ಚಳಿಗಾಲದಲ್ಲಿ ಮಾಡಿಟ್ಟ ಪದಾರ್ಥಗಳು ಅರ್ಧಗಂಟೆಗೆಲ್ಲ ತಣ್ಣಗಾಗುತ್ತೆ. ಇಲ್ಲ ಅನೇಕ ಬಾರಿ ಊಟದ ಸಮಯಕ್ಕೆ ಬಿಸಿ ಅಡುಗೆ ಮಾಡಲು ಸಾಧ್ಯವಾಗದೇ ಮುಂಚೆಯೇ ಮಾಡಿ ಇಡುತ್ತೇವೆ. ಈ ಹಿನ್ನೆಲೆ ಊಟ ಮಾಡುವಾಗ ಬಿಸಿಯಾಗಿರುವ ಅಡುಗೆ ತಿನ್ನುವ ಇಚ್ಛೆಯಿಂದ ಅದನ್ನು ಮತ್ತೆ ಮತ್ತೆ ಬಿಸಿ ಮಾಡುತ್ತೇವೆ. ಆದರೆ, ಈ ರೀತಿ ಪದೇ ಪದೇ ಬಿಸಿ ಮಾಡುವುದು ಅಪಾಯ ಎನ್ನುತ್ತಾರೆ ಪೌಷ್ಟಿಕ ತಜ್ಞರು.
ಒಮ್ಮೆ ಅನ್ನವನ್ನು ಮಾಡಿ, ಉಳಿದಾಗ ಅದೇ ಪಾತ್ರೆಯಲ್ಲಿ ಮತ್ತೆ ಬಿಸಿ ಮಾಡುತ್ತೇವೆ. ಬೆಂದ ಅನ್ನವನ್ನು ಪದೇ ಪದೇ ಬಿಸಿ ಮಾಡಿ ತಿನ್ನುವ ಅಭ್ಯಾಸ ನಿಮಗೆ ಇದ್ದರೆ, ಅದನ್ನು ಮಾಡಬೇಡಿ. ಈ ವೇಳೆ ಬ್ಯಾಕ್ಟೀರಿಯಾ ವಿಷಕಾರಿಯಾದ ಟಾಕ್ಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಜೊತೆಗೆ ಇದರಲ್ಲಿನ ಪೋಷಕಾಂಶಗಳು ಸಾಯುತ್ತವೆ.
ಹಸಿರು ತರಕಾರಿ ಮತ್ತು ಕ್ಯಾರೆಟ್ ಅನ್ನು ಸರಿಯಾಗಿ ಬೇಯಿಸದೇ ಮತ್ತೆ ಎರಡನೇ ಬಾರಿ ಅದನ್ನು ಬಿಸಿ ಮಾಡಿದರೆ, ಅದರಲ್ಲಿನ ಐರನ್, ಪೌಷ್ಟಿಕಾಂಶಗಳು ನಾಶವಾಗುತ್ತವೆ. ಇದರಿಂದ ನಮ್ಮ ದೇಹಕ್ಕೆ ಯಾವುದೇ ಪ್ರಯೋಜನ ಸಿಗುವುದಿಲ್ಲ. ಇದರಲ್ಲಿ ಬಿಡುಗಡೆಯಾಗುವ ಕಾರ್ಸಿನೋಜೆನಿಕ್ ಕ್ಯಾನ್ಸರ್ಗೆ ಕಾರಣವಾಗಬಹುದು. ಅಗತ್ಯವಿದ್ದರೆ, ನೀವು ಚೆನ್ನಾಗಿ ಕುದಿಸಿದ ನೀರಿನ ಪಾತ್ರೆಗೆ ತರಕಾರಿ ಹಾಕಿ, ಅದು ಬಿಸಿಯಾದ ಬಳಿಕ ಸೇವಿಸಬಹುದು.