ಕರ್ನಾಟಕ

karnataka

ETV Bharat / sukhibhava

ಆರೋಗ್ಯಕರ ಆಹಾರ ಸೇವನೆಯ ಪ್ರಯೋಜನ ಅನಾರೋಗ್ಯಕರ ಸ್ನಾಕ್​ಗಳಿಂದ ನಾಶ! - ಆರೋಗ್ಯಕರ ಆಹಾರಗಳ ಸೇವನೆಯ ಪ್ರಯೋಜನ

ಆರೋಗ್ಯಕರ ಆಹಾರದ ಆಯ್ಕೆಯ ಜೊತೆಗೆ ಮಾಡುವ ಅನಾರೋಗ್ಯಕ ಸ್ನಾಕ್​ ಆಯ್ಕೆಗಳಿಂದ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.

Unhealthy snacks are destroying the benefits of healthy eating
Unhealthy snacks are destroying the benefits of healthy eating

By ETV Bharat Karnataka Team

Published : Sep 15, 2023, 10:21 PM IST

ಲಂಡನ್​: ಅನಾರೋಗ್ಯಕರ ಸ್ನಾಕ್​ಗಳ ಸೇವನೆ ಮೂಲಕ ಅನೇಕ ಮಂದಿ ಆರೋಗ್ಯಕರ ಆಹಾರಗಳ ಸೇವನೆಯ ಪ್ರಯೋಜನವನ್ನು ನಷ್ಟ ಮಾಡುತ್ತಾರೆ. ಇದು ಅನಾರೋಗ್ಯಕರ ಆಹಾರಗಳು ಆರೋಗ್ಯಕರ ಆಹಾರದ ಶೇ 26ರಷ್ಟ ಅಂಶವನ್ನು ನಾಶಪಡಿಸುತ್ತದೆ. ಇದರಿಂದ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಸಮಸ್ಯೆ ಹೆಚ್ಚುತ್ತದೆ ಎಂದು ಅಧ್ಯಯನ ತಿಳಿಸಿದೆ.

ಸಂಶೋಧಕರು ಸ್ನಾಕ್​ ಅಭ್ಯಾಸ ಹೊಂದಿರುವ 854 ಮಂದಿಯನ್ನು ಅಧ್ಯಯನ ನಡೆಸಿದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿ ತಮ್ಮ ಊಟದಲ್ಲಿ ಆರೋಗ್ಯಕರ ಅಂಶಗಳು ಸ್ನಾಕ್ಸ್​ನ ಸರಿದೂಗಿಸಿಲ್ಲ. ಇದರಿಂದಾಗಿ ಪ್ರತಿಯಾಗಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಮಟ್ಟಗಳಂತಹ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿರುವುದು ಪತ್ತೆಯಾಗಿದೆ.

ಕಾಲು ಭಾಗದಷ್ಟು ಜನರು ಅಂದರೆ ಶೇ 26ರಷ್ಟು ಭಾಗಿದಾರರು ಮುಖ್ಯ ಆಹಾರದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನ ಸಂಸ್ಕರಿತ ಮತ್ತು ಸಕ್ಕರೆಭರಿತ ಸ್ನಾಕ್​ ಸೇವನೆ ಆಯ್ಕೆ ಮಾಡುವುದು ಪತ್ತೆಯಾಗಿದೆ. ಅನಾರೋಗ್ಯಕರ ಅಂಶವೂ ಹೆಚ್ಚಿನ ದೇಹ ತೂಕದ ಸೂಚ್ಯಂಕ (ಬಿಎಂಐ), ಹೆಚ್ಚಿನ ಕೊಬ್ಬಿನ ಅಂಶದೊಂದಿಗೆ ಸಂಬಂಧ ಹೊಂದಿದೆ. ಇದು ಪಾರ್ಶ್ವವಾಯು, ಹೃದಯರಕ್ತನಾಳ ಮತ್ತು ಸ್ಥೂಲಕಾಯದಂತಹ ಚಯಪಯನ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ.

ಆರೋಗ್ಯಕರ ಸ್ನಾಕ್​ಗಳಾದ ನಟ್ಸ್​ ಮತ್ತು ತಾಜಾ ಹಣ್ಣು ಸೇವೆ ಉತ್ತಮ ಚಯಪಚಯನ ಆರೋಗ್ಯ ಹೊಂದಿದ್ದು, ಹಸಿವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಶೋಧನೆಯನ್ನು ಯುರೋಪಿಯನ್​ ಜರ್ನಲ್​ ಆಫ್​ ನ್ಯೂಟ್ರಿಷಿಯನ್​ನಲ್ಲಿ ಪ್ರಕಟಿಸಲಾಗಿದೆ.

ಶೇ 95ರಷ್ಟು ಸ್ನಾಕ್​ಗಳನ್ನು ಲೆಕ್ಕ ಹಾಕಿದಾಗ ಅದು ನಮ್ಮ ಕ್ಯಾಲೋರಿಯ ಕಾಲು ಭಾಗಷ್ಟು ಸ್ನಾಕ್‌ಗಳಿಂದ ಬರುತ್ತದೆ. ಬಿಸ್ಕೆಟ್​​, ಕ್ರಿಸ್ಪ್ಸ್​​ ಮತ್ತು ಕೇಕ್​ನಂತಹ ಅನಾರೋಗ್ಯಕರ ಸ್ನಾಕ್​ಗಳ ಬದಲಾಗಿ ಹಣ್ಣು ಮತ್ತು ನಟ್​​ಗಳ ಸೇವೆ ಮೂಲಕ ಆರೋಗ್ಯವನ್ನು ಸುಧಾರಿಸಬಹುದಾಗಿದೆ ಎಂದು ಲಂಡನ್​ನ ಕಿಂಗ್​ ಕಾಲೇಜ್​ನ ಡಾ.ಸರಹ ಬೆರ್ರಿ ತಿಳಿಸಿದ್ದಾರೆ.

ಮತ್ತೊಂದು ಪ್ರಮುಖ ಅಂಶವೆಂದರೆ ರಾತ್ರಿ 9ರ ನಂತರ ಸ್ನಾಕ್​ ಸೇವನೆ ಇತರೆ ಸಮಯಕ್ಕೆ ಹೋಲಿಸಿದಾಗ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆಹಾರಗಳ ಗುಣಮಟ್ಟ ಆಹಾರದಿಂದ ಸಕಾರಾತ್ಮಕ ಆರೋಗ್ಯ ಫಲಿತಾಂಶವಾಗಿದೆ.

ಹಣ್ಣು, ತರಕಾರಿ, ಪ್ರೋಟಿನ್​ಯುಕ್ತ ಸಮತೋಲಿತ ಆಹಾರವನ್ನು ಆರಿಸುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಅಜೀರ್ಣದಂತಹ ಸಮಸ್ಯೆಗೆ ಅಂಟಾಸಿಡ್​ನಂತೆ ಕಾರ್ಯ ನಿರ್ವಹಿಸಲಿದೆ ಅರಿಶಿಣ

ABOUT THE AUTHOR

...view details