ಹೈದರಾಬಾದ್:ಈ ವರ್ಷ ಜನರು ಕೋವಿಡ್-19 ನಿರ್ಬಂಧಗಳಿಂದಾಗಿ ಸಾಕಷ್ಟು ಸಮಯವನ್ನು ಮನೆಯಲ್ಲೇ ಕಳೆಯಬೇಕಾಯಿತು. ಆದರೆ, ಅವರಲ್ಲಿ ಅನೇಕರು ಆರೋಗ್ಯ ಮತ್ತು ಫಿಟ್‌ನೆಸ್ ಕುರಿತು ಗಮನ ಹರಿಸಿದರು. ಕೆಲವು ಜನರು ತಮ್ಮ ದೈನಂದಿನ ದಿನಚರಿಗೆ ತಾಲೀಮು ಅವಧಿಗಳನ್ನು ಸೇರಿಸಿದರೆ, ಇತರರು ಆರೋಗ್ಯಕರ ಮತ್ತು ಪೋಷಕಾಂಶಯುಕ್ತ ಆಹಾರ ಅಳವಡಿಸಿಕೊಂಡರು.
ಇದು ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಜನರಿಗೆ ಸಹಾಯ ಮಾಡಿತು. 2020ರ ಕೆಲವು ಉನ್ನತ ಆಹಾರ ಮತ್ತು ಆರೋಗ್ಯಕರ ಆಹಾರ ಪ್ರವೃತ್ತಿಗಳನ್ನು ನೋಡೋಣ.
ಆಹಾರ ಪದ್ಧತಿ:ಈ ವರ್ಷ ಹಲವರು ಡಯಟಿಂಗ್ ಮೊರೆ ಹೋಗಿದ್ದು, ಅತ್ಯಂತ ಜನಪ್ರಿಯ ಆಹಾರಕ್ರಮಗಳು ಇಲ್ಲಿವೆ:
ಕೀಟೋ ಡಯಟ್: ಇದನ್ನು ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳ ಮೊದಲ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಹೆಚ್ಚಿನ ಕೊಬ್ಬು ಮತ್ತು ಕಡಿಮೆ ಕಾರ್ಬೋಹೈಡ್ರೇಟ್ಯುಕ್ತ ಆಹಾರವು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ವರ್ಷ ಕೀಟೋ ಡಯಟ್ ಸಾಮಾನ್ಯ ಜನರಲ್ಲಿ ಬಹಳ ಜನಪ್ರಿಯವಾಗಿತ್ತು. ಈ ಆಹಾರದಲ್ಲಿ ಧಾನ್ಯಗಳು, ಸಕ್ಕರೆ, ಬ್ರೆಡ್, ಆಲ್ಕೋಹಾಲ್, ಡೈರಿ ಮತ್ತು ಸಂಸ್ಕರಿಸಿದ ಆಹಾರವನ್ನು ಸಂಪೂರ್ಣವಾಗಿ ಕೈ ಬಿಡಲಾಗುತ್ತದೆ. ಕೀಟೋ ಆಹಾರದ ಋಣಾತ್ಮಕ ಪರಿಣಾಮಗಳ ಬಗ್ಗೆ ಅನೇಕ ಪ್ರಶ್ನೆಗಳಿದ್ದು, ಅದನ್ನು ವೈದ್ಯಕೀಯ ಮೇಲ್ವಿಚಾರಣೆ ಅಡಿ ಅನುಸರಿಸಬೇಕು. ಇದು ದೀರ್ಘಕಾಲದ ಹೊಟ್ಟೆಯ ತೊಂದರೆಗಳು, ದೇಹದ ಸೆಳೆತ, ವಾಕರಿಕೆ, ಸೋಮಾರಿತನ ಮತ್ತು ಆಲಸ್ಯದಂತಹ ಅಡ್ಡಪರಿಣಾಮಗಳನ್ನು ಹೊಂದಿದೆ.
ಮಧ್ಯಂತರವಾಗಿ ಉಪವಾಸ:ಮಧ್ಯಂತರವಾಗಿಉಪವಾಸವನ್ನು ಹಲವಾರು ವಿಧಗಳಲ್ಲಿ ಮಾಡಬಹುದು. ಮೊದಲನೆಯದಾಗಿ, ಒಬ್ಬ ವ್ಯಕ್ತಿಯು ಬೆಳಗ್ಗೆ ಲಘು ಆಹಾರ ತೆಗೆದುಕೊಂಡು, ಮಧ್ಯಾಹ್ನ ತುಂಬಾ ಹಗುರವಾದ ಆಹಾರ ಮತ್ತು ರಾತ್ರಿಯಲ್ಲಿ ಆಹಾರವಿಲ್ಲ. ಎರಡನೆಯದಾಗಿ, ವಾರಕ್ಕೊಮ್ಮೆ ಅಥವಾ ಎರಡು ಬಾರಿ ಘನ ಆಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತಾನೆ. ಲಾಕ್‌ಡೌನ್ ಸಮಯದಲ್ಲಿ ಅನೇಕ ಜನರು ಈ ಆಹಾರ ಪದ್ಧತಿಯನ್ನು ಅನುಸರಿಸಿದ್ದಾರೆ. ಏಕೆಂದರೆ ಇದು ತೂಕ ಇಳಿಸಲು ಸಹಾಯ ಮಾಡುತ್ತದೆ, ಟಾಕ್ಸಿಕ್ ಅಂಶಗಳನ್ನು ತೆಗೆದುಹಾಕುತ್ತದೆ, ಸ್ಮರಣೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯು ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದೆ. ಆದರೆ, ಅನಗತ್ಯ ದೀರ್ಘಕಾಲದ ಉಪವಾಸವು ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿಯ ಕಾರ್ಯಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.
