ಬಣ್ಣಗಳ ಜೊತೆ ನೆನಪುಗಳನ್ನು ಹೆಣೆಯುವ ಹೋಳಿ ಹಬ್ಬಕ್ಕೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಇಡೀ ದೇಶವೇ ಬಣ್ಣಗಳ ಓಕುಳಿಯಲ್ಲಿ ಮಿಂದೇಳಲು ಸಜ್ಜಾಗುತ್ತಿದೆ. ರಂಗಿನ ಜೊತೆಗೆ ಸಂತೋಷದ ಬಣ್ಣವನ್ನೂ ಎರಚಿ ಆಡುವ ಹಬ್ಬ ಹೋಳಿಯನ್ನು ಈ ವರ್ಷ ಮಾರ್ಚ್ 8 ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಬಣ್ಣಗಳು ಮೈಮೇಲೆ ಚಿತ್ತಾರ ಬಿಡಿಸುವುದರ ಜೊತೆಗೆ ನಮ್ಮ ಮನಸ್ಸಲ್ಲಿ ಅದೆಷ್ಟೋ ನೆನಪುಗಳ ಕಚಗುಳಿಯನ್ನೂ ನೀಡುತ್ತವೆ.
ಹೋಳಿ ಎಂದರೆ ಬಣ್ಣಗಳ ಹಬ್ಬ. ಬಣ್ಣಗಳಿಲ್ಲದೆ ಹೋಳಿ ಇರದು. ದಿನವಿಡೀ ಬಣ್ಣಗಳಲ್ಲೇ ಕಳೆಯುವ ಹಬ್ಬದ ದಿನ, ನಮ್ಮ ಮುಖ, ದೇಹದ ಭಾಗಗಳು ಪೂರ್ತಿಯಾಗಿ ಬಣ್ಣಗಳಿಂದಲೇ ಆವರಿಸಿಬಿಡುತ್ತವೆ. ದಿನವಿಡೀ ಹಬ್ಬದ ಗುಂಗಲ್ಲಿ ಮೈಮರೆತಿರುವ ನಮಗೆ ಸಂಜೆಯಾಗುತ್ತಲೇ ಎಷ್ಟು ಸ್ಕ್ರಬ್ಬಿಂಗ್ ಮಾಡಿದರೂ ಮೈಮೇಲಿಂದ ಕಳಚದ ಬಣ್ಣಗಳನ್ನು ನೋಡಿದಾಗಲೇ ನಮಗೆ ನಮ್ಮ ತ್ವಚೆಯ ಬಗ್ಗೆ ಚಿಂತೆ ಪ್ರಾರಂಭವಾಗುವುದು. ಹೋಳಿ ಆಚರಣೆಯ ನಂತರ ಎಷ್ಟು ತೊಳೆದರೂ ಮೈಗಂಟಿಕೊಂಡಿರುವ ಬಣ್ಣ ಹೋಗುತ್ತಿಲ್ಲ. ಆ ಬಣ್ಣಗಳನ್ನು ತೊಳೆದು ಹಾಕುವವರೆಗೂ ನಮಗೆ ನೆಮ್ಮದಿ ಇರುವುದಿಲ್ಲ.
