ಕರ್ನಾಟಕ

karnataka

ETV Bharat / sukhibhava

ಭಾರತದಲ್ಲಿ ಹೆಚ್ಚುತ್ತಿದೆ ಅನಿರೀಕ್ಷಿತ ಹೃದಯಾಘಾತ, ಪಾರ್ಶ್ವವಾಯು ಪೀಡಿತರ ಸಂಖ್ಯೆ.. ಕಾರಣ? - ಈಟಿವಿ ಭಾರತ್​ ಕನ್ನಡ

ಕಳೆದ ಮೂರು ತಿಂಗಳಿನಿಂದ ಆರೋಗ್ಯಯುತ ಯುವ ಮತ್ತು ಮಧ್ಯಮ ವಯಸ್ಸಿನ ಮಹಿಳೆ ಮತ್ತು ಪುರುಷರು ಹೃದಾಯಘಾತಕ್ಕೆ ತುತ್ತಾಗಿ, ಸಾವನ್ನಪ್ಪುತ್ತಿರುವುದು ವರದಿಯಾಗುತ್ತಿದೆ

ಭಾರತದಲ್ಲಿ ಹೆಚ್ಚುತ್ತಿದೆ ಅನಿರೀಕ್ಷಿತ ಹೃದಯಾಘಾತ, ಪಾರ್ಶ್ವವಾಯು ಪೀಡಿತರ ಸಂಖ್ಯೆ
unexpected-heart-attacks-and-strokes-are-on-the-rise-in-india

By

Published : Dec 10, 2022, 12:10 PM IST

ನವದೆಹಲಿ:ಭಾರತದ ಅನೇಕ ಯುವ-ಮಧ್ಯಮ ವಯಸ್ಸಿನ ಆರೋಗ್ಯವಂತರಲ್ಲಿ ಅನೀರಿಕ್ಷಿತ ಹೃದಯಾಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಲಸಿಕೆ ಪಡೆದವರು, ಪಡೆಯದವರು ಕೂಡ ಇಂತಹ ಆರೋಗ್ಯ ತುರ್ತುಪರಿಸ್ಥಿತಿಗೆ ಗುರಿಯಾಗುತ್ತಿದ್ದಾರೆ ಎಂಬುದನ್ನು ಸಮೀಕ್ಷೆ ತಿಳಿಸಿದೆ.

ಸುಮಾರು ಶೇ 51ರಷ್ಟು ನಾಗರಿಕರು ತಮ್ಮ ಆಪ್ತ ವಲಯದ ಜನರಲ್ಲಿ ಅನೀಕ್ಷಿತ ಹೃದಯಾಘಾತ ಅಥವಾ ಬ್ರೈನ್​ ಸ್ಟ್ರೋಕ್​, ರಕ್ತ ಹೆಪ್ಪುಗಟ್ಟುವಿಕೆ, ನರಗಳ ಸಮಸ್ಯೆ, ಕ್ಯಾನ್ಸರ್ ನಂತಹ ತುರ್ತು ಆರೋಗ್ಯ ಸ್ಥಿತಿಗೆ ಕಳೆದೆರಡು ವರ್ಷದಿಂದ ಗುರಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಇಂತಹ ಆರೋಗ್ಯ ತುರ್ತು ಪರಿಸ್ಥಿತಿ ಹೊಂದಿದವರೆಲ್ಲ ಎರಡೂ ಲಸಿಕೆ ಪಡೆದವರಾಗಿದ್ದಾರೆ ಎಂದು 62 ಪ್ರತಿಶತ ಜನರು ತಿಳಿಸಿದ್ದಾರೆ, 11 ರಷ್ಟು ಮಂದಿ ಒಂದೇ ಡೋಸ್​ ಲಸಿಕೆ ಪಡೆದಿದ್ದಾರೆ. 8 ರಷ್ಟು ಜನರು ಯಾವುದೇ ಲಸಿಕೆ ಪಡೆದಿಲ್ಲ. ಇನ್ನು 61 ಪ್ರತಿಶತ ಜನರು ಒಂದು ಅಥವಾ ಅನೇಕ ಬಾರಿ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ.

28 ರಷ್ಟು ಜನರು ಅನೇಕರ ಆರೋಗ್ಯ ಪರಿಸ್ಥಿತಿ ಹೊಂದಿದ್ದು, ಯಾವುದೇ ಕೋವಿಡ್​ ಸೋಂಕು ಹೊಂದಿಲ್ಲ ಎಂದು ತಿಳಿಸಿದ್ದಾರೆ ಎಂದು ಸಮೀಕ್ಷೆ ನಡೆಸಿದ ಲೋಕಲ್​ ಸರ್ಕಲ್​ ತಿಳಿಸಿದೆ. ಇನ್ನು ಈ ಸಮೀಕ್ಷೆಯಲ್ಲಿ 357 ಜಿಲ್ಲೆಯ 32 ಸಾವಿರ ಜನರು ಭಾಗಿಯಾಗಿದ್ದಾರೆ.

