ಕೋವಿಡ್-19 ಲಸಿಕೆ ಪಡೆದ ಮಹಿಳೆಯರು ಎದೆಹಾಲುಣಿಸುವಾಗ ತಮ್ಮ ಮಕ್ಕಳಿಗೆ SARS-CoV-2 ಪ್ರತಿಕಾಯ(Antibodies)ಗಳನ್ನು ವರ್ಗಾಯಿಸುತ್ತಾರೆ. ಇದರಿಂದ ಮಕ್ಕಳ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ ಎಂದು ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದ ಅಮ್ಹೆರ್ಸ್ಟ್ ಸಂಶೋಧನೆಯಿಂದ ತಿಳಿದುಬಂದಿದೆ.
ತಾಯಂದಿರ ಎದೆ ಹಾಲು ಮತ್ತು ಎದೆಹಾಲು ಕುಡಿದ ಶಿಶುಗಳ ಮಲ ಎರಡರಲ್ಲೂ ಕೋವಿಡ್-19ನ mRNA ಲಸಿಕೆ ಪತ್ತೆಯಾಗಿದೆ. ಲಸಿಕೆ ಹಾಕಿಸಿಕೊಂಡ ತಾಯಂದಿರ ಶಿಶುಗಳ ಮಲದ ಮಾದರಿಯಲ್ಲಿ SARS-CoV-2 ಪ್ರತಿಕಾಯವನ್ನು ಪತ್ತೆಹಚ್ಚಿರುವ ಮೊದಲ ಸಂಶೋಧನೆ ಇದಾಗಿದೆ ಎಂದು ಲೇಖಕ ವಿಘ್ನೇಶ್ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಅಧ್ಯಯನ ತುಂಬಾ ಮುಖ್ಯವಾಗಿದೆ. ಏಕೆಂದರೆ ತಾಯಂದಿರು ತಮ್ಮ ಮಕ್ಕಳು ಈ ಪ್ರತಿಕಾಯಗಳನ್ನು ಹೊಂದಿದ್ದಾರೆಯೇ ಎಂದು ತಿಳಿಯಲು ಬಯಸುತ್ತಾರೆ. ನಮ್ಮ ಅಧ್ಯಯನವು ಎದೆ ಹಾಲಿನ ಮೂಲಕ ಪ್ರತಿಕಾಯಗಳನ್ನು ವರ್ಗಾಯಿಸಬಹುದು ಎಂಬುದನ್ನು ತೋರಿಸುತ್ತದೆ. ಮಹಿಳೆಯರು ಲಸಿಕೆಯನ್ನು ಪಡೆದ ನಂತರ ಈ ಬಲವಾದ ಪುರಾವೆಯನ್ನು ಒದಗಿಸುವುದರಿಂದ ಅವರು ಹಾಲುಣಿಸುವುದನ್ನು ಮುಂದುವರಿಸಲು ಸಹಕಾರಿಯಾಗುತ್ತದೆ. ಅಲ್ಲದೇ ಒಂದೂವರೆ ತಿಂಗಳ ಮಗುವಿನಿಂದ ಹಿಡಿದು 23 ತಿಂಗಳವರೆಗಿನ ಮಕ್ಕಳಲ್ಲಿ ಪ್ರತಿಕಾಯಗಳು ಪತ್ತೆಯಾಗಿವೆ ಎಂದು ವಿಘ್ನೇಶ್ ನಾರಾಯಣಸ್ವಾಮಿ ಹೇಳಿದ್ದಾರೆ.