ಹೈದರಾಬಾದ್:ಬೇಸಿಗೆಯ ಬೇಗೆ ಏರತೊಡಗಿದಂತೆ ಮನೆಯಿಂದ ಹೊರಡುವುದೇ ಕಷ್ಟ ಎಂಬಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಡುವ ಮುನ್ನ ಮುಖದ ಕಾಳಜಿವಹಿಸುವುದು ಈಗಿನ ಅತಿ ಮುಖ್ಯವಾದ ಕೆಲಸವಾಗಿದೆ. ಸೂರ್ಯನ ಸುಡು ಬಿಸಿಲು ನಿಮ್ಮ ಚರ್ಮದ ಮೇಲೆ ದೀರ್ಘಕಾಲದ ಪರಿಣಾಮ ಬೀರದಂತೆ ತ್ವಚೆಯನ್ನು ಕಾಯ್ದುಕೊಳ್ಳಬೇಕಾಗಿರುವುದಕ್ಕೆ ನಾವು- ನೀವೆಲ್ಲ ಮೊದಲ ಆದ್ಯತೆ ನೀಡಬೇಕಿದೆ. ಇದಕ್ಕಾಗಿ ಈ ಬೇಸಿಗೆಯಲ್ಲಿ ನಿಮ್ಮ ಅಂದವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕವೂ ಆಗಿದೆ.
ಬೇಸಿಗೆಯಲ್ಲಿ ಚರ್ಮದ ಅಂದ ಬೇಗ ಹಾಳು ಗೆಡದಂತೆ ಕಾಪಾಡುವಲ್ಲಿ ಸೌಂದರ್ಯ ವರ್ಧಕಗಳ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆ ಸೌಂದರ್ಯ ವರ್ಧಕಗಳು ನಿಮ್ಮ ಬ್ಯಾಗ್ನಲ್ಲಿರುವಂತೆ ನೋಡಿಕೊಳ್ಳಿ ಇದರಿಂದ ಬಿಸಿಲಿನ ಬೆಗೆ ನಿಮ್ಮ ಸೌಂದರ್ಯ ಮಸುಕಾಗದಂತೆ ಕಾಪಾಡುತ್ತದೆ.
ಸನ್ ಸ್ಕ್ರೀನ್: ಬೇಸಿಗೆ ಇರಲಿ ಅಥವಾ ಚಳಿ ಇರಲಿ ಎಲ್ಲಾ ಋತುಮಾನದಲ್ಲೂ ಸನ್ಸ್ಕ್ರೀನ್ ಬಳಕೆ ಮಾಡುವುದು ಅತ್ಯವಶ್ಯಕ. ಅದರಲ್ಲೂ ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋಗುವ ಮುನ್ನ ತಪ್ಪದೇ ಇದನ್ನು ಹಚ್ಚಿಕೊಳ್ಳಿ ಈ ಮೂಲಕ ಚರ್ಮದ ರಕ್ಷಣೆ ಮಾಡಿಕೊಳ್ಳಿ. ಸೂರ್ಯನ ಬಿಸಿಲಿನ ಕಿರಣಗಳು ನಿಮ್ಮ ತ್ವಚೆ ಮೇಲೆ ಗಾಢ ರೀತಿಯ ಪರಿಣಾಮ ಬೀರದಂತೆ ಇದು ತಡೆಯುತ್ತದೆ.
ಫೇಶಿಯಲ್ ಮಿಸ್ಟ್: ಬಿಸಿಲಿನಿಂದ ತ್ವಚೆ ಹಾಳಾದರೆ ಹಾಗೂ ಸೂರ್ಯನ ಪ್ರಖರ ಶಾಖದಿಂದ ಬಳಲಿದಾಗ ಫೇಶಿಯಲ್ ಮಿಸ್ಟ್ ಬಯಸುವ ಆಹ್ಲಾದಕರ ಅನುಭೂತಿಯನ್ನು ನೀಡುತ್ತದೆ. ಜೊತೆಗೆ ಇದು ನಿಮ್ಮನ್ನು ಪುನರ್ಜೀವನ ಗೊಳಿಸುತ್ತದೆ. ಬಳಲಿದ ಮುಖಕ್ಕೆ ತಾಜಾತನ ನೀಡುವ ಜೊತೆಗೆ ಆತಂಕ ಮತ್ತು ಒತ್ತಡವನ್ನು ಫೇಶಿಯಲ್ ಮಿಸ್ಟ್ ತೆಗೆದು ಹಾಕುತ್ತದೆ. ಯಾವಾಗ ನಿಮಗೆ ತಾಜಾತನದ ಅನುಭೂತಿ ಬೇಕಾಗುತ್ತದೆ ಆಗ ಇದನ್ನು ಮುಖಕ್ಕೆ ಸಿಂಪಡಿಸಿಕೊಳ್ಳಬಹುದು ಉತ್ತಮ.