ನವದೆಹಲಿ: ಕೋವಿಡ್ 19ನ ಉಪತಳಿಯಾಗಿರುವ ಜೆಎನ್1 ಸೋಂಕಿನ ಪ್ರಕರಣಗಳ ಸಾಮಾನ್ಯ ಲಕ್ಷಣ ಕುರಿತು ಯುಕೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆತಂಕ ಮತ್ತು ನಿದ್ರೆಯಲ್ಲಿ ತೊಡಕು ಉಂಟಾಗುವುದು ಇದರ ಹೊಸ ಲಕ್ಷಣವಾಗಿದೆ ಎಂದು ವರದಿ ತಿಳಿಸಿದೆ.
ಜೆಎನ್1 ಎಂಬುದು ಓಮ್ರಿಕಾನ್ ವಂಶವಾಹಿನಿಯ ಸೋಂಕು ಆಗಿದ್ದು, ಕಳೆದ ಆಗಸ್ಟ್ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಸದ್ಯ 40 ದೇಶದಲ್ಲಿ ಇದು ಕಂಡುಬಂದಿದೆ. ಈ ಜೆಎನ್1 ಸೋಂಕು ವೇಗವಾಗಿ ಹರಡುವ ಹಿನ್ನೆಲೆ ಇದನ್ನು ಆಸಕ್ತಿ ರೂಪಾಂತರ ಎಂದು ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿದೆ. ಜೆಎನ್1 ಎಂಬುದು ಬಿಎ.2.86ರ ವಂಶವಾಹಿನಿಯಾಗಿದ್ದು, ಬಿಎ.2.86 ಹೋಲಿಕೆ ಮಾಡಿದಾಗ ಜೆಎನ್1 ಸ್ಪೈಜಕ್ ಪ್ರೋಟಿನ್ ಎಲ್455ಎಸ್ ರೂಪಾಂತರವನ್ನು ಹೊಂದಿದ್ದು, ಇದು ವೇಗವಾಗಿ ಹರಡುತ್ತದೆ. ಆದಾಗ್ಯೂ ಈ ತಳಿಯು ಯಾವುದೇ ಹೊಸ ಲಕ್ಷಣ ಅಥವಾ ಅಸಾಮಾನ್ಯ ಲಕ್ಷಣವನ್ನು ತೋರಿಸಿಲ್ಲ ಎಂದು ವರದಿ ತಿಳಿಸಿದೆ.
ಇಲ್ಲಿಯವರೆಗಿನ ಲಕ್ಷಣ ವರದಿಯಲ್ಲಿ ಈ ಸೋಂಕು ತಗುಲಿದವರಲ್ಲಿ ಶ್ವಾಸಕೋಶದ ಮೇಲ್ಭಾಗದಲ್ಲಿ ಸೋಂಕು ಕಂಡು ಬಂದಿದೆ. ಇದರಿಂದ ಜ್ವರ, ಕೆಮ್ಮು, ಗಂಟಲು ನೋವು, ಮೈಕೈ ನೋವು ಮತ್ತು ಮೂಗು ಸೋರುವಿಕೆಯಂತಹ ಲಕ್ಷಣಗಳನ್ನು ಕಾಣಬಹುದಾಗಿದೆ. ಆದರೆ ಇತ್ತೀಚಿನ ದತ್ತಾಂಶದ ಪ್ರಕಾರ, ಯುಜೆಯ ಆಫೀಸ್ ಫಾರ್ ನ್ಯಾಷನಲ್ ಸ್ಟಾಟಿಸ್ಟಿಕ್ಸ್ (ಒಎನ್ಎಸ್) ಇದರ ಎರಡು ಲಕ್ಷಣವನ್ನು ಪತ್ತೆ ಮಾಡಿದೆ. ಅದುವೇ ನಿದ್ರೆಯಲ್ಲಿ ತೊಡಕು ಮತ್ತು ಆತಂಕ.
ನವೆಂಬರ್ ಆರಂಭದಲ್ಲಿ ಯುಕೆಯಲ್ಲಿ ಶೇ 10ಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್ ಇದ್ದು, ಅವರಲ್ಲಿ ಆತಂಕ ಅಥವಾ ಹೆಚ್ಚಿನ ಚಿಂತೆಗಳನ್ನು ಕಾಣಬಹುದು ಆಗಿದೆ ಎಂದು ಒಎನ್ಎಸ್ ಚಳಿಗಾಲದ ಕೋವಿಡ್ ವರದಿಯಲ್ಲಿ ತಿಳಿಸಿದೆ.