ಮಿಲಿಟರಿ ಡಯಟ್: ಲೋ-ಕ್ಯಾಲೋರಿ ಮಿಲಿಟರಿ ಆಹಾರವೂ ಈ ವರ್ಷ ಸಾಕಷ್ಟು ಜನಪ್ರಿಯವಾಗಿತ್ತು. ಏಕೆಂದರೆ ಇದನ್ನು ವಾರದಲ್ಲಿ 3 ದಿನಗಳು ಮಾತ್ರ ಅನುಸರಿಸಬೇಕು ಮತ್ತು ಉಳಿದ 4 ದಿನಗಳವರೆಗೆ ಸಾಮಾನ್ಯ ಆಹಾರವನ್ನು ಸೇವಿಸಬಹುದು. ಮೊದಲ ಮೂರು ದಿನಗಳವರೆಗೆ ಒಬ್ಬ ವ್ಯಕ್ತಿಯು 1100 -1200 ಕ್ಯಾಲೊರಿಗಳಿಗಿಂತ ಕಡಿಮೆ ಆಹಾರ ಸೇವಿಸಬೇಕು ಮತ್ತು ಮುಂದಿನ ನಾಲ್ಕು ದಿನಗಳವರೆಗೆ 1,800 ಕ್ಯಾಲೊರಿಗಳನ್ನು ಸೇವಿಸಬೇಕಾಗುತ್ತದೆ. ಈ ಆಹಾರವು ಮೂರು ದಿನಗಳಲ್ಲಿ ಸುಮಾರು 2 ಕಿ.ಗ್ರಾಂ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸರ್ಟ್‌ಫುಡ್ ಡಯಟ್:
ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸ್ತುತ ಸನ್ನಿವೇಶದಲ್ಲಿ ಸಿರ್ಟ್‌ಫುಡ್ ಡಯಟ್, ಎಲ್ಲ ಆಹಾರ ಪದ್ಧತಿಗಳಲ್ಲಿ ಅತ್ಯುತ್ತಮವಾದದ್ದು ಎಂದು ಪರಿಗಣಿಸಬಹುದುದಾಗಿದೆ. ಏಕೆಂದರೆ ಇದರಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವ ಆಹಾರ ಸೇವನೆ ಸೇರಿದೆ. ಈ ಆಹಾರವು ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಸರ್ಟ್‌ಫುಡ್ ಆಹಾರವು ಗ್ರೀನ್ ಟೀ, ಅರಿಶಿನ, ಸೇಬು, ಪಾರ್ಸ್ಲಿ, ಸಿಟ್ರಸ್ ಹಣ್ಣುಗಳು, ಬ್ಲೂಬೆರ್ರಿ, ಸೋಯಾ, ಡಾರ್ಕ್ ಚಾಕೊಲೇಟ್, ಬಾಳೆಹಣ್ಣು ಮತ್ತು ಆಲಿವ್ ಎಣ್ಣೆಯನ್ನು ಸೇವಿಸುವುದನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿನ ಸಿರ್ಟುಯಿನ್ ಪ್ರೋಟೀನ್‌ನ ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿರ್ಟುಯಿನ್ ಪ್ರೋಟೀನ್ ನಮ್ಮ ದೇಹವನ್ನು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ಕೋಶಗಳಿಂದ ರಕ್ಷಿಸುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ.
ಕೆಲವು ಇತರ ಆಹಾರ ಪದ್ಧತಿಗಳಲ್ಲಿ ಪ್ಯಾಲಿಯೊ ಡಯಟ್, ಅಟ್ಕಿನ್ಸ್ ಡಯಟ್ ಮತ್ತು ಡ್ಯಾಶ್ ಡಯಟ್ ಸೇರಿದ್ದು, ಇವುಗಳನ್ನೂ ಸಹ ತೂಕ ಇಳಿಸುವ ಮುಖ್ಯ ಗುರಿಯೊಂದಿಗೆ ಅನೇಕ ಜನರು ಅನುಸರಿಸುತ್ತಿದ್ದಾರೆ.
ಪೋಷಣೆ: