ಕರ್ನಾಟಕ

karnataka

ETV Bharat / sukhibhava

ಮೂತ್ರನಾಳ ಸೋಂಕು: ಮಹಿಳೆಯರೇ ಈ ನಿಯಮಗಳನ್ನು ಪಾಲಿಸಿ ಸೋಂಕಿನಿಂದ ದೂರವಿರಿ - ಮೂತ್ರನಾಳ ಸೋಂಕಿನ ಲಕ್ಷಣಗಳು

ಮಹಿಳೆಯರನ್ನು ಸಾಮಾನ್ಯವಾಗಿ ಕಾಡಬಹುದಾದ ಮೂತ್ರನಾಳ ಸೋಂಕನ್ನು ತಡೆಯುವುದು ಹೇಗೆ?. ಅದಕ್ಕೆ ಚಿಕಿತ್ಸಾ ವಿಧಾನ, ತೆಗದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಇಲ್ಲಿದೆ ಮಾಹಿತಿ.

ಮಹಿಳೆಯರೇ ಈ ನಿಯಮಗಳನ್ನು ಪಾಲಿಸಿ ಸೋಂಕಿನಿಂದ ದೂರವಿರಿ
ಮಹಿಳೆಯರೇ ಈ ನಿಯಮಗಳನ್ನು ಪಾಲಿಸಿ ಸೋಂಕಿನಿಂದ ದೂರವಿರಿ

By

Published : Jun 26, 2022, 10:51 PM IST

ಮೂತ್ರನಾಳದ ಸೋಂಕು ಎಲ್ಲಾ ವಯಸ್ಸಿನ ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಕಳಪೆ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳದೇ ಇರುವುದು, ಅಸಮತೋಲಿತ ಆಹಾರ ಪದ್ಧತಿಗಳು ಸೇರಿದಂತೆ ವಿವಿಧ ವಿಷಯಗಳು ಇದಕ್ಕೆ ಕಾರಣವಾಗಬಹುದು.

ಹೆಚ್ಚಿನ ಮಹಿಳೆಯರು ಮೂತ್ರನಾಳದ ಸೋಂಕನ್ನು ಆರಂಭದಲ್ಲಿ ನಿರ್ಲಕ್ಷಿಸುತ್ತಾರೆ. ಬಳಿಕ ಇದು ಅವರಿಗೆ ಸಮಸ್ಯೆಯನ್ನುಂಟು ಮಾಡಬಹುದು. ಸೋಂಕು ಉಲ್ಬಣಗೊಂಡರೆ ಮೂತ್ರಪಿಂಡಗಳು, ಗರ್ಭಾಶಯದ ಮೇಲೂ ಪರಿಣಾಮ ಬೀರು ಸಾಧ್ಯತೆ ಇರುತ್ತದೆ.

ಗೋವಾ ಆರೋಗ್ಯ ಇಲಾಖೆ ನಿವೃತ್ತ ಉಪನಿರ್ದೇಶಕ ಜನರಲ್ ಸರ್ಜನ್ ಡಾ.ರಮೇಶ್ ಮಲ್ಕರ್ನೇಕರ್ ಅವರ ಪ್ರಕಾರ, ಪುರುಷರಿಗಿಂತ ಮಹಿಳೆಯರು ಮೂತ್ರಕೋಶದ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಪುರುಷರಿಗಿಂತ ಮಹಿಳೆಯರು ಮೂತ್ರನಾಳ ಮತ್ತು ಮೂತ್ರಕೋಶದ ನಡುವೆ ಕಡಿಮೆ ಅಂತರವನ್ನು ಹೊಂದಿರುತ್ತಾರೆ. ಇದು ಬಹುಬೇಗ ಬ್ಯಾಕ್ಟೀರಿಯಾಗಳು ಹರಡಲು ಮತ್ತು ಇತರ ಭಾಗಗಳಿಗೆ ಸೋಂಕು ವ್ಯಾಪಿಸಲು ಸುಲಭವಾಗುತ್ತದೆ. ಕ್ಯಾತಿಟರ್(ನಳಿಕೆ) ಅಳವಡಿಸಲಾದ ಮಹಿಳೆಯರು ನಿರಂತರ ಮತ್ತು ಪದೇ ಪದೇ ಸೋಂಕಿಗೆ ಗುರಿಯಾಗುವ ಲಕ್ಷಣಗಳಿರುತ್ತವೆ ಎನ್ನುತ್ತಾರೆ.

