ಕರ್ನಾಟಕ

karnataka

ETV Bharat / sukhibhava

ದತ್ತಾಂಶ ಕಾಳಜಿ; ಮಹಿಳೆಯರ ಋತುಚಕ್ರ ಮತ್ತು ಫಲವತ್ತತೆ ಪತ್ತೆ ಆ್ಯಪ್​ಗಳ ಸುರಕ್ಷೆ ಬಗ್ಗೆ ಪರಿಶೀಲಿಸಿದ ಯುಕೆ

ಮಹಿಳೆಯರು ತಮ್ಮ ಋತುಚಕ್ರದ ಅವಧಿ ಪತ್ತೆಗೆ ಜೊತೆಗೆ ಫಲವತ್ತತೆ ಮತ್ತು ಅದನ್ನು ತಡೆಗಟ್ಟುವ ಸಲುವಾಗಿ ಅನೇಕ ಆ್ಯಪ್​ ಬಳಕೆ ಮಾಡುತ್ತಿದ್ದು, ಇದರಲ್ಲಿ ದತ್ತಾಂಶವನ್ನು ನೀಡುತ್ತಿದ್ದಾರೆ.

UK examines safety of women's menstrual cycle and fertility tracking apps
UK examines safety of women's menstrual cycle and fertility tracking apps

By ETV Bharat Karnataka Team

Published : Sep 9, 2023, 10:51 AM IST

ಲಂಡನ್​: ಮಹಿಳೆಯರು ಬಳಕೆ ಮಾಡುತ್ತಿರುವ ಋತುಚಕ್ರ ಮತ್ತು ಫಲವತ್ತತೆಯ ಆ್ಯಪ್​ಗಳ ದತ್ತಾಂಶ ಸುರಕ್ಷೆ ಬಗ್ಗೆ ಕಾಳಜಿಯನ್ನು ಹೊಂದಿದ್ದು, ಯುಕೆ ಇವುಗಳನ್ನು ಪುರಿಶೀಲಿಸುವುದಾಗಿ ಘೋಷಿಸಿದೆ.

ಮಾಹಿತಿ ಆಯುಕ್ತ ಕಚೇರಿ (ಐಸಿಒ) ಅರ್ಧದಷ್ಟು ಮಹಿಳೆಯರು ಅಂದರೆ ಶೇ 59ರಷ್ಟು ಮಂದಿ ಈ ಆ್ಯಪ್​ಗಳ ಆಯ್ಕೆ ಸಂದರ್ಭದಲ್ಲಿ ದತ್ತಾಂಶಗಳನ್ನು ಹೇಗೆ ಬಳಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ಸುರಕ್ಷತೆಯ ಪಾರದರ್ಶಕತೆ ಕುರಿತು ಕಾಳಜಿ ವಹಿಸಿದ ಹಿನ್ನೆಲೆ ಈ ವಿಮರ್ಶೆ ಹೊರಬಿದ್ದಿದೆ.

ಶೇ 57ರಷ್ಟು ಮಂದಿ ಫ್ಲಾಟ್​ಫಾರ್ಮ್​ಗಳ ವೆಚ್ಚಕ್ಕಿಂತ (ಶೇ 55) ಮತ್ತು ಬಳಕೆಯ ಸರಾಗತೆಗಿಂತಲೂ (ಶೇ55) ಎಷ್ಟು ಸುರಕ್ಷಿತವಾಗಿದೆ ಎಂಬುದರ ಕುರಿತು ಹೆಚ್ಚು ಚಿಂತಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಮೂರನೇ ಒಂದರಷ್ಟು ಮಹಿಳೆಯರು ತಮ್ಮ ಋತುಚಕ್ರದ ಅವಧಿ ಮತ್ತು ಫಲವತ್ತತೆಯ ಪತ್ತೆ ಹಚ್ಚಲು ಅಪ್ಲಿಕೇಷನ್​ ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ದತ್ತಾಂಶಗಳ ಸುರಕ್ಷತೆಯು ಮಹಿಳೆ ತನ್ನ ಋತುಚಕ್ರ ಅವಧಿ ಅಥವಾ ಗರ್ಭಧಾರಣೆ ಯೋಜನೆ ಅಥವಾ ತಡೆಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಕಾಳಜಿ ಹೊಂದಿದೆ. ಈ ದತ್ತಾಂಶದಲ್ಲಿ ಸೂಕ್ಷ್ಮ ಮತ್ತು ವೈಯಕ್ತಿಕ ಮಾಹಿತಿ ನೀಡಿದರು ಅಚ್ಚರಿ ಇಲ್ಲ ಎಂದು ಐಒಸಿಯ ನಿಯಮ ನಿಯಂತ್ರಕ ಉಪ ಆಯುಕ್ತರಾಗಿರುವ ಎಮಿಲಿ ಕೀನಿ ತಿಳಿಸಿದ್ದಾರೆ.

