ವರ್ಜಿನಿಯಾ: ಹೊಸ ವಾತಾವರಣಕ್ಕೆ ಹೋದಾಗ ಕಾಲೇಜಿನ ಅನೇಕ ಹೊಸ ವಿದ್ಯಾರ್ಥಿಗಳಲ್ಲಿ ಒಂಟಿತನದ ಭಾವನೆಗಳು ಕಾಡುತ್ತವೆ. ನ್ಯಾಷನಲ್ ಕಾಲೇಜ್ ಹೆಲ್ತ್ ಅಸೆಸ್ಮೆಂಟ್ ಪ್ರಕಾರ, ಕಳೆದ ದಶಕದಲ್ಲಿ ವಿದ್ಯಾರ್ಥಿಗಳಲ್ಲಿ ಈ ಏಕಾಂಗಿತನ ಭಾವನೆ ಕಾಡುವುದು ಹೆಚ್ಚಾಗಿದೆ. 2021ರ ಸಮೀಕ್ಷೆಯಲ್ಲಿ ಈ ಸಂಬಂಧ ಅಮೆರಿಕದ ಶೇ 44ರಷ್ಟು ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ವಿದ್ಯಾರ್ಥಿಗಳಲ್ಲಿ ಯಾವುದೇ ಅಧಿಕ ತೂಕದ ಸಮಸ್ಯೆ ಇದೆ ಎಂದಿದ್ದಾರೆ. ಏಕಾಂಗಿತನವೂ ಅನಾರೋಗ್ಯಕರ ತೂಕ ಹೆಚ್ಚಳ ಮತ್ತು ದೈಹಿಕ ಕ್ರಿಯಾಶೀಲತೆ ಇಲ್ಲದಿರುವುದಕ್ಕೆ ಕೂಡ ಸಂಬಂಧಿಸಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಆಹಾರದ ನಡುವಳಿಕೆ ಕುರಿತು ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಅತಿತೂಕದ ಸಮಸ್ಯೆ ಕುರಿತು ಹೆಚ್ಚಿನ ಸಂಶೋಧನೆ ನಡೆದಿಲ್ಲ.
ಮ್ಯಾನಸನ್ ದತ್ತಾಂಶ : ಆಹಾರ ಗುಣಮಟ್ಟದಲ್ಲಿನ ಬದಲಾವಣೆ ಮತ್ತು ದೈಹಿಕ ಕ್ರಿಯಾಶೀಲತೆ ಇಲ್ಲದಿರುವುದು ಒಂಟಿತನದೊಂದಿಗೆ ಸಂಬಂಧ ಹೊಂದಿದೆ ಎಂಬುದು ಪತ್ತೆಯಾಗಿದೆ ಎಂದು ಮಾಸ್ಟರ್ ನ್ಯೂಟ್ರಿಷಿಯನ್ ಲಿ ಜಿಂಗ್ ತಿಳಿಸಿದ್ದಾರೆ. ಅನಾರೋಗ್ಯಕರ ಆಹಾರ ನಡುವಳಿಕೆ ಮತ್ತು ದೈಹಿಕ ಕ್ರಿಯಾಶೀಲತೆಯೊಂದಿಗೆ ಒಂಟಿತನದ ಸಂಬಂಧ ಕುರಿತು ಅರ್ಥೈಸುವಿಕೆಗೆ ಹೆಚ್ಚಿನ ಅಧ್ಯಯನ ನಡೆಸಲಾಗಿದೆ. ಇದು ಅನೇಕ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ಪರಿಣಾಮಕಾರಿಯಾಗಿದೆ. ಕ್ರಿಯಾಶೀಲತೆ ಇಲ್ಲದೇ ಕುಳಿತಿರುವುದು (ಶೇ 19.2ರಷ್ಟು) ಮತ್ತು ಅತಿ ಕಡಿಮೆ ಕ್ರಿಯಾಶೀಲತೆ (ಶೇ 53.8ರಷ್ಟು) ನಡುವಳಿಕೆಗಳು ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚಿನದಾಗಿ ಒಂಟಿತನದ ಮೇಲೆ ಪರಿಣಾಮ ಬೀರುತ್ತದೆ.
ಒಂಟಿತನವನ್ನು ಕಡಿಮೆ ಮಾಡುವ ಮಧ್ಯಸ್ಥಿಕೆಗಳು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಈ ಅಧ್ಯಯನದ ಕಾಲೇಜು ವಿದ್ಯಾರ್ಥಿಗಳು ಆರೋಗ್ಯಕರ ಆಹಾರದ ಮಾರ್ಗಸೂಚಿಗಳನ್ನು ಪೂರೈಸುತ್ತಿಲ್ಲ ಅಥವಾ ಸಾಕಷ್ಟು ದೈಹಿಕ ಚಟುವಟಿಕೆಯನ್ನು ಪಡೆಯುತ್ತಿಲ್ಲ ಎಂದು ಚೆಸ್ಕಿನ್ ತಿಳಿಸಿದ್ದಾರೆ.