ಕರ್ನಾಟಕ

karnataka

ETV Bharat / sukhibhava

ಬೇಸಿಗೆಯ ದಾಹ ತಣಿಸಲು ಯಾವ ಪಾನೀಯ ಉತ್ತಮ? ಇವುಗಳ ರುಚಿ ನೋಡಿ.. - ಲಸ್ಸಿ ಮತ್ತು ಮಜ್ಜಿಗೆ

ಬೇಸಿಗೆಯಲ್ಲಿ ತಾಜಾ ಪೌಷ್ಟಿಕ ಮತ್ತು ನೈಸರ್ಗಿಕ ಪಾನೀಯಗಳ ಸೇವನೆ ಆರೋಗ್ಯಕ್ಕೂ ಒಳ್ಳೆಯದು.

ಬೇಸಿಗೆ ದಿನಗಳಲ್ಲಿ ದೇಹಕ್ಕೆ ಯಾವ ಪಾನೀಯಗಳು ಉತ್ತಮ
ಬೇಸಿಗೆ ದಿನಗಳಲ್ಲಿ ದೇಹಕ್ಕೆ ಯಾವ ಪಾನೀಯಗಳು ಉತ್ತಮ

By

Published : Apr 13, 2022, 5:44 PM IST

ಬೇಸಿಗೆ ದಿನಗಳು ಆರಂಭವಾಗಿವೆ. ಎಲ್ಲೆಲ್ಲೂ ಮೈ ಸುಡುವ ಸೂರ್ಯನ ಶಾಖವಿದೆ. ಇಂತಹ ಹೊತ್ತಲ್ಲಿ ತಂಪು ಪಾನೀಯಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ?.

ಆದರೆ, ಶಾಖದಿಂದ ತಕ್ಷಣವೇ ನೆಮ್ಮದಿ ಒದಗಿಸುವ ಮತ್ತು ನಮ್ಮ ಬಾಯಾರಿಕೆ ನೀಗಿಸುವ ಹೆಚ್ಚಿನ ತಂಪು ಪಾನೀಯಗಳು ಅಧಿಕ ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಜತೆಗೆ ಅವು ನಮಗೆ ರುಚಿ ನೀಡಿದರೂ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಆದ್ದರಿಂದ, ತಾಪಮಾನ ಎಷ್ಟೇ ಹೆಚ್ಚಿದ್ದರೂ ಕೂಡ ವೈದ್ಯರು ಇಂತಹ ತಂಪು ಪಾನೀಯಗಳಿಂದ ದೂರವಿರಲು ಸಲಹೆ ನೀಡುತ್ತಾರೆ.

ಬೇಸಿಗೆ ಸಮಯದಲ್ಲಿ ಯಾವ ಪಾನೀಯಗಳನ್ನು ಸೇವಿಸಬೇಕು ಮತ್ತು ಬೇಡ ಎಂಬುವುದನ್ನು ಮುಂಬೈ ಮೂಲದ ಆಹಾರ ತಜ್ಞ ಮತ್ತು ಪೌಷ್ಟಿಕ ಆಹಾರ ತಜ್ಞ ರಶೆಲ್ ಜಾರ್ಜ್ ಅವರು ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಸಕ್ಕರೆ ಅಂಶ, ಕೃತಕ ಬಣ್ಣಗಳು, ಸುವಾಸನೆ ಮತ್ತು ಇತರ ಪದಾರ್ಥಗಳನ್ನು ಹೊಂದಿರುವ ಪಾನೀಯಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇಂತಹ ಪಾನೀಯಗಳು ನಮ್ಮ ಮೂಳೆಗಳು, ಜೀರ್ಣಕ್ರಿಯೆ, ಯಕೃತ್ತು ಮತ್ತು ಹೃದಯಕ್ಕೆ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎನ್ನುತ್ತಾರೆ ಅವರು.