ನಿಮ್ಮ ಚರ್ಮ, ಉಗುರುಗಳು ಮತ್ತು ಕೂದಲಿಗೆ ಅಂಟಿಕೊಂಡಿರುವ ಹೋಳಿಯ ಬಣ್ಣಗಳನ್ನು ತೊಡೆದು ಹಾಕುವವರೆಗೆ ಮನಸ್ಸಿಗೆ ಶಾಂತಿ ಸಿಗುವುದು ಕಷ್ಟ. ಕೆಲವೊಮ್ಮೆ ಹೋಳಿ ಆಡಿ ಬಂದ ನಂತರ ಜನರು ಈ ಬಣ್ಣಗಳನ್ನು ತೆಗೆದುಹಾಕಲು ಅಥವಾ ಅವುಗಳನ್ನು ತೊಡೆದುಹಾಕಲು ಕಠಿಣ ಪರಿಹಾರಗಳ ಮೊರೆ ಹೋಗುವುದಿಲ್ಲ. ಬದಲಾಗಿ ಗಂಟೆಗಳ ಕಾಲ ಶವರ್ ಅಡಿಯಲ್ಲಿ ಕಾಲ ಕಳೆಯುತ್ತಾರೆ. ಆ ಮೊಂಡುತನದ ಬಣ್ಣಗಳನ್ನು ಸುಲಭವಾಗಿ ತೊಡೆದುಹಾಕಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ:
- ಫೇಸ್ ವಾಶ್ ಬಳಸುವ ಮೊದಲು ನಿಮ್ಮ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ತೈಲ ನಿಮ್ಮ ಚರ್ಮದಲ್ಲಿ ಅಂಟಿಕೊಂಡಿರುವ ಬಣ್ಣ ಸಡಿಲಗೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ, ಎಣ್ಣೆಯಲ್ಲಿ ಉಜ್ಜಿದ ನಂತರ ಫೇಸ್ವಾಶ್ ಬಳಸಿದರೆ ನಿಮ್ಮ ಮುಖವನ್ನು ಹೆಚ್ಚು ಉತ್ತಮವಾಗಿ ಸ್ವಚ್ಛಗೊಳಿಸುತ್ತದೆ.
- ಗೋಧಿ ಹಿಟ್ಟನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಮುಖದ ಮೇಲೆ ಹಚ್ಚಿ ಮಸಾಜ್ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಅದನ್ನು ಬಿಟ್ಟು ಯಾವುದಾದರೂ ಕ್ಲೆನ್ಸರ್ನಿಂದ ನಿಮ್ಮ ಮುಖವನ್ನು ತೊಳೆದರೆ, ಮುಖ ಸಂಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ.
- ಹೋಳಿ ಬಣ್ಣಗಳು ನಿಮ್ಮ ಉಗುರುಗಳನ್ನು ಒಣಗುವಂತೆ ಮಾಡಬಹುದು, ಆದ್ದರಿಂದ ನಿಮ್ಮ ಉಗುರುಗಳನ್ನು ತಣ್ಣನೆಯ ನೀರಿನಲ್ಲಿ ನೆನೆಸಿ.
- ಹೋಳಿ ಆಡಿದ ನಂತರ, ಉಗುರು ಬಣ್ಣವು ಹಳದಿ ಬಣ್ಣಕ್ಕೆ ಬದಲಾಗುತ್ತದೆ. ನಿಮ್ಮ ಉಗುರುಗಳನ್ನು ಅವುಗಳ ಸಹಜ ಸ್ಥಿತಿಗೆ ತರಲು ನಿಂಬೆ ರಸದಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ.
- ಸ್ಪಷ್ಟವಾದ ನೈಲ್ ಪಾಲಿಶ್‌ನ ಕೋಟ್ ಅಪ್ಲೈ ಮಾಡಿ ಮತ್ತು ನಿಮ್ಮ ಉಗುರುಗಳನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ, ನಂತರ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ, ನಿಧಾನವಾಗಿ ನಿಮ್ಮ ಉಗುರುಗಳಿಂದ ಉಗುರು ಬಣ್ಣದ ಜೊತೆಗೆ ಬಣ್ಣವನ್ನು ತೆಗೆದುಹಾಕಿ.
- ಹೋಳಿ ಆಡಲು ಹೋಗುವ ಮೊದಲು ಗಾಢವಾದ ನೈಲ್ ಪಾಲಿಷ್ ಅನ್ನು ಲೇಪಿಸಿ. ಗಾಢವಾದ ನೈಲ್ ಪಾಲಿಶ್ ನಿಮ್ಮ ಉಗುರುಗಳಿಗೆ ಬಣ್ಣ ಅಂಟಿಕೊಳ್ಳದಂತೆ ತಡೆಯುತ್ತದೆ.
ಇದನ್ನೂ ಓದಿ:ಬೇಸಿಗೆಯಲ್ಲಿ ಕಾಡುವ ಒಣ ತುಟಿ ಸಮಸ್ಯೆ; ಇಲ್ಲಿದೆ ಪರಿಹಾರ