ಪ್ರಸವ ಪೂರ್ವ ಖಿನ್ನತೆಗೆ (ಪಿಪಿಡಿ) ಇದೇ ಮೊಲದ ಬಾರಿಗೆ ಓರಲ್ (ಬಾಯಿಯಿಂದ ಸೇವಿಸುವ) ಔಷಧ ಅಂದರೆ ಮಾತ್ರೆಗೆ ಅಮೆರಿಕ ಫುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ ಅನುಮೋದನೆ ನೀಡಿದೆ. ಸೇಜ್ ಥೆರಾಪ್ಯುಟಿಕ್ಸ್ಸ್ ಮತ್ತು ಬಯೊಜೆನ್, ಜುರ್ಜುವೆ ಇದನ್ನು ಉತ್ಪಾದನೆ ಮಾಡಿದ್ದು, 14 ದಿನಗಳ ಕಾಲ ದಿನಕ್ಕೆ 50 ಎಂಜಿಯಂತೆ ದಿನಕ್ಕೆ ಒಂದು ಮಾತ್ರೆ ಸೇವನೆಗೆ ಅನುಮೋದನೆ ನೀಡಿದೆ. ಮಗು ಜನಿಸಿದ ಬಳಿಕ ಈ ಪಿಪಿಡಿ ಸಾಮಾನ್ಯವಾಗಿ ಕಾಡುತ್ತದೆ. ಕೆಲವೊಮ್ಮೆ ಗರ್ಭಾವಸ್ಥೆಯ ಆರಂಭಿಕ ಹಂತದಲ್ಲೇ ಇದು ಆರಂಭವಾಗುತ್ತದೆ. ಕೆಲವು ನಿರ್ದಿಷ್ಟ ಆರೋಗ್ಯ ಕಾಳಜಿ ಸೌಲಭ್ಯದೊಂದಿಗೆ ಹೆಲ್ತ್ಕೇರ್ಗಳು ಪಿಪಿಡಿಗೆ ಐವಿ ಇಂಜೆಕ್ಷನ್ ಅನ್ನು ನೀಡುತ್ತಿವೆ.
ಪ್ರಸವಪೂರ್ವ ಖಿನ್ನತೆ ಗಂಭೀರವಾಗಿದ್ದು, ಜೀವ ಅಪಾಯದ ಸ್ಥಿತಿಯಾಗಿದೆ. ಈ ಸಮಯದಲ್ಲಿ ಮಹಿಳೆ ಬೇಸರ, ದೋಷಿ, ಪ್ರಯೋಜನಕಾರಿಯಲ್ಲದಂತಹ ನಕಾರಾತ್ಮಕ ಅಂಶಗಳನ್ನು ಎದುರಿಸುತ್ತಾರೆ. ಅಷ್ಟೇ ಅಲ್ಲದೇ, ಈ ಸಮಯದಲ್ಲಿ ಮಹಿಳೆಯರು ತಮಗೆ ಮತ್ತು ಅಥವಾ ಮಗುವಿಗೆ ಹಾನಿಯಾಗುವಂತ ಚಿಂತನೆಗಳನ್ನು ಹೊಂದಿರುತ್ತಾರೆ ಎಂದು ಟಿಫಾನಿ ಆರ್ ಫಾರ್ಚಿಯೋನ್ ತಿಳಿಸಿದ್ದಾರೆ.
ಈ ಪ್ರಸವ ಪೂರ್ವ ಖಿನ್ನತೆಯಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹದಗೆಡುತ್ತದೆ. ಇದು ಮಗುವಿನ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ತಡೆಯಾಗುತ್ತದೆ. ಇದೀಗ ಓರಲ್ ಔಷಧ ಲಭ್ಯವಿದ್ದು, ಇದು ಮಹಿಳೆಯನ್ನು ಕೆಲವು ಅಪಾಯಗಳಿಂದ ತಪ್ಪಿಸುತ್ತದೆ.
ಇತರೆ ರೀತಿಯ ಖಿನ್ನತೆಗಿಂತ ಪಿಪಿಡಿಯನ್ನು ವಿಭಿನ್ನ ಲಕ್ಷಣಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ಮಹಿಳೆ ಯಾವುದೇ ಚಟುವಟಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ಆಕೆ ಖುಷಿ ಅನುಭವಿಸುತ್ತಿದ್ದ ಚಟುವಟಿಕೆಗಳಲ್ಲೂ ಬೇಸರ ವ್ಯಕ್ತಪಡಿಸುತ್ತಾರೆ. ಅದರ ಆನಂದದ ಉತ್ಸಾಹವನ್ನು ಕಳೆದುಕೊಳ್ಳುತ್ತಾಳೆ. ಇದರ ಪ್ರಸ್ತುತ ಲಕ್ಷಣದಲ್ಲಿ ಒಂದು ಮರೆವು ಆಗಿರುತ್ತದೆ. ಸದಾ ಬೇಸರ, ಶಕ್ತಿ ಇಲ್ಲದಿರುವುದು ಅಥವಾ ಆತ್ಮಹತ್ಯೆ ಮನೋಭಾವವನ್ನು ಅನುಭವಿಸುತ್ತಾರೆ. ವಯಸ್ಕರಲ್ಲಿ ಪಿಪಿಡಿ ಚಿಕಿತ್ಸೆಗಾಗಿ ಜುರ್ಜುವೆ ಎರಡು ಯಾದೃಚ್ಛಿಕ, ಡಬಲ್ ಬ್ಲೈಂಡ್, ಪ್ಲಸೀಬೊ ನಿಯಂತ್ರಿತ, ಮಲ್ಟಿಸೆಂಟರ್ ಮೂಲಕ ಅಧ್ಯಯನ ನಡೆಸಲಾಗಿದೆ