ಹೀಗಾಗಿ, ತಾಜಾ ಮತ್ತು ನೈಸರ್ಗಿಕ ಪಾನೀಯಗಳನ್ನು ಸೇವಿಸುವುದೊಳಿತು. ಪೌಷ್ಟಿಕ ಮತ್ತು ನೈಸರ್ಗಿಕ ಪಾನೀಯಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡುವ ಹಾಗೂ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ಒದಗಿಸುವ ಕೆಲವು ಪಾನೀಯಗಳನ್ನು ಸೇವಿಸುವಂತೆ ರಶೆಲ್ ಸಲಹೆ ನೀಡುತ್ತಾರೆ.

  • ತಾಜಾ ಹಣ್ಣಿನ ರಸ:ತಾಜಾ ಹಣ್ಣಿನ ರಸಗಳು ಯಾವುದೇ ಸೀಸನ್ ಆಗಿರಲಿ, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಶೇಷವಾಗಿ ಋತುಮಾನದ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಮತ್ತು ಶೇಕ್‌ಗಳು ಹೆಚ್ಚು ಪೋಷಣೆಯನ್ನು ಮನುಷ್ಯನಿಗೆ ನೀಡುತ್ತವೆ. ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಜ್ಯೂಸ್, ಬಿಲ್ವ ಪತ್ರೆ ಅಥವಾ ಬೆಲ್ ಶರಬತ್, ನಿಂಬೆ ರಸ ಮತ್ತು ಇತರ ಪಾನೀಯಗಳು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಇವು ದೇಹದ ರೋಗನಿರೋಧಕ ಶಕ್ತಿ ಮತ್ತು ಮೆಟಾಬಾಲಿಸಮ್ ಅಥವಾ ಚಯಾಪಚಯ ಹೆಚ್ಚಿಸುತ್ತವೆ. ಮೇಲಾಗಿ ಬೇಸಿಗೆಯಲ್ಲಿ ಹೀಟ್‌ಸ್ಟ್ರೋಕ್‌ನಂತಹ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.
  • ಲಸ್ಸಿ ಮತ್ತು ಮಜ್ಜಿಗೆ:ಮಜ್ಜಿಗೆ ಮತ್ತು ಸಿಹಿ ಲಸ್ಸಿ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಈ ಎರಡನ್ನೂ ಮೊಸರಿನಿಂದ ತಯಾರಿಸಲಾಗುತ್ತದೆ. ಆದ್ದರಿಂದ ಜೈವಿಕ ಅಂಶಗಳನ್ನು ಹೊಂದಿರುತ್ತವೆ. ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ವಿಟಮಿನ್-ಎ, ಸಿ, ಇ ಹಾಗೂ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಮಜ್ಜಿಗೆ ಹಾಗೂ ಲಸ್ಸಿಯಿಂದ ಸಿಗುತ್ತವೆ.
