ಫರೀದಾಬಾದ್:ಭಾರತದಲ್ಲಿ ಮೂರರಲ್ಲಿ ಎರಡು ಗರ್ಭಕಂಠ ಕ್ಯಾನ್ಸರ್ ರೋಗಿಗಳು ತಡವಾಗಿ ಪತ್ತಯಾಗುತ್ತಿದ್ದಾರೆ. ಭಾರತದಲ್ಲಿ ಗರ್ಭ ಕಂಠ ಕ್ಯಾನ್ಸರ್ ಎಂಬುದು ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ಶೇ 18ರಷ್ಟು ಮಹಿಳೆಯರು ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ
ಜನವರಿಯನ್ನು ಗರ್ಭಕಂಠ ಕ್ಯಾನ್ಸರ್ ಜಾಗೃತಿ ಮಾಸ ಎಂದು ಆಚರಿಸಲಾಗುತ್ತಿದ್ದು, ಈ ಕುರಿತು ಮಾತನಾಡಿರುವ ಫರೀದಾಬಾದ್ನ ಅಮೃತ್ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾಗಿರುವ ಡಾ ನೇಹಾ ಕುಮಾರ್, ಪ್ರತಿ ವರ್ಷ ಭಾರತದಲ್ಲಿ ಗರ್ಭಕಂಠ ಕ್ಯಾನ್ಸರ್ನ 1,20,00 ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದರಲ್ಲಿ 77,000 ಪ್ರಕರಣದಲ್ಲಿ ರೋಗಿಗಳು ತಡವಾಗಿ ಅಥವಾ ಅಭಿವೃದ್ಧಿ ಸ್ಥಿತಿಯಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ಸಾವನ್ನಪ್ಪುತ್ತಿದ್ದಾರೆ. ಈ ಗರ್ಭಕಂಠ ಕ್ಯಾನ್ಸರ್ನ ಸಾವಿನ ಪ್ರಮಾಣ ಅಂದಾಜು ಶೇ 63ರಷ್ಟು ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಭಾರತದಲ್ಲಿ ಗರ್ಭಕಂಠ ಕ್ಯಾನ್ಸರ್ ವೈದ್ಯಕೀಯ ಕ್ಷೇತ್ರದಲ್ಲಿ ಭಾರಿ ಹೊರೆಯಾಗಲು ಕಾರಣವಾಗಿರುವ ಅಂಶ ಎಂದರೆ, ಈ ಕುರಿತು ಸರಿಯಾದ ಜ್ಞಾನವನ್ನು ಹೊಂದಿಲ್ಲದೇ ಇರುವುದು ಮತ್ತು ಇದನ್ನು ಪತ್ತೆ ಹಚ್ಚುವುದಕ್ಕೆ ಕಷ್ಟವಾಗುತ್ತಿದೆ. ರೋಗಗ್ರಸ್ಥತೆ ಮತ್ತು ಸಾವಿಗೆ ಪ್ರಮುಖ ಕಾರಣವಾಗಿರುವ ಅಂಶಗಳು ತಡವಾಗಿ ಪತ್ತೆ ಮತ್ತು ಇದಕ್ಕೆ ಸೂಕ್ತ ಚಿಕಿತ್ಸೆಯ ಲಭ್ಯತೆ ಇಲ್ಲದಿರುವುದಾಗಿದೆ.
ಗರ್ಭಕಂಠದಲ್ಲಿನ ಬದಲಾವಣೆಗಳ ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದರಿಂದ ಕ್ಯಾನ್ಸರ್ ಅಭಿವೃದ್ಧಿ ಹೊಂದುವುದನ್ನು ತಪ್ಪಿಸಬಹುದಾಗಿದೆ. ಮಾರಾಣಾಂತಿಕ ಕೋಶಗಳು ಹರಡುವ ಮುನ್ನವೇ ಈ ಕ್ಯಾನ್ಸರ್ ಪತ್ತೆ ಮಾಡುವ ಅವಶ್ಯಕತೆ ಇದೆ.