ಲಂಡನ್: ಅತಿಯಾಗಿ ಕಂಪ್ಯೂಟರ್ ಅಥವಾ ಇನ್ನಿತರ ಸಾಧನಗಳನ್ನು ಬಳಸುವ ಮಕ್ಕಳಲ್ಲಿ ಕಳಪೆ ತಾರ್ಕಿಕ ಕೌಶಲ್ಯ ಮಟ್ಟ ಇರುತ್ತದೆ. ಇದರಿಂದ ಅವರು ಕಲಿಕೆ ಸೇರಿದಂತೆ, ಶೈಕ್ಷಣಿಕ ಅಭ್ಯಾಸ ಮತ್ತು ಪ್ರತಿನಿತ್ಯದ ಸಮಸ್ಯೆಗಳ ನಿವಾರಣೆ ಮಟ್ಟದ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.
ಈಸ್ಟರ್ನ್ ಫಿನ್ಲ್ಯಾಂಡ್ ಯುನಿವರ್ಸಿಟಿಯ ಈ ಅಧ್ಯಯನ ನಡೆಸಿದ್ದು, ಅಧಿಕವಾದ ಕಂಪ್ಯೂಟರ್ ಮತ್ತು ದೈಹಿಕ ಚಟುವಟಿಕೆ ಇಲ್ಲದೇ ಸಮಯ ವ್ಯರ್ಥ ಮಾಡುವುದು ಕಳಪೆ ತಾರ್ಕಿಕ ಕೌಶಲ್ಯ ಮಟ್ಟದೊಂದಿಗೆ ಸಂಬಂಧವನ್ನು ಹೊಂದಿದೆ. ಉತ್ತಮ ಆಹಾರ ಪದ್ದತಿ ಗುಣಮಟ್ಟ ಸುಧಾರಣೆ ಮತ್ತು ಕೆಂಪು ಮಾಂಸದ ಸೇವನೆ ಕಡಿಮೆ ಮಾಡುವುದು. ಓದುವಿಕೆ ಸಮಯ ಹೆಚ್ಚಳ ಮತ್ತು ಸಂಘಟಿತ ಕ್ರೀಡಾ ಚಟುವಟಿಕೆಗಳು ಮಕ್ಕಳ ಮೊದಲ ಎರಡು ವರ್ಷಗಳ ಶಾಲಾ ಕಲಿಕೆ ಅವಧಿಯಲ್ಲಿ ಅವರ ತಾರ್ಕಿಕ ಕೌಶಲ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂಬುದನ್ನು ಕಂಡು ಕೊಂಡಿದ್ದಾರೆ.
ಸ್ಕ್ರೀನ್ ಟೈಮ್, ಶಾಲಾ ಚಟುವಟಿಕೆ, ದೈಹಿಕ ಚಟುವಟಿಕೆಗಳು ತಾರ್ಕಿಕ ಕೌಶಲ್ಯದೊಂದಿಗೆ ಸಂಬಂಧ ಹೊಂದಿಲ್ಲ. ಉತ್ತಮ ಆಹಾರ ಪದ್ದತಿಯನ್ನು ಹೊಂದಿರುವ ಮಕ್ಕಳಲ್ಲಿ ಅರಿವಿನ ಅಭಿವೃದ್ಧಿ ಬೇರೆ ಮಕ್ಕಳಿಗೆ ಹೋಲಿಕೆ ಮಾಡಿದರೆ, ಉತ್ತಮವಾಗಿದೆ. ವಿಶೇಷವಾಗಿ, ಉತ್ತಮ ಆಹಾರ ಗುಣಮಟ್ಟ, ಕಡಿಮೆ ಕೆಂಪು ಮಾಂಸ ಸೇವನೆ ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳ ಸೇವನೆ ಅವರಲ್ಲಿ ಉತ್ತಮ ತಾರ್ಕಿಕ ಕೌಶಲ್ಯ ಬೆಳೆಸಲು ಸಹಾಯ ಮಾಡುತ್ತದೆ ಎಂದ ಸಂಶೋಧಕರು ತಿಳಿಸಿದ್ದಾರೆ.