  • ಎಳನೀರು:ಎಳನೀರು ದೇಹಕ್ಕೆ ಅತ್ಯುತ್ತಮ. ಎಲ್ಲ ಋತುಗಳಿಗೂ ಸೂಕ್ತವಾದ ಪಾನೀಯ ಎಳುನೀರು. ಇದರಿಂದ ಅನೇಕ ಆರೋಗ್ಯಕರು ಪ್ರಯೋಜನಗಳು ಮನುಷ್ಯನಿಗೆ ಇವೆ. ಮೆಗ್ನೀಸಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ 'ಸಿ' ಯಂತಹ ಪೋಷಕಾಂಶಗಳು ಹೇರಳವಾಗಿವೆ. ಇದು ದೇಹವನ್ನು ತಂಪಾಗಿಸಲು ಮಾತ್ರವಲ್ಲದೆ ಜೀರ್ಣಾಂಗವನ್ನು ಉತ್ತಮ ರೀತಿಯಲ್ಲಿ ಇಡುತ್ತದೆ. ಪ್ರಮುಖವಾಗಿ ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಕಾರಣ ತೂಕ ಕಡಿಮೆ ಮಾಡಿಕೊಳ್ಳಲೂ ಪ್ರಯೋಜನಕಾರಿಯಾಗಿದೆ.
  • ಗಿಡಮೂಲಿಕೆ ಶರಬತ್:ಅನೇಕ ಗಿಡಮೂಲಿಕೆಗಳ ಶರಬತ್​ಗಳು ಇವೆ. ಬೇಸಿಗೆಯಲ್ಲಿ ಗುಲಾಬಿ, ಖುಸ್, ಶ್ರೀಗಂಧ ಸೇರಿ ಇತ್ಯಾದಿ ಗಿಡಮೂಲಿಕೆಗಳಿಂದ ತಯಾರಿಸಿದ ಶರಬತ್​ಗಳು​ ಮಾರುಕಟ್ಟೆಯಲ್ಲಿ ಲಭ್ಯ ಇರುತ್ತವೆ. ಇದರ ಪಾನೀಯಗಳು ದೇಹವನ್ನು ತಂಪಾಗಿಸುವುದಲ್ಲದೆ ಶಕ್ತಿಯನ್ನೂ ನೀಡುತ್ತವೆ. ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುತ್ತವೆ. ಆದರೆ, ಗಿಡಮೂಲಿಕೆಗಳ ಪಾನೀಯಗಳನ್ನು ಖರೀದಿಸುವ ಮುನ್ನ ಅವುಗಳಲ್ಲಿನ ಸಕ್ಕರೆ ಅಂಶದ ಲೇಬಲ್ ಪರಿಶೀಲಿಸುವುದು ಒಳ್ಳೆಯದು.
  • ನಿಂಬು ಪಾನಕ:ಬೇಸಿಗೆಯಲ್ಲಿ ಪ್ರತಿದಿನ ಕನಿಷ್ಠ ಒಂದು ಗ್ಲಾಸ್​ ನಿಂಬೆ ಪಾನಕ ಅಥವಾ ಶರಬತ್ ಸೇವಿಸುವುದರಿಂದ ದೇಹದಲ್ಲಿ ಹೈಡ್ರೇಟ್ ಸಿಗುತ್ತದೆ. ದೇಹದಲ್ಲಿನ ಮೇಲಿನ ಶಾಖದ ಪರಿಣಾಮವನ್ನು ಇದು ಕಡಿಮೆ ಮಾಡುತ್ತದೆ. ಇದಲ್ಲದೆ, ನಿಂಬೆ ಪಾನಕವು ಬಿಸಿಗಾಳಿಯಂತಹ ಸಮಸ್ಯೆದಿಂದ ನೆಮ್ಮದಿ ನೀಡುತ್ತದೆ. ವಿಟಮಿನ್ ಸಿ, ಪೊಟ್ಯಾಸಿಯಂ ಮತ್ತು ಇತರ ಖನಿಜಗಳು ನಿಂಬೆ ಪಾನಕದಿಂದ ಸಿಗುತ್ತದೆ. ಇದು ದೇಹದ ಮೆಟಾಬಾಲಿಸಮ್ ಮತ್ತು ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ಆದಾಗ್ಯೂ, ಇದನ್ನು ಒಂದು ಮಿತಿಯಲ್ಲಿ ಮಾತ್ರ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡಬೇಕು.
  • ಗ್ರೀನ್ ಚಹಾ:ಗ್ರೀನ್ ಟೀ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದನ್ನು ಹೆಚ್ಚು ಸೇವಿಸಬಾರದು ಎಂದು ವೈದ್ಯರು ಹೇಳಿದ್ದರೂ ಸೀಮಿತ ಪ್ರಮಾಣದಲ್ಲಿ ಸೇವನೆಯಿಂದ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ರೋಗ ನಿರೋಧಕ ಅಂಶಗಳನ್ನೂ ಒಳಗೊಂಡಿದೆ, ಆದ್ದರಿಂದ ಸೋಂಕುಗಳು, ರೋಗಗಳು ಮತ್ತು ಇತರ ಸೋಂಕುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಹಸಿ ಮಾವಿನ ಹಣ್ಣಿನ ಪನ್ನಾ (ಆಮ್ ಪನ್ನಾ):ಆಮ್ ಪನ್ನಾವು ನಮ್ಮ ದೇಶದಲ್ಲಿ ಅತ್ಯಂತ ಪ್ರಸಿದ್ಧವಾದ ಬೇಸಿಗೆ ಪಾನೀಯವಾಗಿದೆ. ಹಸಿ ಮಾವಿನ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ, ಇದೇ ರೀತಿಯ ಪಾನೀಯವನ್ನು ಅನಾನಸ್‌ನಿಂದ ಕೂಡ ತಯಾರಿಸಲಾಗುತ್ತದೆ. ಮಾವು ಅಥವಾ ಅನಾನಸ್‌ನ ಅಂಶಗಳು ಹೊರತಾಗಿ, ಇದು ಕಪ್ಪು ಉಪ್ಪು, ಕರಿಮೆಣಸು, ಜೀರಿಗೆ ಪುಡಿ, ಇಂಗು ಮತ್ತು ಪುದೀನ ಸಾರಗಳಂತಹ ಮಸಾಲೆಗಳನ್ನು ಒಳಗೊಂಡಿರುತ್ತದೆ. ಇದು ಪಾನೀಯಕ್ಕೆ ಅದರ ಔಷಧೀಯ ಗುಣಗಳನ್ನು ನೀಡುತ್ತದೆ. ಶಾಖ ಮತ್ತು ಬಿಸಿಗಾಳಿ ಪರಿಣಾಮಗಳನ್ನು ತಡೆಗಟ್ಟುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಕರುಳಿನ ಆರೋಗ್ಯಕ್ಕೂ ಒಳ್ಳೆಯದು.
  • ಥಂಡೈ:ಬೇಸಿಗೆ ಕಾಲದಲ್ಲಿ ಥಂಡೈ ಸೇವನೆಯು ದೇಹವನ್ನು ನೈಸರ್ಗಿಕವಾಗಿ ತಂಪಾಗಿಡಲು ಸಹಾಯ ಮಾಡುತ್ತದೆ. ಒಣ ಹಣ್ಣುಗಳು ಮತ್ತು ಕರಿಮೆಣಸು, ಏಲಕ್ಕಿ ಮತ್ತು ಕೇಸರಿ ಮುಂತಾದ ಪದಾರ್ಥಗಳನ್ನು ಒಳಗೊಂಡಿರುವುದರಿಂದ ಇದನ್ನು ಆರೋಗ್ಯಕರ ಪಾನೀಯವೆಂದೇ ಪರಿಗಣಿಸಲಾಗುತ್ತದೆ. ದೇಹದ ಪೋಷಣೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಸಟ್ಟು:ಸಟ್ಟು ಸಹ ಬೇಸಿಗೆಯಲ್ಲಿ ಆರೋಗಕ್ಕೆ ಒಳ್ಳೆಯದು. ಹುರಿ ಕಡಲೆ ಮತ್ತು ಧಾನ್ಯಗಳಿಂದ ಮಾಡಿದ ಪುಡಿಯಾಗಿದ್ದು, ಇದು ದೇಹವನ್ನು ತಂಪಾಗಿಸುತ್ತದೆ. ಪ್ರೋಟೀನ್, ಫೈಬರ್, ಸೋಡಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳನ್ನು ಸಟ್ಟು ಒಳಗೊಂಡಿರುತ್ತದೆ. ಇದನ್ನು ಸುಲಭವಾಗಿ ನೀರಿಗೆ ಸೇರಿಸಿ ಸೇವಿಸಬಹುದು. ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.

ಇದನ್ನೂ ಓದಿ:ಬೇಸಿಗೆ ಬಂತು: ಬೆವರುಸಾಲೆ ನಿರ್ಮೂಲನೆಗೆ ಮನೆ ಮದ್ದು ಏನು?

ABOUT THE AUTHOR

...view details