ಸೋಂಕನ್ನು ಹೇಗೆ ಗುರುತಿಸುವುದು?..ಮೂತ್ರನಾಳದ ಸೋಂಕು ಆವರಿಸಿದ್ದರೂ ಅದು ಮೊದ ಮೊದಲು ಯಾವುದೇ ಲಕ್ಷಗಣಗಳು ಗೋಚರಿಸುವುದಿಲ್ಲ. ಆದರೆ ಅದು ಸೋಕಿದಾಗ ನಾವು ಹೇಗೆ ಗುರುತಿಸಬಹುದು ಎಂಬುದನ್ನು ಡಾ. ರಮೇಶ್ ಅವರು ಈ ರೀತಿಯಾಗಿ ವಿವರಿಸಿದ್ದಾರೆ.

  • ಅಸಹಜ ಮೂತ್ರದ ಬಣ್ಣ
  • ಮೂತ್ರದಲ್ಲಿ ರಕ್ತ
  • ಮೂತ್ರದಲ್ಲಿ ಕೆಟ್ಟ ಅಥವಾ ಗಾಢ ವಾಸನೆ.
  • ಮೂತ್ರ ವಿಸರ್ಜಿಸುವಾಗ ತೊಂದರೆ, ಬಲಪ್ರಯೋಗದ ಮೂಲಕ ವಿಸರ್ಜನೆ
  • ಒತ್ತಡದಲ್ಲಿ ಮೂತ್ರ ವಿಸರ್ಜಿಸಿದರೂ ಅಲ್ಪ ಪ್ರಮಾಣದಲ್ಲಿ ಮೂತ್ರ ಹೋಗುವುದು
  • ಮೂತ್ರನಾಳ, ಮೂತ್ರಸಂಚಿಯಲ್ಲಿ ಸುಡುವ ಸಂವೇದನೆ
  • ಬೆನ್ನುನೋವು ಅಥವಾ ಕೆಳ ಹೊಟ್ಟೆಯಲ್ಲಿ ಕಿರಿಕಿರಿ
  • ಚಳಿ
  • ಸುಸ್ತು
  • ಜ್ವರ
  • ವಾಂತಿ

ಸೋಂಕನ್ನು ತಡೆಯುವುದು ಹೇಗೆ?..ಪ್ರಸಿದ್ಧ ಸೆಲೆಬ್ರಿಟಿ, ಪೌಷ್ಠಿಕತಜ್ಞೆ ರುಜುತಾ ದಿವೇಕರ್ ಅವರ ಪ್ರಕಾರ, ಮೂತ್ರನಾಳದ ಸೋಂಕನ್ನು ಆರಂಭದಲ್ಲಿ ಪತ್ತೆ ಮಾಡಿ, ಜೀವನಶೈಲಿಯ ಬದಲಾವಣೆಗಳೊಂದಿಗೆ ಈ ಸಮಸ್ಯೆಯನ್ನು ತಡೆಯಬಹುದು ಎಂದು ಹೇಳುತ್ತಾರೆ. ಇದಲ್ಲದೇ ಅವರು ನೀಡುವ ಇನ್ನೂ ಹೆಚ್ಚಿನ ಸಲಹೆಗಳೆಂದರೆ..

