ಹೈದರಾಬಾದ್:ಹೋಮಿಯೋಪತಿಯ ಪಿತಾಮಹ ಕ್ರಿಸ್ಚಿಯನ್ ಫ್ರೈಡ್ರಿಚ್ ಸ್ಯಾಮುಯಲ್ ಹನೆಮ್ಯಾನ್. ಈತ ಹೋಮಿಯಪತಿ ಚಿಕಿತ್ಸೆಯನ್ನು ಆತ ಅನ್ವೇಷಣೆ ಮಾಡಿದ. ಇದೇ ಕಾರಣದಿಂದ ಆತನ ಹುಟ್ಟುಹಬ್ಬದ ದಿನವನ್ನು ಹೋಮಿಯೋಪತಿ ದಿನವನ್ನಾಗಿ ಆಚರಿಸಲಾಗಿದೆ.
ಹೋಮಿಯೋಪತಿ ಚಿಕಿತ್ಸೆಗಳು ರೋಗಿಗಳನ್ನು ಪುನರ್ಜಿವನಗೊಳಿಸುತ್ತದೆ. ಇದೇ ಕಾರಣಕ್ಕೆ ಹೋಮಿಯೋಪತಿ ಚಿಕಿತ್ಸೆಯಿಂದ ರೋಗಿಗಳು ಸಾಕಷ್ಟು ಲಾಭ ಪಡೆಯುತ್ತಾರೆ. ಭಾರತದಲ್ಲಿ ಏಪ್ರಿಲ್ 10ರಂದು ಹೋಮಿಯೋಪತಿ ದಿನವನ್ನಾಗಿ ಆಚರಿಸಲಾಗುವುದು. ಹೋಮಿಯೋಪತಿ ಕ್ಷೇತ್ರಕ್ಕೆ ಜರ್ಮನಿ ಮೂಲದ ವೈದ್ಯ ಕ್ರಿಸ್ಟಿಯನ್ ಫ್ರೈಡ್ರಿಚ್ ಸ್ಯಾಮುಯಲ್ ಹನೆಮ್ಯಾನ್ ಪಾತ್ರ ದೊಡ್ಡದು 1755ರಂದು ಬಡ ಕುಟುಂಬದಲ್ಲಿ ಸ್ಯಾಮುಯೆಲ್ ಜನಿಸಿದ್ದರು. ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಸ್ಯಾಮುಯೆಲ್, ಇದರ ಜೊತೆಗೆ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರೈಸಿದರು. ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡುವಾಗ ಅವರು ಕಲ್ಲೆನ್ ಮೆಟೀರಿಯಾ ಮೆಡಿಕಾ ಪುಸ್ತಕ ಅನುವಾದಿಸುವ ಕೆಲಸಕ್ಕೆ ಮುಂದಾದರು. ಈ ವೇಳೆ, ಅವರಿಗೆ ಔಷಧೀಯ ಗುಣಗಳ ಮಾಹಿತಿ ಹೊಂದಿರುವ ಪುಸ್ತಕವನ್ನು ನೀಡಲಾಯಿತು. ಇದನ್ನು ಭಾಷಾಂತರ ಮಾಡುವಾಗ ಅವರ ಸಸ್ಯದ ಕುರಿತ ಮಾಹಿತಿ ಪಡೆದರು.
