನ ಮಕ್ಕಳು ಮೃತಪಟ್ಟಿದ್ದಾರೆ.

ದಡಾರವು ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ವ್ಯಾಕ್ಸಿನೇಷನ್. ಇದು ಸುರಕ್ಷಿತ ಮತ್ತು ವೆಚ್ಚದಾಯಕವಾಗಿದೆ. 1963ರಲ್ಲಿ ದಡಾರ ವ್ಯಾಕ್ಸಿನೇಷನ್ ಪರಿಚಯಿಸುವ ಮೊದಲು, ದಡಾರದಿಂದಾಗಿ ಪ್ರತಿವರ್ಷ 2.6 ಮಿಲಿಯನ್ ಸಾವು ಸಂಭವಿಸುತ್ತಿದ್ದವು ಎಂದು ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ. ಆದರೆ, ದಡಾರ ವ್ಯಾಕ್ಸಿನೇಷನ್ ಪರಿಣಾಮವಾಗಿ ವಿಶ್ವದಾದ್ಯಂತ 2000 ಮತ್ತು 2018ರ ನಡುವೆ ದಡಾರ ಸಾವು ಶೇ.73ರಷ್ಟು ಕಡಿಮೆಯಾಗಿವೆ.

ಪ್ಯಾರಾಮಿಕ್ಸೊವೈರಸ್ ಕುಟುಂಬಕ್ಕೆ ಸೇರಿದ ವೈರಸ್‌ನಿಂದ ದಡಾರ ಉಂಟಾಗುತ್ತದೆ ಮತ್ತು ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ ಗಾಳಿಯ ಮೂಲಕ ಹರಡಬಹುದು. ವೈರಸ್ ಸಾಮಾನ್ಯವಾಗಿ ಉಸಿರಾಟದ ಪ್ರದೇಶವನ್ನು ಪ್ರವೇಶಿಸುತ್ತದೆ ಮತ್ತು ಕ್ರಮೇಣ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಇತರರಿಗೆ ಹೋಲಿಸಿದರೆ ಚಿಕ್ಕ ಮಕ್ಕಳು ಇದರಿಂದ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಲಸಿಕೆ ಪಡೆಯದ ಗರ್ಭಿಣಿಯರು ಮತ್ತು ವ್ಯಾಕ್ಸಿನೇಷನ್ ಪಡೆದರೂ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳದ ಜನರು ಕೂಡ ಸೋಂಕಿಗೆ ಒಳಗಾಗಬಹುದು.

ಈ ರೋಗದ ಲಕ್ಷಣಗಳು :

ವೈರಸ್ ಸಂಪರ್ಕಕ್ಕೆ ಬಂದ 7-14 ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು ಮತ್ತು ಕೆಲ ದಿನಗಳಲ್ಲೇ ಆರೋಗ್ಯ ಹದಗೆಡಬಹುದು ಮತ್ತು ಕೆಲ ತೊಂದರೆಗಳಿಗೆ ಕಾರಣವಾಗಬಹುದು. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಪ್ರಕಾರ, ರೋಗದ ಲಕ್ಷಣಗಳು ಹೀಗಿವೆ :

ದಡಾರ ಸೋಂಕಿನ 7 - 14 ದಿನಗಳ ನಂತರ :

  • ಅಧಿಕ ಜ್ವರ (104 °ಗಿಂತ ಹೆಚ್ಚು)
  • ಕೆಮ್ಮು
  • ನೆಗಡಿ
  • ಕೆಂಗಣ್ಣು ಮತ್ತು ಕಣ್ಣೀರು

ರೋಗಲಕ್ಷಣಗಳು ಪ್ರಾರಂಭವಾದ 2-3 ದಿನಗಳ ನಂತರ :

  • ರೋಗಲಕ್ಷಣಗಳು ಪ್ರಾರಂಭವಾದ ಎರಡು ಮೂರು ದಿನಗಳ ನಂತರ ಸಣ್ಣ ಬಿಳಿ ಕಲೆಗಳು (ಕೊಪ್ಲಿಕ್ ಕಲೆಗಳು) ಬಾಯಿಯೊಳಗೆ ಕಾಣಿಸಿಕೊಳ್ಳಬಹುದು.

ರೋಗಲಕ್ಷಣಗಳು ಪ್ರಾರಂಭವಾದ 3-5 ದಿನಗಳ ನಂತರ:

  • ರೋಗಲಕ್ಷಣಗಳು ಪ್ರಾರಂಭವಾದ ಐದು ದಿನಗಳ ನಂತರ, ದದ್ದುಗಳು ಉಂಟಾಗುತ್ತವೆ. ಇದು ಸಾಮಾನ್ಯವಾಗಿ ಚಪ್ಪಟೆ ಕೆಂಪು ಕಲೆಗಳಾಗಿ ಪ್ರಾರಂಭವಾಗುತ್ತದೆ ಮತ್ತು ಅದು ಕೂದಲಿನ ಮೇಲೆ ಮುಖದ ಮೇಲೆ ಗೋಚರಿಸುತ್ತದೆ. ಜೊತೆಗೆ ಕುತ್ತಿಗೆ, ತೋಳುಗಳು, ಕಾಲುಗಳು ಮತ್ತು ಪಾದಗಳಿಗೆ ಹರಡುತ್ತವೆ.
  • ಚಪ್ಪಟೆಯಾದ ಕೆಂಪು ಕಲೆಗಳ ಮೇಲೆ ಸಣ್ಣ ಎತ್ತರಿಸಿದ ಉಬ್ಬುಗಳು ಸಹ ಕಾಣಿಸಿಕೊಳ್ಳಬಹುದು.
  • ಮಚ್ಚೆಗಳು ತಲೆಯಿಂದ ದೇಹದ ಉಳಿದ ಭಾಗಗಳಿಗೆ ಹರಡುತ್ತಿದ್ದಂತೆ ಒಟ್ಟಿಗೆ ಸೇರಿಕೊಳ್ಳಬಹುದು.
  • ದದ್ದು ಕಾಣಿಸಿಕೊಂಡಾಗ, ವ್ಯಕ್ತಿಯ ಜ್ವರವು 104 ° ಫ್ಯಾರನ್‌ಹೀಟ್‌ಗಿಂತ ಹೆಚ್ಚಾಗುತ್ತದೆ.

ದಡಾರದಿಂದ ಉಂಟಾಗುವ ಸಮಸ್ಯೆಗಳು:

  • ಕಿವಿಯ ಸೋಂಕು
  • ಅತಿಸಾರ, ಇದು ನಿರ್ಜಲೀಕರಣಕ್ಕೂ ಕಾರಣವಾಗಬಹುದು
  • ನ್ಯುಮೋನಿಯಾ, ಬ್ರಾಂಕೈಟಿಸ್
  • ಎನ್ಸೆಫಾಲಿಟಿಸ್
  • ಗರ್ಭಾವಸ್ಥೆಯಲ್ಲಿ ತೊಂದರೆಗಳು
  • ಕಣ್ಣಿನ ಸೋಂಕು (ಕಾಂಜಂಕ್ಟಿವಿಟಿಸ್)
  • ಕುರುಡುತನ

ವ್ಯಾಕ್ಸಿನೇಷನ್ :

"ಡಬ್ಲ್ಯುಹೆಚ್‌ಒ 2 ಡೋಸ್ ದಡಾರ ಲಸಿಕೆಯನ್ನು ಎಲ್ಲಾ ಮಕ್ಕಳಿಗೆ ಶಿಫಾರಸ್ಸು ಮಾಡಿದೆ. ಅಥವಾ ದಡಾರ-ರುಬೆಲ್ಲಾ (ಎಮ್ಆರ್) ಅಥವಾ ದಡಾರ-ಮಂಪ್ಸ್-ರುಬೆಲ್ಲಾ (ಎಂಎಂಆರ್) ಸಂಯೋಜನೆಯಲ್ಲಿ ರೋಗನಿರೋಧಕವನ್ನು ಶಿಫಾರಸು ಮಾಡಿದೆ. ಭಾರತದಲ್ಲಿ ದಡಾರ ಲಸಿಕೆಯನ್ನು ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ ಅಡಿಯಲ್ಲಿ 9-12 ತಿಂಗಳ ವಯಸ್ಸಿನಲ್ಲಿ ದಡಾರ ರುಬೆಲ್ಲಾ (ಎಮ್ಆರ್) ಲಸಿಕೆ ಮತ್ತು 16-24 ತಿಂಗಳ ವಯಸ್ಸಿನಲ್ಲಿ 2ನೇ ಡೋಸ್ ನೀಡಲಾಗುತ್ತದೆ." ಎಂದು ನ್ಯಾಷನಲ್ ಹೆಲ್ತ್ ಪೋರ್ಟಲ್ ಆಫ್ ಇಂಡಿಯಾ (ಎನ್‌ಎಚ್‌ಪಿ) ಹೇಳಿದೆ.

ABOUT THE AUTHOR

...view details