ಕರ್ನಾಟಕ

karnataka

ETV Bharat / sukhibhava

ಹೈದರಾಬಾದ್​ನಲ್ಲಿ ಸ್ಥಾಪನೆಯಾಗಲಿದೆ ಭಾರತದ ಅತಿದೊಡ್ಡ ಕಾಂಡ ಕೋಶ ಉತ್ಪಾದನಾ ಲ್ಯಾಬ್​ - ಲಯದಲ್ಲಿ ದೊಡ್ಡ ಮಟ್ಟದ ಮತ್ತೊಂದು ಹೂಡಿಕೆ

ಈ ಪ್ರಯೋಗಾಲಯ ಸ್ಥಾಪನೆ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಯಾಗುವ ಜೊತೆಗೆ ಉದ್ಯೋಗದ ಬೇಡಿಕೆಯನ್ನು ನೀಗಿಸಲಿದೆ.

Indias largest stem cell manufacturing lab to come up in Hyderabad
Indias largest stem cell manufacturing lab to come up in Hyderabad

By

Published : May 25, 2023, 11:59 AM IST

ಹೈದರಾಬಾದ್​​: ಮುತ್ತಿನ ನಗರಿ ಹೈದರಾಬಾದ್​ ಈಗಾಗಲೇ ಜೀವ ವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಹೆಸರು ಮಾಡಿದೆ. ಇದೀಗ ಈ ವಲಯದಲ್ಲಿ ದೊಡ್ಡ ಮಟ್ಟದ ಮತ್ತೊಂದು ಹೂಡಿಕೆ ಆರಂಭವಾಗುತ್ತಿದ್ದು, ಇದು ಈ ಕ್ಷೇತ್ರಕ್ಕೆ ಮತ್ತಷ್ಟು ಗರಿಮೆ ಮೂಡಿಸಿದೆ.

ಅಮೆರಿಕ ಮೂಲಕ ಸ್ಟೆಮ್​ಕ್ಯೂರ್ಸ್​ ಇದೀಗ ತೆಲಂಗಾಣದಲ್ಲಿ ತಮ್ಮ ಉತ್ಪಾದನಾ ಲ್ಯಾಬ್​​ ಸ್ಥಾಪಿಸಲು ಮುಂದಾಗಿದೆ. ಈ ಮೂಲಕ ಸ್ಟೆಮ್​ ಸೆಲ್​ ಥೆರಪಿ (ಕಾಂಡ ಕೋಶ ಚಿಕಿತ್ಸೆ) ಮೂಲಕ ಭಾರತದಲ್ಲಿ ದೊಡ್ಡ ಮಟ್ಟದ ಸ್ಟೆಮ್​ ಸೆಲ್​ ಉತ್ಪಾದನಾ ಘಟಕದ ದೃಷ್ಟಿಯನ್ನು ಹೊಂದಿದೆ. 54 ಮಿಲಿಯನ್​ ಡಾಲರ್​ ಹೂಡಿಕೆಯಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಒಂದೆರಡು ಹಂತದಲ್ಲಿ ಉದ್ಯೋಗ 150 ಜನರಿಗೆ ಉದ್ಯೋಗ ಸಿಗಲಿದೆ.

ಬೋಸ್ಟನ್​ನಲ್ಲಿ ರಾಜ್ಯ ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ ಸ್ಟೆಮ್‌ಕ್ಯೂರ್ಸ್‌ನ ಸಂಸ್ಥಾಪಕ ಡಾ. ಸಾಯಿರಾಂ ಅಟ್ಲೂರಿ ಅವರನ್ನು ಭೇಟಿಯಾದ ಬಳಿಕ ಈ ಘೋಷಣೆ ಹೊರಬಿದ್ದಿದೆ.

ಈ ಘಟಕದ ಮುಖ್ಯ ಉದ್ದೇಶ ವಿವಿಧ ಗಂಭೀರ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಯುಎಸ್‌ನ ಇತ್ತೀಚಿನ ತಂತ್ರಜ್ಞಾನ ಮತ್ತು ಪರಿಣಿತಿಯನ್ನು ಬಳಸಿಕೊಂಡು ಅತ್ಯುನ್ನತ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಕಾಂಡ ಕೋಶ ಉತ್ಪನ್ನಗಳನ್ನು ತಯಾರಿಸುವುದಾಗಿದೆ.

