ಜೀವಿಸುವುದು ಸುಲಭ ಎಂದುಕೊಂಡರೆ ಸುಲಭ, ಕಠಿಣ ಎಂದುಕೊಂಡರೆ ಕಠಿಣ. 2022ರ ಹೊಸ ವರ್ಷ ಮುಗಿದು ಒಂದು ತಿಂಗಳಾಗಿದೆ. ಹೊಸ ವರ್ಷಕ್ಕೆ ನಿರ್ಣಯಗಳನ್ನು ತೆಗೆದುಕೊಳ್ಳುವವರ ಪೈಕಿ ಶೇಕಡಾ 80ರಷ್ಟು ಮಂದಿ ತಮ್ಮ ನಿರ್ಣಯಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ನಿಮ್ಮ ನಿರ್ಣಯಗಳು ದಿನದಿಂದ ದಿನಕ್ಕೆ ಕುಗ್ಗಲು ಕಾರಣಗಳಿರುತ್ತದೆ. ಒಂದು ವೇಳೆ ನೀವು ಫಿಟ್ನೆಸ್ ಕಾಪಾಡಿಕೊಳ್ಳುವ ವಿಚಾರದಲ್ಲಿ ನಿರ್ಣಯವನ್ನು ಹೊಂದಿದ್ದರೆ, ಕೆಲವೊಂದು ಬಾರಿ ನಿರಾಶೆಯಾಗುವ ಸಾಧ್ಯತೆ ಇರುತ್ತದೆ.
ಅದರಲ್ಲಿ ನೀವು ಆರಿಸಿಕೊಂಡಿರುವುದು ತಪ್ಪು ಗುರಿಯಾದ ಕಾರಣ ಕೆಲವೇ ದಿನಗಳಲ್ಲಿ ನಿಮ್ಮ ನಿರ್ಣಯ ಕುಗ್ಗುತ್ತದೆ. ನೀವು ಯಾವ ಗುರಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದು ನಿಮ್ಮ ಹೊಸ ವರ್ಷದ ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಸುಳ್ಳಲ್ಲ. ಆದ್ದರಿಂದ ನಿಮ್ಮ ಗುರಿಯನ್ನು ಸಾಧಿಸಬೇಕಾದರೆ, ನೀವು ಅತ್ಯಂತ ಪ್ರಮುಖವಾಗಿ ಮೂರು ಸಲಹೆಗಳನ್ನು ಪಾಲಿಸಬೇಕಾಗುತ್ತದೆ.
ಸಣ್ಣ ಪ್ರಯತ್ನಗಳನ್ನು ಆರಿಸಿಕೊಳ್ಳಿ:ಆರೋಗ್ಯಕರ ಜೀವನಕ್ಕೆ ಸಂತೋಷದಿಂದಿರಿರುವುದು, ಕೆಲಸ ಮಾಡುವುದು ಅತ್ಯಂತ ಮುಖ್ಯ ಎಂದು ಹೇಳಲಾಗುತ್ತಿದೆ. ಆದ್ದರಿಂದ ನಮ್ಮ ನಮ್ಮ ಗುರಿಗಳನ್ನು ತಲುಪಲು ನಾವು ಸಾಕಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತೇವೆ. ಆದರೆ, ದುರದೃಷ್ಟವಶಾತ್, ನಮ್ಮ ಮೆದುಳು ನಾವು ಶ್ರಮ ಹಾಕುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿರುತ್ತದೆ.
ಆದ್ದರಿಂದ ಜನವರಿಯಲ್ಲಿ ತೆಗೆದುಕೊಂಡ ನಿರ್ಣಯಗಳು ಮೆದುಳು ಅಥವಾ ಮನಸ್ಸಿನ ಪ್ರಭಾವಕ್ಕೆ ಒಳಗಾಗಿ ಫೆಬ್ರವರಿಯಲ್ಲಿ ಕ್ಷೀಣಿಸುತ್ತವೆ. ಯಾವುದೇ ಬದಲಾವಣೆಯನ್ನು ಮನಸ್ಸು ಗ್ರಹಿಸುವ ಕಾರಣದಿಂದಾಗಿ ನಾವು ಇಡುವ ಪ್ರತಿ ಹೆಜ್ಜೆಯಲ್ಲೂ ಅದರ ಪ್ರಭಾವ ಇದ್ದೇ ಇರುತ್ತದೆ. ಆದ್ದರಿಂದ ಕಡಿಮೆ ಪ್ರಯತ್ನವಿರುವ ನಿರ್ಣಯಗಳನ್ನು ನೀವು ಮೊದಲಿಗೆ ಆಯ್ಕೆ ಮಾಡಿಕೊಳ್ಳಬೇಕು.
ಉದಾಹರಣೆಗೆ.. ನೀವು 15 ನಿಮಿಷಗಳ ಓಡಬೇಕೆಂದು ಅಂದುಕೊಂಡು, ಓಡಲು ಸಾಧ್ಯವಾಗದಿದ್ದರೆ ಕೇವಲ 5 ನಿಮಿಷ ಓಡಿ.. ಅಥವಾ ಓಡುವುದೇ ಬೇಡ ಎಂದುಕೊಂಡರೆ,ಬೇರೊಂದು ಕಸರತ್ತನ್ನು ನೀವು ಮಾಡಬಹುದು. ಒಟ್ಟಿನಲ್ಲಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿಯಾಗುವ ಯಾವುದಾದರೊಂದು ಚಟುವಟಿಕೆಯಲ್ಲಿ ನೀವು ನಿರತರಾಗಿರಬೇಕಷ್ಟೇ.
ಹೊಸ ಸಂಶೋಧನೆಯೊಂದರ ಪ್ರಕಾರ ಕಡಿಮೆ ಪ್ರಯತ್ನಗಳಿರುವ ಚಟುವಟಿಕೆಗಳು ಏನಾದರೊಂದನ್ನು ಸಾಧಿಸಲು ಸಹಕಾರಿಯಾಗುತ್ತವೆ. ಇದೇ ತತ್ವವನ್ನು ಮನಸ್ಸಿಗೆ ಅನ್ವಯ ಮಾಡಲಾಗುತ್ತದೆ. ಕಡಿಮೆ ಪ್ರಯತ್ನಗಳಿರುವ ನಿರ್ಣಯ ಕೊನೆಯವರೆಗೆ ಉಳಿದು ಏನಾದರೊಂದನ್ನು ಸಾಧಿಸಲು ಸಾಧ್ಯವಾಗುತ್ತದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