ನವದೆಹಲಿ:ನಮ್ಮ ಡಯಟ್ನಲ್ಲಿ ಪೋಷಕಾಂಶಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಆರೋಗ್ಯಯುತ ಜೀವನಶೈಲಿ ಜೊತೆ ಪೋಷಕಯುಕ್ತ ಆಹಾರ ಸೇವನೆ ನಿರ್ವಹಣೆ ಸವಾಲಿನಿಂದ ಕೂಡಿರಲಿದೆ. ಪ್ರತಿಯೊಬ್ಬರೂ ಆರೋಗ್ಯಯುತ ಆಹಾರ ಸೇವನೆ ಜೊತೆ ಫಿಟ್ ಆಗಿರಬೇಕು. ಆದರೆ, ಎಲ್ಲಿಂದ ಆರಂಭಿಸುವುದು? ಅನಾರೋಗ್ಯದಿಂದ ಆರೋಗ್ಯವನ್ನು ಆರಿಸಿಕೊಳ್ಳುವುದು ಹೇಗೆ? ಎಂಬೆಲ್ಲ ಪ್ರಶ್ನೆಗಳು ಬರುತ್ತದೆ. ಸೆಲೆಬ್ರಿಟಿ ನ್ಯೂಟ್ರಿಷಿಯನ್ ಮತ್ತು ಕ್ಯೂಯುಎ ನ್ಯೂಟ್ರಿಷಿಯನ್ ಸಂಸ್ಥಾಪಕರಾದ ರಯನ್ ಫೆಮನ್ಡೊ ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಡಯಟ್ನಲ್ಲಿರಲಿ ಒಮೆಗಾ 3:ಒಮೆಗಾ 3 ಅತ್ಯಂತ ಅವಶ್ಯಕ ಪೋಷಕಾಂಶವಾಗಿದೆ. ಇದು ಉತ್ತಮ ಫ್ಯಾಟ್ ಮೂಲ ಇದಾಗಿದ್ದು, ಇದನ್ನು ಆಹಾರದ ಮೂಲಕ ಪಡೆಯಬಹುದಾಗಿದೆ. ಇದು ಹೃದಯ ಕಾಯಿಲೆಯ ತಡೆಗಟ್ಟುತ್ತದೆ. ಜೊತೆಗೆ ಆರೋಗ್ಯಯುತ ಪ್ರತಿರೋಧಕ ವ್ಯವಸ್ಥೆ ಬೆಂಬಲಿಸಲು ಸಹಾಯಕವಾಗಿದೆ, ಮಿದುಳಿನ ಆರೋಗ್ಯಕ್ಕೆ ಇದು ಅತ್ಯಂತ ಅವಶ್ಯವೂ ಆಗಿದೆ.
ಪ್ರೋಟಿನ್ ಭರಿತ ಆಹಾರ -ಒಮೆಗಾ 3 ಜೊತೆಯಲ್ಲಿ ಡಯಟ್ನಲ್ಲಿ ಪ್ರೋಟಿನ್ ಕಾಪಾಡುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ. ದೇಹದಲ್ಲಿರುವ ಮ್ಯಾಕ್ರೋನ್ಯೂಟ್ರಿಯೆಂಟ್ ಆರೋಗ್ಯಯುತವಾಗಿರಬೇಕಿದೆ. ಈ ಪೋಷಕಾಂಶದಿಂದ ಅನಾವಶ್ಯಕ ಬಾಯಿ ಚಟಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಆರೋಗ್ಯಯುತ ತೂಕ ನಿರ್ವಹಣೆಗೆ ಸಹಾಯ ಮಾಡಿದಂತಾಗುತ್ತದೆ. ಈ ಪೋಷಕಾಂಶಗಳು ಟಿಶ್ಯೂ ನಿರ್ಮಾಣ ಮಾಡಿ ರಿಪೇರಿ ಮಾಡುತ್ತದೆ. ಮೊಟ್ಟೆ, ಚಿಕನ್ ಡೈರಿ ಉತ್ಪನ್ನ ಮತ್ತು ವಾಲ್ನಟ್ ಸೇರಿದಂತೆ ಹಲವುಗಳಲ್ಲಿ ಪ್ರೋಟಿನ್ ಸಿಗುತ್ತದೆ.