ರೋಗಿಗಳಿಗೆ ಭರವಸೆಯ ಚಿಕಿತ್ಸೆ: ಸ್ಟೆಮ್​ ಸೆಲ್​ ಥೆರಪಿ ವಿವಿಧ ಪರಿಸ್ಥಿತಿಗಳಲ್ಲಿ ರೋಗಿಗೆ ಭರವಸೆ ಚಿಕಿತ್ಸೆ ನೀಡುವ ಹೊಸ ವಿಧಾನವಾಗಿದೆ. ಭಾರತದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಸ್ಟೆಮ್​ಕ್ಯೂರ್ಸ್​​ ನೀಡಲಿದೆ ಎಂಬ ವಿಶ್ವಾಸ ಇದೆ. ಭಾರತದಲ್ಲಿ ರೋಗಿಗಳಿಗೆ ಸುಲಭವಾಗಿ ಕಾಂಡಕೋಶ ಚಿಕಿತ್ಸೆ ದೊರಕುವಂತೆ ಮಾಡಲು ಕ್ಲಿನಿಕ್​ಗಳೊಂದಿಗೆ ಕೆಲಸ ಮಾಡುವ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಸಚಿವ ಕೆ ಟಿ ರಾಮರಾವ್​​ ತಿಳಿಸಿದ್ದಾರೆ.

ನನ್ನ ತವರು ಹೈದರಾಬಾದ್​ನಲ್ಲಿ, ವೈದ್ಯಕೀಯ ಅವಿಷ್ಕಾರಗಳ ಕೇಂದ್ರವಾಗಿ ಬದಲಾಗುತ್ತಿರುವುದನ್ನು ನೋಡುವುದು ಸಂತಸ ಮೂಡಿಸಿದೆ. ಆರ್​ ಅಂಡ್​ ಡಿ ಸೌಲಭ್ಯಗಳನ್ನು ಸ್ಥಾಪನೆ ತಡೆರಹಿತವಾಗಿದ್ದು, ಇದೀಗ ಉತ್ಪಾದನಾ ಘಟಕ ವಿಸ್ತರಣೆ ನೋಡುತ್ತಿದ್ದೇವೆ ಎಂದು ಅಟ್ಲೂರಿ ತಿಳಿಸಿದ್ದಾರೆ.

ಪ್ರಸ್ತುತ ಸ್ಟೆಮ್​ಕ್ಯೂರ್ಸ್​ ಹೈದರಾಬಾದ್ ವಿಶ್ವವಿದ್ಯಾನಿಲಯದ ಆಸ್ಪೈರ್ ಬಯೋನೆಸ್ಟ್‌ನಲ್ಲಿ ಸ್ಟೆಮ್ ಸೆಲ್ ನಿಯಮಗಳನ್ನು ಆರ್​ ಅಂಡ್​ ಡಿ ಪೂರ್ಣಗೊಳಿಸುತ್ತಿದ್ದು, ಮೊದಲ ಹಂತದ ಉತ್ಪಾದನಾ ಪ್ರಯೋಗಾಲಯವನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಜೀವ ವಿಜ್ಞಾನ ಕೇಂದ್ರ: ಹೈದರಾಬಾದ್​ ಈಗಾಗಲೇ 10 ಫಾರ್ಮಾ ಕಂಪನಿ ಸೇರಿದಂತೆ 100 ಜೀವ ವಿಜ್ಞಾನ ಕಂಪನಿಗಳಿಗೆ ನೆಲೆಯಾಗಿದೆ. ಇದರಲ್ಲಿ 10ರಲ್ಲಿ 4 ಜಾಗತಿಕ ಹೂಡಿಕೆದಾರ ಕಂಪನಿಗಳು ಹೈದರಾಬಾದ್​ನಲ್ಲಿ ನೇರವಾಗಿ ತಮ್ಮ ಕೇಂದ್ರಗಳ ನಿರ್ಮಾಣ ಮಾಡಿವೆ. ಈ ಕೇಂದ್ರಗಳು ಆರ್​ ಅಂಡ್​ ಡಿ ಕೋರ್​​ಗಳು, ಡಿಜಿಟಲ್ ಮತ್ತು ಇಂಜಿನಿಯರಿಂಗ್ ಚಟುವಟಿಕೆಗಳನ್ನು ನಡೆಸುತ್ತವೆ. ಇದರಿಂದಾಗಿ ವಿಶ್ವದಾದ್ಯಂತ ರೋಗಿಗಳಿಗೆ ಜೀವ ಉಳಿಸಲು ವೆಚ್ಚ ಪರಿಣಾಮಕಾರಿ ಚಿಕಿತ್ಸೆಗಳು ಮತ್ತು ಸಾಧನಗಳ ಕೊಡುಗೆ ನೀಡುತ್ತಿದೆ.

ಓಹಿಯಾದ ಸ್ಟೆಮ್​​ಕ್ಯೂರ್ಸ್​​ ಮೆಡಿಕಲ್​ ಕ್ಲಿನಿಕ್​ ಕಾಂಡ ಕೋಶ ಥೆರಪಿಯಲ್ಲಿ ನೈಪುಣ್ಯತೆ ಹೊಂದಿದೆ. ಈ ಕೇಂದ್ರದಲ್ಲಿ ಹೆಚ್ಚಿನ ಗುಣಮಟ್ಟದ ಸ್ಟೆಮ್​ ಸೆಲ್​ ಅನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಈ ಕ್ಲಿನಿಕ್​ನಲ್ಲಿ ಅನುಭವಿ, ಪರಿಣಿತ ಪಿಜಿಷಿಯನ್​ ತಂಡ ಕೆಲಸ ಮಾಡುತ್ತಿದ್ದು, ಇವರು ರೋಗಿಗಳಿಗೆ ಈ ಕಾಂಡ ಕೋಶ ಚಿಕಿತ್ಸೆ ಕುರಿತು ನಿರ್ಣಯ ನಡೆಸಲು ಮಾಹಿತಿಗಳ ಸಹಾಯ ಮಾಡುತ್ತಾರೆ.

ಏನಿದು ಸ್ಟೆಮ್​ ಸೆಲ್​ ಥೆರಪಿ: ಇದೊಂದು ಸರ್ಜರಿಯೇತರ ಚಿಕಿತ್ಸೆಯಾಗಿದ್ದು, ಕನಿಷ್ಠ ಆಕ್ರಮಣಕಾರಿ ವಿಧಾನವಾಗಿದೆ. ಇದರಲ್ಲಿ ರೋಗಿಯ ವಿವಿಧ ಪರಿಸ್ಥಿತಿಯ ಚಿಕಿತ್ಸೆಗೆ ಅವರದೇ ಕಾಂಡ ಕೋಶಗಳ ಬಳಕೆ ಮಾಡಲಾಗುವುದು. ಈ ಕಾಂಡ ಕೋಶಗಳು ಯಾವುದೇ ರೀತಿಯ ಕೋಶವಾಗುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಗಾಯಗೊಂಡವರಿಗೆ ಆ ಪ್ರದೇಶದಲ್ಲಿ ಇದನ್ನು ಇಂಜೆಕ್ಟ್​​ ಮಾಡಲಾಗುತ್ತದೆ. ಇದರಿಂದ ಆ ಪ್ರದೇಶದಲ್ಲಿ ಟಿಶ್ಯೂಗಳು ಸರಿಯಾಗುತ್ತವೆ. ಊರಿಯುತ ಕಡಿಮೆ ಮಾಡಿ, ಗುಣಮುಖವಾಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕ್ಯಾನ್ಸರ್​ನಿಂದಾಗುವ ಸಾವಿನ ಅಪಾಯ ಕಡಿಮೆ ಮಾಡುತ್ತೆ ವಿಟಮಿನ್​ ಡಿ

ABOUT THE AUTHOR

...view details