ಅಪ್ಲಿಕೇಶನ್​ ಅನ್ನು ಬಳಸುವ ಅರ್ಧದಷ್ಟು ಮಹಿಳೆಯರು ಸೈನ್​ಅಪ್​ ಮಾಡಿದ ಸಂದರ್ಭದಲ್ಲಿ ಮಗು ಅಥವಾ ಫಲವತ್ತತೆ ಸಂಬಂಧದ ಜಾಹೀರಾತು ಗಮನಿಸಿದ್ದಾಗಿ ತಿಳಿಸಿದ್ದಾರೆ. ಕೆಲವರು ಈ ಜಾಹೀರಾತುಗಳನ್ನು ಸಕಾರಾತ್ಮಕವಾಗಿ ಕಂಡರೆ, ಶೇ 17ರಷ್ಟು ಮಂದಿಗೆ ಇದು ದುಃಖಕರ ಎಂದು ತಿಳಿಸಿದ್ದಾರೆ.

ಮಹಿಳೆಯರು ವಿಶ್ವಾಸದಿಂದ ಇಂತಹ ಆ್ಯಪ್​ಗಳನ್ನು ಬಳಕೆ ಮಾಡಬಹುದು ಎಂಬುದನ್ನು ನಾವು ದೃಢಪಡಿಸುತ್ತೇವೆ. ಇದೇ ವೇಳೆ ಈ ಸಂಬಂಧ ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ತಿಳಿಸುತ್ತೇವೆ. ಈ ಮೂಲಕ ಈ ಕ್ಷೇತ್ರದಲ್ಲಿ ಸುಧಾರಣೆ ಅಗತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತದೆ. ಕೆಲವು ಮಂದಿಗೆ ಈ ಅಪ್ಲಿಕೇಷನ್​ಗು ಪ್ರಯೋಜವನ್ನು ತರುತ್ತಿದ್ದರೆ, ಅದನ್ನು ನಾವು ಕೇಳ ಬಯಸುತ್ತೇವೆ ಎಂದು ಕೀನಿ ತಿಳಿಸಿದ್ದಾರೆ.

ಎಲ್ಲಾ ಆರೋಗ್ಯದ ಆ್ಯಪ್​ ಜೊತೆಗೆ ಸಂಸ್ಥೆಗಳು ಬಳಕೆದಾರರ ಖಾಸಗಿತನ ಸುರಕ್ಷೆ ಮಾಡುವ ಮತ್ತು ಸ್ಥಳದಲ್ಲಿನ ನಿಯಮಗಳ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದನ್ನು ನಿರೀಕ್ಷಿಸುತ್ತೇವೆ. ಈ ಪರಿಶೀಲನೆ ಆ್ಯಪ್​ಗಳು ಪ್ರಸ್ತುತ ಕೆಲಸ ನಿರ್ವಹಿಸುತ್ತಿದೆ ಎಂಬ ಸಂಬಂಧ ಒಳ್ಳೆಯ ಮತ್ತು ಕೆಟ್ಟ ಅಂಶವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಇದೇ ವೇಳೆ ಬಳಕೆದಾರರ ರಕ್ಷಿಸಲು ಅಗತ್ಯವಾದಲ್ಲಿ ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದು ಗಮನಿಸಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಕೋವಿಡ್​ ಸೋಂಕಿತ ವ್ಯಕ್ತಿ ವಾಸನೆ, ರುಚಿ ಕಳೆದುಕೊಳ್ಳುವುದೇಕೆ?

ABOUT THE AUTHOR

...view details