ಕರ್ನಾಟಕ

karnataka

ETV Bharat / sukhibhava

ಗಾಜಾ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ : ವಿಶ್ವಸಂಸ್ಥೆ ಕಳವಳ - ಗಾಜಾದ ಆರೋಗ್ಯ ಪರಿಸ್ಥಿತಿ

ಹಮಾಸ್​ - ಇಸ್ರೇಲ್​ ಯುದ್ಧ ಆರಂಭ ಆದಾಗಿನಿಂದಲೂ ಆಶ್ರಯತಾಣಗಳಲ್ಲಿ ನೆಲೆ ಪಡೆದಿರುವ ಜನರು ನಿರಂತರ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

UN chief expresses concern over fear of infectious diseases in Gaza
UN chief expresses concern over fear of infectious diseases in Gaza

By ETV Bharat Karnataka Team

Published : Dec 30, 2023, 12:44 PM IST

Updated : Dec 30, 2023, 1:59 PM IST

ನವದೆಹಲಿ: ಹಮಾಸ್​ - ಇಸ್ರೇಲ್​ನಿಂದ ಯುದ್ಧ ಸಂಘರ್ಷದಿಂದ ಗಾಜಾ ಪಟ್ಟಿಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚುತ್ತಿದೆ. ಇದು ಅತ್ಯಂತ ಕಾಳಜಿಯ ವಿಚಾರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್​​ ಅಧಾನೊಮ್​ ಗಬ್ರೆಯೆಸಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಯುದ್ಧದಿಂದ ನೆಲೆ ಕಳೆದುಕೊಂಡಿರುವ ಕಾರಣ ದಕ್ಷಿಣ ಗಾಜಾದಿಂದ ಹೆಚ್ಚಿನ ಪ್ರಮಾಣದಲ್ಲಿ ಜನರು ಸ್ಥಳಾಂತರ ಅಗುತ್ತಿರುವುದು ಮುಂದುವರೆದಿದೆ. ಪದೇ ಪದೆ ಸಂತ್ರಸ್ತರು ಈ ರೀತಿ ಸ್ಥಳಾಂತರಗೊಳ್ಳುತ್ತಿದ್ದು, ಅನೇಕ ಆಶ್ರಯ ತಾಣಗಳ ಮೊರೆ ಹೋಗಿದ್ದಾರೆ. ಈಗಾಗಲೇ ಜನರಿಂದ ಕಿಕ್ಕಿರಿದು ತುಂಬಿರುವುದು ಈ ಆಶ್ರಯ ತಾಣಗಳಲ್ಲಿ ಹಲವು ರೋಗಗಳ ಪ್ರಸರಣಕ್ಕೆ ಕಾರಣವಾಗಿದೆ. ಅಲ್ಲದೆ, ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವುದು ಚಿಂತೆಗೀಡು ಮಾಡಿದೆ ಎಂದಿದ್ದಾರೆ.

ಅಕ್ಟೋಬರ್​ ಮಧ್ಯದಿಂದ ಡಿಸೆಂಬರ್​ ಮಧ್ಯದವರೆಗೆ ಆಶ್ರಯ ತಾಣದಲ್ಲಿರುವ ಮಂದಿ ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇಲ್ಲಿನ 1,80,000 ಜನರು ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಗಾಜಾದಲ್ಲಿನ ಆರೋಗ್ಯ ಸ್ಥಿತಿಯ ಕರಾಳತೆ ಬಗ್ಗೆ ವಿವರಿಸಿದ್ದಾರೆ.

ಶುದ್ದ ಕುಡಿಯುವ ನೀರಿನ ಕೊರತೆ, ಅನೈರ್ಮಲ್ಯ ವಾತಾವರಣದಿಂದ 1,36,400 ಮಂದಿ ಮಕ್ಕಳು ಅತಿಸಾರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿ 5 ವರ್ಷದೊಳಗಿನ ಮಕ್ಕಳಗಾಗಿದ್ದಾರೆ. ಜನರಲ್ಲಿ ಕಾಡುತ್ತಿರುವ ರೋಗಗಳ ಸಂಖ್ಯೆ ಹೀಗಿದೆ. 55,400 ತುರಿಕೆ ಪ್ರಕರಣ, 5,330 ಚಿಕನ್​ಪಾಕ್ಸ್​, 42,700 ಚರ್ಮದ ದದ್ದು, 4722 ಇಂಪಿಟಿಗೊ ಪ್ರಕರಣ, 4,683 ಜಾಂಡೀಸ್​ ಕಾಯಿಲೆ​ ಮತ್ತು 126 ಮೆನಿಂಜೈಟಿಸ್ ಪ್ರಕರಣಗಳಾಗಿದೆ ಎಂದು ಟೆಡ್ರೊಸ್​ ತಿಳಿಸಿದ್ದಾರೆ.

ಔಷಧಗಳ ಪೂರೈಕೆ ಮಾಡುವ ಮೂಲಕ ರೋಗಗಳ ನಿಯಂತ್ರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಭಾಗಿದಾರರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಪರೀಕ್ಷಾ ಕಿಟ್​​ಗಳು ಈ ರೋಗಗಳ ಪತ್ತೆಗೆ ಬೆಂಬಲ ನೀಡುತ್ತಿದೆ. ಹೆಪೆಟೈಟಿಸ್​​ನಂತಹ ರೋಗಗಳ ಸಾಂಕ್ರಾಮಿಕತೆ ಹರಡುವುವಿಕೆ ತಡೆಯಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಜನರಿಗೆ ಶುದ್ದ ನೀರು, ಶುಚಿತ್ವ ಮತ್ತು ನೈರ್ಮಲ್ಯ ಸೇವೆ ಸೌಲಭ್ಯದ ಸುಧಾರಣೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ:ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ; ಐಡಿಎಫ್​ ನಾಶ ಮಾಡುತ್ತೇವೆಂದ ಸಿನ್ವರ್

Last Updated : Dec 30, 2023, 1:59 PM IST

ABOUT THE AUTHOR

...view details