ಪ್ರಪಂಚದಲ್ಲಿ ಸರಿ ಸುಮಾರು 200 ಮಿಲಿಯನ್​ ಜನರು ಪ್ರಸ್ತುತ ದೀರ್ಘಾವಧಿ ಕೋವಿಡ್​ ಹೊಂದಿದ್ದಾರೆ. ಅವರು ಮಯೋಕಾರ್ಡಿಟಿಸ್, ಪೆರಿಕಾರ್ಡಿಟಿಸ್, ಬ್ರೈನ್​ ಫಾಗ್​ ಅಥವಾ ಸ್ಮರಣಾ ಶಕ್ತಿ ಕಳೆದುಕೊಳ್ಳುವಿಕೆ, ಸ್ಲೀಪ್​ ಅಪ್ನೆಯ, ಕೀಲು ನೋವು ಮತ್ತು ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಇದರ ಜೊತೆಗೆ ಕಳೆದ ಮೂರು ತಿಂಗಳಿನಿಂದ ಆರೋಗ್ಯಯುತ ಯುವ ಮತ್ತು ಮಧ್ಯಮ ವಯಸ್ಸಿನ ಮಹಿಳೆ ಮತ್ತು ಪುರುಷರು ಹೃದಾಯಘಾತಕ್ಕೆ ತುತ್ತಾಗಿ, ಸಾವನ್ನಪ್ಪುತ್ತಿರುವುದು ವರದಿಯಾಗುತ್ತಿದೆ

ಅನೇಕ ಪ್ರಕರಣಗಳಲ್ಲಿ ಡ್ಯಾನ್ಸ್​, ಜಿಮ್​, ವಾಕಿಂಗ್​ ನಂತ ದೈಹಿಕ ಚುಟುವಟಿಕೆಯ ಸಮಯದಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅನೇಕರ ಮನಸ್ಸಿನಲ್ಲಿ ಚಿಂತೆ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಇಂತಹ ಹಠಾತ್ ಸಾವುಗಳಿಗೆ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸುವುದಾಗಿ ಸಮೀಕ್ಷೆ ತಿಳಿಸಿದೆ.

ಇನ್ನು ಕೋವಿಡ್​ನಿಂದಾಗಿ ಅನೇಕರು ಪಾರ್ಶ್ವವಾಯುಗೆ ತುತ್ತಾಗುತ್ತಿದ್ದಾರೆ. 0.9 ನಿಂದ 23 ಪ್ರತಿಶತ ಕೋವಿಡ್ ರೋಗಿಗಳಲ್ಲಿ ಪಾರ್ಶ್ವವಾಯು ಕಂಡು ಬಂದಿದೆ ಎಂದು ಬೆಂಗಳೂರಿನ ನಾರಾಯಣ ಹೆಲ್ತ್​​ ಆಸ್ಪತ್ರೆ ತಿಳಿಸಿದೆ. ಕಳೆದ ವರ್ಷ ವೈದ್ಯರಿಗಾಗಿ ಕೋವಿಡ್ ನಂತರದ ಸೀಕ್ವೆಲೇ ನಿರ್ವಹಣೆಗಾಗಿ ರಾಷ್ಟ್ರೀಯ ಸಮಗ್ರ ಮಾರ್ಗಸೂಚಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರ ತಂದಿತು.

ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ನಾಗರಿಕರಿಗೆ ಒಂದಕ್ಕಿಂತ ಹೆಚ್ಚು ಬಾರಿ ಕೋವಿಡ್ ಅಥವಾ ಅದರ ರೂಪಾಂತರಗಳಿಂದ ಬದುಕುಳಿದಿರುವ ನಾಗರಿಕರಿಗೆ ಕೋವಿಡ್ ಮರುಸೋಂಕನ್ನು ತಪ್ಪಿಸಲು ಮತ್ತು ಅಗತ್ಯತೆಗಳ ಬಗ್ಗೆ ತಿಳಿಸಲು ಆಗಿಲ್ಲ. ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಕೋವಿಡ್‌ನ ನಂತರದ ಪರಿಣಾಮಗಳಿಂದ ಬಳಲುತ್ತಿರುವುದಾಗ ಸಮೀಕ್ಷೆಯಲ್ಲಿನ ಅರ್ಧಕ್ಕಿಂತ ಹೆಚ್ಚಿನ ಮಂದಿ ತಿಳಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: ಕೋವಿಡ್​ ಆಘಾತದಿಂದ ಚೇತರಿಸಿಕೊಳ್ಳಲು ಕೇರ್​ ಹೋಮ್​ ನರ್ಸ್​ಗಳಿಗೆ ಬೇಕಿದೆ ಸಹಾಯ; ಸಂಶೋಧನೆ

ABOUT THE AUTHOR

...view details