ಕರ್ನಾಟಕ

karnataka

ETV Bharat / sukhibhava

ಇನ್ಸುಲಿನ್ ಆವಿಷ್ಕಾರದ ಶತಮಾನೋತ್ಸವ - ಐಸಿಎಂಆರ್ - ಇಂಡಿಯಾಬ್ ಅಧ್ಯಯನ

ಐಸಿಎಂಆರ್ ಇಂದು "ಇನ್ಸುಲಿನ್ ಸೆಂಟೆನರಿ ಸಿಂಪೋಸಿಯಮ್" ಅನ್ನು ಆಯೋಜಿಸಿದ್ದು, ಐಸಿಎಂಆರ್ - ಇಂಡಿಯಾಬ್ ಅಧ್ಯಯನದ ಡೇಟಾವನ್ನು ವಿಚಾರ ಸಂಕಿರಣದ ಸಮಯದಲ್ಲಿ ಪ್ರಸ್ತುತಪಡಿಸಲಾಯಿತು.

insulin
insulin

By

Published : Jul 27, 2021, 8:33 PM IST

ಹೈದರಾಬಾದ್: ಇನ್ಸುಲಿನ್ ಆವಿಷ್ಕಾರವಾಗಿ 100ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಐಸಿಎಂಆರ್ ಇಂದು "ಇನ್ಸುಲಿನ್ ಸೆಂಟೆನರಿ ಸಿಂಪೋಸಿಯಮ್" ಅನ್ನು ಆಯೋಜಿಸಿತು. ಐಸಿಎಂಆರ್ - ಇಂಡಿಯಾಬ್ ಅಧ್ಯಯನದ ಡೇಟಾವನ್ನು ವಿಚಾರ ಸಂಕಿರಣದ ಸಮಯದಲ್ಲಿ ಪ್ರಸ್ತುತಪಡಿಸಲಾಯಿತು.

ಐಸಿಎಂಆರ್ - ಇಂಡಿಯಾಬ್ ಅಧ್ಯಯನದ ಸಾರಾಂಶ

ಐಸಿಎಂಆರ್ - ಇಂಡಿಯಾಬ್ ಅಧ್ಯಯನ: 28 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೆಶಗಳು, ಒಟ್ಟು 1,13,043 ಮಾದರಿಗಳು

ಭಾರತದಲ್ಲಿರುವ ಮಧುಮೇಹಿಗಳ ಪ್ರಮಾಣ: 13.3% (ನಗರ) ಮತ್ತು 7.8% (ಗ್ರಾಮೀಣ)

ಅತಿ ಹೆಚ್ಚು ಮಧುಮೇಹಿಗಳಿರುವ ಮೂರು ರಾಜ್ಯಗಳು: ಕೇರಳ (23.5%), ಗೋವಾ (23.3%), ಪುದುಚೇರಿ (20.3%)

ಕಡಿಮೆ ಮಧುಮೇಹಿಗಳಿರುವ ಮೂರು ರಾಜ್ಯಗಳು: ಉತ್ತರ ಪ್ರದೇಶ (4.2%), ಬಿಹಾರ (4.3%), ಮೇಘಾಲಯ (4.5%)

ಭಾರತದಲ್ಲಿ ಪ್ರಿಡಯಾಬಿಟಿಸ್ ಹರಡುವಿಕೆ: 14.3% (ನಗರ) ಮತ್ತು 14.4% (ಗ್ರಾಮೀಣ)

ಅತಿ ಹೆಚ್ಚು ಪ್ರಿಡಿಯಾಬಿಟಿಸ್‌ನ ಇರುವ ಮೂರು ರಾಜ್ಯಗಳು: ಸಿಕ್ಕಿಂ (31.8%), ಪುದುಚೇರಿ (24.1%), ಪಶ್ಚಿಮ ಬಂಗಾಳ (23.1%)

ಕಡಿಮೆ ಪ್ರಿಡಿಯಾಬಿಟಿಸ್‌ನ ಇರುವ ಮೂರು ರಾಜ್ಯಗಳು: ಮಿಜೋರಾಂ (6%), ಮಣಿಪುರ (7.5%), ಜಾರ್ಖಂಡ್ (8.1%)

ಭಾರತದಲ್ಲಿ ಸ್ಥೂಲಕಾಯತೆಯತೆ: 37% (ನಗರ), 22.8% (ಗ್ರಾಮೀಣ)

ಗರಿಷ್ಠ ಸ್ಥೂಲಕಾಯತೆ ಪ್ರಕರಣಗಳಿರುವ ಮೂರು ರಾಜ್ಯಗಳು: ಪುದುಚೇರಿ (45.9%), ಕೇರಳ (43.6%), ದೆಹಲಿ (41.8%)

ಕನಿಷ್ಠ ಸ್ಥೂಲಕಾಯತೆ ಪ್ರಕರಣಗಳಿರುವ ಮೂರು ರಾಜ್ಯಗಳು: ಜಾರ್ಖಂಡ್ (11.7%), ಮೇಘಲ್ಯ (13.9%), ಬಿಹಾರ (14.5%)

ಭಾರತದಲ್ಲಿ ಅಧಿಕ ರಕ್ತದೊತ್ತಡದ ಪ್ರಮಾಣ: 35% (ನಗರ), 30.1% (ಗ್ರಾಮೀಣ)

ಅತಿ ಹೆಚ್ಚು ಅಧಿಕ ರಕ್ತದೊತ್ತಡ ಇರುವ ಮೂರು ರಾಜ್ಯಗಳು: ಸಿಕ್ಕಿಂ (44.4%), ಪಂಜಾಬ್ (44.3%), ಕೇರಳ (44.2%)

ಕನಿಷ್ಠ ಅಧಿಕ ರಕ್ತದೊತ್ತಡ ಇರುವ ಮೂರು ರಾಜ್ಯಗಳು: ಮೇಘಾಲಯ (23.4%), ಮಧ್ಯಪ್ರದೇಶ (23.7%), ಮಿಜೋರಾಂ (25%)

ಭಾರತದಲ್ಲಿ ಹೈಪರ್ಕೊಲೆಸ್ಟರಾಲ್ಮಿಯಾ: 25.2% (ನಗರ), 20.7% (ಗ್ರಾಮೀಣ)

ಹೈಪರ್ಕೊಲೆಸ್ಟರಾಲ್ಮಿಯಾದ ಅತಿ ಹೆಚ್ಚು ಪ್ರಕರಣಗಳಿರುವ ರಾಜ್ಯಗಳು: ಕೇರಳ (49.9%), ಗೋವಾ (47.7%), ಹಿಮಾಚಲ ಪ್ರದೇಶ (37%)

ಹೈಪರ್‌ಕೊಲೆಸ್ಟರಾಲ್ಮಿಯಾದ ಕಡಿಮೆ ಪ್ರಕರಣಗಳಿರುವ ರಾಜ್ಯಗಳು: ಜಾರ್ಖಂಡ್ (4.9%), ಅಸ್ಸಾಂ (6.9%), ಅರುಣಾಚಲ ಪ್ರದೇಶ (9.5%), ಮೇಘಾಲಯ (9.5%)

ABOUT THE AUTHOR

...view details