ಮೂಳೆಗಳ ಅಭಿವೃದ್ಧಿಗೆ ಬೇಕಾದ ಕ್ಯಾಲ್ಸಿಯಂ, ಪ್ರೊಟೀನ್ ಸೇರಿದಂತೆ ಅನೇಕ ಸಮೃದ್ಧ ಪೋಷಕಾಂಶವನ್ನು ಹಾಲು ಹೊಂದಿರುತ್ತದೆ. ಆದರೆ, ಕೆಲವರಿಗೆ ಹಾಲಿನ ವಾಸನೆ ಕಂಡರೆ ಆಗುವುದಿಲ್ಲ. ಮತ್ತೆ ಕೆಲವರಿಗೆ ಇದರ ಅಲರ್ಜಿ ಕೂಡ ಇರುತ್ತದೆ. ಈ ಹಿನ್ನೆಲೆ ಅದರ ಸೇವನೆಗೆ ಮುಂದಾಗುವುದಿಲ್ಲ. ಮತ್ತೆ ಕೆಲವು ಮಂದಿ ಅಗತ್ಯ ಪ್ರಮಾಣದಲ್ಲಿ ಇದರ ಸೇವನೆ ಮಾಡುವುದಿಲ್ಲ. ಇದರಿಂದ ಪೋಷಕಾಂಶದ ಕೊರತೆ ಕಾಡದಂತೆ ಮಾಡಲು ಅದಕ್ಕೆ ಪರ್ಯಾಯವಾಗಿರುವ ಹಾಲಿನ ಬಳಕೆ ಮಾಡುವುದು ಪರಿಹಾರವಾಗುತ್ತದೆ. ಹಾಲಿಗೆ ಪರ್ಯಾಯವಾಗಿ ಸಮೃದ್ಧ ಪ್ರೋಟಿನ್, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಯುಕ್ತ ಹಾಲಿನ ಹಲವು ಆಯ್ಜೆ ಇಲ್ಲಿದೆ.
ತೆಂಗಿನ ಹಾಲು:ಸಮೃದ್ಧ ಪೋಷಾಕಾಂಶಗಳು ದೊರೆಯುವ ಹಾಲು ಎಂದರೆ ಅದು ತೆಂಗಿನ ಹಾಲು. ತೆಂಗಿನಕಾಯಿ ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಮಾಡಿ. ಅದರ ರಸವನ್ನು ಪಡೆಯಬಹುದು. ಇದನ್ನು ಅಡುಗೆಯಲ್ಲಿ ಕೂಡ ಬಳಕೆ ಮಾಡಬಹುದು. ಇದಕ್ಕೆ ಸ್ವಲ್ಪ ಸಕ್ಕರೆ ಬೆರಸಿ ಕೂಡ ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ. ಅಲ್ಲದೇ, ಈ ತೆಂಗಿನ ಹಾಲಿನಿಂದ ಸಂಧಿವಾತ ನಿಯಂತ್ರಣ ಮಾಡಬಹುದು.
ಗೋಡುಂಬಿ ಹಾಲು: ಹಾಲಿನಲ್ಲಿಕ್ಕಿಂತ ಹೆಚ್ಚಿನ ಸಮೃದ್ಧಿ ಪೋಷಕಾಂಶವನ್ನು ಇದರ ಮೂಲಕ ಪಡೆಯಬಹುದು. ಹೆಚ್ಚು ದಪ್ಪ ಮತ್ತು ಸಿಹಿಯಾಗಿರುವ ಈ ಹಾಲು ಅನೇಕ ಪ್ರಯೋಜನ ಹೊಂದಿದೆ. ಇದು ನೈಸರ್ಗಿಕವಾಗಿ ಗ್ಲುಟೆನ್ ಮುಕ್ತವಾಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಹೃದಯ ಮತ್ತು ಮೂಳೆ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಜೊತೆಗೆ ಇದರಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯನ್ನು ಪಡೆಯಬಹುದು.