ತಮ್ಮ ಮೇಲೆಯೇ ಗಿಡಮೂಲಿಕೆಗಳ ಪ್ರಯೋಗ: ಕಲ್ಲೆನ್ ಮಟಿರಿಯಲ್ ಮೆಡಿಕಾ ವನ್ನು ಅನುವಾದಿಸುವ ವೇಳೆ ಅವರು ಪುಸ್ತಕದಿಂದ ಔಷಧ ಸಸ್ಯಗಳ ಮಾಹಿತಿಯನ್ನು ಸಂಗ್ರಹಿಸಿದರು. ಈ ಪುಸ್ತಕದಲ್ಲಿ ಪೆರುವಿಯನ್ ಬರ್ಕ್ ಮರದ ತೊಗಟೆ ಮಲೇರಿಯಾಗೆ ಉತ್ತಮ ಎಂಬುದಾಗಿ ತಿಳಿಸಲಾಗಿತ್ತು. ಅದರ ಅನುಸಾರ ಸ್ಯಾಮುಯೆಲ್ ಆ ಮರದ ತೊಗಟೆಯನ್ನು ಪಡೆದು ಅದರಲ್ಲಿ ಔಷಧವನ್ನು ತಯಾರಿಸಿದರು. ಈ ವೇಳೆ, ಅವರ ನಿಜವಾದ ತೊಂದರೆ ಆರಂಭವಾಯಿತು. ಸ್ಯಾಮುಯೆಲ್ ಹನೆಮ್ಯಾನ್ ಹೊಂದಿದ್ದ ಲಕ್ಷಣಗಳು ಥೇಟ್ ಮಲೇರಿಯಾ ಲಕ್ಷಣವನ್ನು ಹೊಂದಿತು. ಈ ಔಷಧ ಸೇವಿಸುವುದನ್ನು ನಿಲ್ಲಿಸಿದಾಗ ರೋಗದ ಬದಲಾವಣೆಗಳನ್ನು ಕಂಡರು. ತಮ್ಮ ಮೇಲೆ ಪ್ರಯೋಗಿಸಿಕೊಂಡ ಈ ಔಷಧ ಭಾರೀ ಪರಿಣಾಮ ಬೀರಿತು. ಈ ಹಿನ್ನೆಲೆ ಸ್ಯಾಮುಯೆಲ್ ಹನೆಮ್ಯಾನ್ ಇದೇ ರೀತಿಯ ಅನೇಕ ಔಷಧಗಳನ್ನು ಅನ್ವೇಷಣೆ ಮಾಡಿದರು.
ಹೋಮಿಯೋಪತಿ ಔಷಧೀಯ ತತ್ವಶಾಸ್ತ್ರ: ಸ್ಯಾಮುಯೆಲ್ ಹನೆಮ್ಯಾನ್ ಅವಿಷ್ಕರಿಸಿದ ಅನೇಕ ಔಷಧಗಳನ್ನು ಪ್ರಯೋಗಿಸಿ ಇದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ, ಬೇರೆ ಔಷಧಗಳ ಬಳಕೆಗೆ ಮುಂದಾಗುತ್ತಿದ್ದ. ಆಗ ಏನಾದ್ರೂ ವ್ಯತ್ಯಾಸ ಕಂಡು ಬಂದರೆ ಮತ್ತೊಂದು ಮೆಡಿಸಿನ್ ಬಳಕೆ ಮಾಡಿ ಔಷಧ ತಯಾರಿಸುತ್ತಿದ್ದ. ಸ್ಯಾಮುಯೆಲ್ ಹ್ಯಾನೆಮನ್, ರೋಗದ ಲಕ್ಷಣದ ಆಧಾರದ ಮೇಲೆ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದರು. ಆ ಔಷಧ ಗುಣಮುಖಕ್ಕೆ ಕಾರಣವಾಯಿತು. 1796ರಲ್ಲಿ ಈತ ಹೋಮಿಯೋಪತಿ ಚಿಕಿತ್ಸೆ ವಿಧಾನ ಮತ್ತು ತತ್ವಶಾಸ್ತ್ರದ ಸಂಶೋಧನೆ ಬಹಿರಂಗಪಡಿಸಿದ. ಇದೇ ಕಾರಣದಿಂದ ಸ್ಯಾಮುಯೆಲ್ ಹ್ಯಾನೆಮ್ಯಾನ್ ಅನ್ನು ಹೋಮಿಯೋಪತಿಯ ಪಿತಾಮಹ ಎಂದು ಕರೆಯಲಾಗುವುದು. ಆತನ ಕೆಲಸದ ಗೌರವರ್ಥವಾಗಿ, ವಿಶ್ವ ಆರೋಗ್ಯ ಸಂಘಟನೆ, ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ಮೂಲಕ ಹೋಮಿಯೋಪತಿ ಔಷಧಗಳ ಬಳಕೆ ಮತ್ತು ತಿಳಿವಳಿಕೆ ಉತ್ತೇಜಿಸಲಾಯಿತು.
ಇದನ್ನೂ ಓದಿ:ಸಿಹಿ ಸುದ್ದಿ.. ಕ್ಯಾನ್ಸರ್ ಸೇರಿದಂತೆ ಇತರ ಕಾಯಿಲೆಗಳಿಗೆ ರೆಡಿಯಾಗುತ್ತಿದೆ ಲಸಿಕೆ..