ದೇಹದಲ್ಲಿ ನೀರಿನ ಕೊರತೆಯು ಮೂತ್ರನಾಳದ ಸೋಂಕಿಗೆ ಕಾರಣವಾಗಬಹುದು. ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ ಕನಿಷ್ಠ 6 ರಿಂದ 8 ಗ್ಲಾಸ್ ನೀರನ್ನು ಕುಡಿಯಲೇಬೇಕು. ಅಲ್ಲದೇ ದ್ರವ ಪದಾರ್ಥಗಳು ಮತ್ತು ಆರೋಗ್ಯಕರ ಪಾನೀಯಗಳಾದ ತೆಂಗಿನ ನೀರು, ನಿಂಬೆ ಪಾನಕ ಮತ್ತು ಕಬ್ಬಿನ ರಸ ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ. ಈ ಪಾನೀಯಗಳು ದೇಹದಿಂದ ಉಷ್ಣವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಮೂತ್ರನಾಳದ ಸಮಸ್ಯೆಯನ್ನು ಆಗಾಗ್ಗೆ ಎದುರಿಸುವ ಮಹಿಳೆಯರು ನೆಲ್ಲಿಕಾಯಿ, ಬಿಲ್ವಪತ್ರೆ ಕಾಯಿಯ ಜ್ಯೂಸ್​, ಬ್ಯೂರನ್ಸ್ ರಸವನ್ನು ಸೇವಿಸಬೇಕು. ವಿಟಮಿನ್‌, ಖನಿಜ, ಎಲೆಕ್ಟ್ರಾನ್‌ಗಳು ಮತ್ತು ರೋಗ ನಿರೋಧಕ ಶಕ್ತಿ ಇದರಲ್ಲಿ ಹೇರಳವಾಗಿ ಕಂಡುಬರುವುದರಿಂದ ಇದನ್ನು ಶಿಫಾರಸು ಮಾಡಲಾಗಿದೆ. ಜ್ಯೂಸ್​ಗಳನ್ನು ಮಧ್ಯಾಹ್ನದ ವೇಳೆ ಸೇವಿಸುವುದು ಉತ್ತಮ. ಮಲಗುವ ಮೊದಲು ತುಪ್ಪ ಮತ್ತು ಕಷಾಯಚಿ ವಟಿಯಿಂದ ಪಾದಗಳವನ್ನು ಮಸಾಜ್ ಮಾಡುವುದು ಮೂತ್ರನಾಳ ಸೋಂಕು ತಡೆಯಬಹುದಾಗಿದೆ.

ಹಾರ್ಮೋನುಗಳ ಅಸಮತೋಲನವೂ ಕಾರಣ..ಮಹಿಳೆಯರ ದೇಹದಲ್ಲಿನ ಹಾರ್ಮೋನುಗಳ ಅಸಮತೋಲನದಿಂದಲೂ ಕೆಲವೊಮ್ಮೆ ಈ ಸಮಸ್ಯೆ ಉಂಟಾಗಬಹುದು. ಈ ವೇಳೆ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿಯೇ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಅವೇನೆಂದರೆ..?

  1. ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆಗೆ ಹೋಗುವ ಮೊದಲು ಮತ್ತು ನಂತರ ಯಾವಾಗಲೂ ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಿರಿ.
  2. ತೊಳೆದ, ಸ್ವಚ್ಛ ಮತ್ತು ಒಣಗಿದ ಒಳ ಉಡುಪು ಮತ್ತು ಆರಾಮದಾಯಕ ಮತ್ತು ತ್ವರಿತವಾಗಿ ಬೆವರು ಒಣಗಿಸುವ ಸಾಮರ್ಥ್ಯವನ್ನು ಹೊಂದಿರುವ ಬಟ್ಟೆಯನ್ನು ಧರಿಸಿ.
  3. ಮೂತ್ರದಂತಹ ನೈಸರ್ಗಿಕ ಕ್ರಿಯೆಗಳನ್ನು ಎಂದಿಗೂ ನಿಯಂತ್ರಿಸಬೇಡಿ. ಏಕೆಂದರೆ ಇದು ಮೂತ್ರದ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಯುಟಿಐಗೆ ಕಾರಣವಾಗಬಹುದು.
  4. ಜನನಾಂಗದ ಪ್ರದೇಶದಲ್ಲಿ ಯಾವಾಗಲೂ ಹಗುರವಾದ ಬಟ್ಟೆಗಳನ್ನು ಧರಿಸಿ ಮತ್ತು ಬೆವರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಬೆವರಿನಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಅಪಾಯ ಹೆಚ್ಚುತ್ತದೆ.
  5. ಸ್ನಾನದ ನಂತರ, ಬಟ್ಟೆ ಧರಿಸುವ ಮೊದಲು ದೇಹವನ್ನು ಸರಿಯಾಗಿ ಒಣಗಿಸಿ.
  6. ಆರೋಗ್ಯಕರ ಆಹಾರವನ್ನು ಪ್ರತಿದಿನವೂ ಸೇವಿಸಿ.

ಓದಿ:ಆರೋಗ್ಯಕರ ಕ್ರಂಚಿ ಸಲಾಡ್​ಗಳ ಕೆಫೆ ಎಲ್ಲಿವೆ ಗೊತ್ತೇ?

ABOUT THE AUTHOR

...view details